ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(Chinnaswamy Stadium) ಮತ್ತೆ ಕ್ರೀಡಾ ಪಂದ್ಯಾವಳಿಗಳಿಗಳಿಗೆ ರಾಜ್ಯ ಸರ್ಕಾರ(State Government) ಅನುಮತಿ ನೀಡಿದ ಬೆನ್ನಲ್ಲೇ KSCAಗೆ ಕ್ರೀಡಾಂಗಣದಲ್ಲಿ ಕೆಲವು ಅತ್ಯಗತ್ಯ ಭದ್ರತಾ ಕ್ರಮಗಳನ್ನ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರು ಸೂಚಿಸಲು ನಿರ್ಧರಿಸಿದ್ದಾರೆ.

ಸ್ಟೇಡಿಯಂ ಬಳಿ ಕಾಲ್ತುಳಿತ ದುರಂತ ಸಂಭವಿಸಿದ ಬಳಿಕ ಪರಿಶೀಲನೆ ನಡೆಸಿದ್ದ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ಅವರ ನೇತೃತ್ವದ ತಜ್ಞರ ಸಮಿತಿ ನೀಡಿರುವ ಕೆಲ ಶಿಫಾರಸುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕೆಎಸ್ಸಿಎ ಆಡಳಿತ ಮಂಡಳಿಗೆ ಪೊಲೀಸರು ಸೂಚಿಸಲು ನಿರ್ಧರಿಸಿದ್ದಾರೆ.

ಈಗಾಗಲೇ ಕ್ರೀಡಾಂಗಣವನ್ನು ಪರಿಶೀಲಿಸಿ ಕೆಲ ಮಾರ್ಗಸೂಚಿ ನೀಡಲು ನಿರ್ಧರಿಸಲಾಗಿದ್ದು, ಭವಿಷ್ಯದಲ್ಲಿ ಆಯೋಜನೆಯಾಗಲಿರುವ ಐಪಿಎಲ್ ಸೇರಿದಂತೆ ಎಲ್ಲ ಪಂದ್ಯಗಳಿಗೆ ಮಾರ್ಗಸೂಚಿ ಸಿದ್ದವಾಗಿದೆ.

17 ಮಾರ್ಗಸೂಚಿಗಳ ವಿವರ ಈ ಕೆಳಗಿನಂತಿದೆ.
1. 33 ಸಾವಿರ ಸಾಮರ್ಥ್ಯದ ಕ್ರೀಡಾಂಗಣದ ಸುತ್ತ ಪಾರ್ಕಿಂಗ್ & ಪಿಕ್ ಅಂಡ್ ಡ್ರಾಪ್ ಗೆ ವ್ಯವಸ್ಥೆ ಮಾಡಬೇಕು
2. ಪ್ರವೇಶ ದ್ವಾರಗಳು ಫುಟ್ ಪಾತ್ ಗಳ ಮೇಲೆಯೇ ಇರೋದ್ರಿಂದ ಪ್ರೇಕ್ಷಕರು ಕ್ಯೂ ನಿಲ್ಲುವುದಕ್ಕೆ KSCA ಸ್ವತ್ತಿನಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕು.
3. ಕಿರಿದಾದ ಗೇಟ್ ಗಳನ್ನ ಕನಿಷ್ಠ 6 ಅಡಿ ಅಗಲ, ಉಬ್ಬು ತಗ್ಗು, ಮೆಟ್ಟಿಲುಗಳನ್ನ ಸರಿಪಡಿಸಿ, ಎಂಟ್ರಿ & ಎಕ್ಸಿಟ್ ಸುಲಭಗೊಳಿಸಬೇಕು
4. ಅಂತರಾಷ್ಟ್ರೀಯ ಪಂದ್ಯಾವಳಿಗಳ ವೇಳೆ ಮಹಿಳೆಯರು, ಮಕ್ಕಳ ಪ್ರವೇಶ & ನಿರ್ಗಮನಕ್ಕೆ ಪ್ರತ್ಯೇಕ ವ್ಯಸ್ಥೆ ಮಾಡಬೇಕು
5. ತುರ್ತು ಪರಿಸ್ಥಿತಿ ವೇಲೆ TRIAGE ನಿಯಮಗಳಂತೆ ಆಂಬ್ಯುಲೆನ್ಸ್, ವೈದ್ಯಕೀಯ, ಆಂಬ್ಯುಲೆನ್ಸ್ ಗೆ ಪ್ರತ್ಯೇಕ ಮಾರ್ಗ, ಮೆಡಿಕಲ್ ಎಮೆರ್ಜೆನ್ಸಿ ತಂಡಗಳ ಶಾಶ್ವತ ವ್ಯವಸ್ಥೆ ಮಾಡಬೇಕು

6. ಅಗ್ನಿಶಾಮಕ ದಳ & ವಿದ್ಯುತ್ ಇಲಾಖೆಯಿಂದ ಆಡಿಟ್ ಮಾಡಿಸಿ ವರದಿ ಪಡೆಯಬೇಕು
7. ಸುರಕ್ಷತೆ ದೃಷ್ಟಿಯಿಂದ ಯೂನಿಕ್ ಐಡಿ ಚೆಕಿಂಗ್, ಬಾಂಬ್ ನಿಷ್ಕ್ರೀಯ ದಳ, ಮೆಟಲ್ ಡಿಟೆಕ್ಟರ್ ಅಳವಡಿಸಿ ನುರಿತ ಸಿಬ್ಬಂದಿ ತರಬೇತಿ ಸಿಬ್ಬಂದಿ ನೇಮಕ ಮಾಡಬೇಕು
8. ಆಟಗಾರರಿಗೆ ಪ್ರತ್ಯೇಕವಾಗಿ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನ ಕಾಯ್ದಿರಸಬೇಕು
9. ತುರ್ತು ಪರಿಸ್ಥಿತಿ ವೇಳೆ ಸಾರ್ವಜನಿಕರಿಗೆ ಸೇಪ್ಟಿ ಪಾಯಿಂಟ್, ಸೇಫ್ ಎಕ್ಸಿಟ್ ಗೆ ಅಂತರಾಷ್ಟ್ರೀಯ ಮಾನದಂಡಗಳ ಯೋಜನೆ ತಯಾರಿಸಬೇಕು
10. ಪ್ರವೇಶ ದ್ವಾರಗಳ ಬಳಿ ಬ್ಯಾಗೇಜ್ ಸ್ಕ್ಯಾನರ್ ಗಳ ಅಳವಡಿಸಿ ಸಿಸಿಟಿವಿ ಕಣ್ಗಾವಲಿನಲ್ಲಿ ಧೀರ್ಘಾವಧಿ ಸ್ಟೋರೆಜ್ ವ್ಯವಸ್ಥೆ ಮಾಡಬೇಕು.

11. ಕೆಲಸಗಾರರು, ಸೆಕ್ಯೂರಿಟಿ ಗಾರ್ಡ್, ಮಳಿಗೆ ಇಡುವವರ ಬಗ್ಗೆ ಪೊಲೀಸ್ ವೆರಿಫಿಕೇಷನ್ ಸರ್ಟಿಫಿಕೇಟ್ ಜೊತೆ ಸೆಕ್ಯೂರಿಟಿ ಏಜೆನ್ಸಿಗಳ ಲೈಸೆನ್ಸ್ ಪಡೆಯಬೇಕು
12. ಪಂದ್ಯದ ವೇಳೆ ಒಳಗಡೆ ಮಾರಾಟ ಮಾಡುವ ತಿಂಡಿ, ತಿನಿಸುಗಳ ಪರಿಶೀಲನೆಗೆ ನಿರ್ದಿಷ್ಟ ಮಾನದಂಡ ನಿಗದಿಪಡಿಸಬೇಕು
13. ಸಾರ್ವಜನಿಕ ಸಾರಿಗೆ ಮೂಲಕ ಬರುವ ಪ್ರೇಕ್ಷಕರ ಪ್ರವೇಶ ಮತ್ತು ನಿರ್ಗಮನಕ್ಕೆ ಸರಿಯಾದ ವ್ಯವಸ್ಥೆ ಮಾಡಬೇಕು
14. ಅಂತರಾಷ್ಟ್ರೀಯ ಗುಣಮಟ್ಟದ ಗುಂಪು ನಿರ್ವಹಣೆ & ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಬೇಕು
15. ಪ್ರೇಕ್ಷಕರ ಪ್ರವೇಶ ಸಂಖ್ಯೆ ನಿಖರತೆಗಾಗಿ Real Time Crowd Flow Monitoring System ವ್ಯವಸ್ಥೆ ಮಾಡಬೇಕು

16. ಟಿಕೆಟ್ ವಿಚಾರಣೆ, ಮಾರಾಟ, ವೇಟಿಂಗ್ ಮಾಡುವರಿಗೆ ಪ್ರತ್ಯೇಕ ಸ್ಥಳಗಳನ್ನ ವ್ಯವಸ್ಥೆ ಮಾಡಬೇಕು
17. 2025ರ IPL ಭದ್ರತೆಯ ವೆಚ್ಚ 2.04 ಕೋಟಿ ರೂ.ಗಳನ್ನ ತಕ್ಷಣ ಪಾವತಿ ಮಾಡಬೇಕು ಎಂಬ ಷರತ್ತಿನೊಂದಿಗೆ ಈ ಮಾರ್ಗಸೂಚಿಗಳನ್ನ ಪಟ್ಟಿ ಮಾಡಲಾಗಿದ್ದು, ಶೀಘ್ರದಲ್ಲೇ ಕೆಎಸ್ಸಿಎ ಆಡಳಿತ ಮಂಡಳಿಗೆ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಇನ್ನು ಈ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯವನ್ನು ಬೆಂಗಳೂರಿನಲ್ಲೇ ನಡೆಸುವಂತೆ ಬಿಸಿಸಿಐಗೆ ಮನವಿ ಮಾಡಲಾಗಿದ್ದು, ಮಾತುಕತೆ ನಡೆಸಲಾಗುತ್ತಿದೆ ಎಂದು ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಇತ್ತೀಚಿಗೆ ತಿಳಿಸಿದ್ದರು. ರಾಜ್ಯ ಕ್ರಿಕೆಟ್ ಸಂಸ್ಥೆಯ ಮನವಿಗೆ ಬಿಸಿಸಿಐ ಸಹ ಸ್ಪಂದಿಸಿದ್ದು ಮೌಖಿಕವಾಗಿ ಸಮ್ಮತಿ ನೀಡಲಾಗಿದೆ ಎನ್ನಲಾಗುತ್ತಿದೆ.






