
ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಸಚಿವ ಮಹದೇವಪ್ಪ ಬ್ಯಾಟಿಂಗ್ ಮುಂದುವರೆಸಿದ್ದಾರೆ.ಆನೆ ಹೋಗುತ್ತಿರುತ್ತೆ, ನರಿಯೊಂದು ಕಾದು ಕುಳಿತಿರುತ್ತೆ.ಅದೇನೋ ಬೀಳುತ್ತೇ ಅಂಥ ನರಿ ಕಾಯ್ತಿರುತ್ತೆ.ಅದು ಬೀಳುವುದಿಲ್ಲ, ಆನೆ ನಡೆಯುವುದನ್ನು ನಿಲ್ಲಿಸುವುದಿಲ್ಲ ಅಂತ ವಿರೋಧ ಪಕ್ಷಗಳಿಗೆ ಟಾಂಗ್ ಕೊಟ್ಟ ಸಚಿವ ಡಾ ಹೆಚ್ ಸಿ ಮಹದೇವಪ್ಪ ಟಾಂಗ್ ನೀಡಿದ್ದಾರೆ.

ಸರ್ಕಾರಕ್ಕೆ ಯಾಕ್ರೀ ಸಮಸ್ಯೆ ಆಗುತ್ತೆ..ಸರ್ಕಾರ ಯಾಕೆ ಅಭದ್ರ ಆಗುತ್ತೆ.ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತದೆ. 7 ಕೋಟಿ ಜನ ಮತ ಹಾಕಿ ಬಂದಿರುವ ಸರ್ಕಾರ ಇದು.ಇದನ್ನು ಅಸ್ಥಿರವಾಗಿಸಲು ಹೇಗೆ ಸಾಧ್ಯ.ನಮ್ಮಲ್ಲಿ ಯಾವ ಬೆಳವಣಿಗೆಗಳು ನಡೆಯುತ್ತಿಲ್ಲ.

ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ತಪ್ಪಿಲ್ಲ. 5 ವರ್ಷ ಸಿದ್ದರಾಮಯ್ಯ ಸಿಎಂ ಆಗಿರ್ತಾರೆ.
ಮುಡಾ ಪ್ರಕರಣ ದಸರಾದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.ಈ ಬಾರಿ ವಿಜೃಂಭಣೆಯಿಂದ ದಸರಾ ಮಾಡುತ್ತೇವೆ ಅಂತ ಹೇಳಿದ್ರು.