ವಿಶಿಷ್ಟ ಕಾರ್ಯಕ್ರಮಗಳ ಮೂಲಕ ವೀಕ್ಷಕರ ಮನದಲ್ಲಿ ಅಚ್ಚಳಿಯದ ಸ್ಥಾನ ಗಿಟ್ಟಿಸಿರುವ ಸಿರಿಕನ್ನಡ ವಾಹಿನಿ ಹಾಸ್ಯ ದರ್ಬಾರ್ ಸೀಸನ್ 2 ಮತ್ತು ಕಿಲಾಡಿ ಕಿಡ್ಸ್ ಎಂಬ ಎರಡು ಹೊಸ ಕಾರ್ಯಕ್ರಮಗಳೊಂದಿಗೆ ಮತ್ತೆ ನಾಡಿನಾದ್ಯಂತ ಸಂಚಲನ ಮೂಡಿಸಲು ಸಿದ್ಧವಾಗಿದೆ.
ಸಿರಿಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮವಾಗಿದ್ದ ಹಾಸ್ಯ ದರ್ಬಾರ್ ಕಾರ್ಯಕ್ರಮ ವೀಕ್ಷಕರ ಒತ್ತಾಯದ ಮೇರೆಗೆ ಹೊಸ ರೂಪದಲ್ಲಿ ಹೊಸ ಸೀಸನ್ ಶುರುವಾಗುತ್ತಿದೆ. ಹಾಸ್ಯ ದರ್ಬಾರ್ ಸೀಸನ್ 2 ಕಾರ್ಯಕ್ರಮದಲ್ಲಿ, ಹಾಸ್ಯ ದಿಗ್ಗಜರಾದ ಪ್ರಾಣೇಶ್, ಪ್ರೊಫೆಸರ್ ಕೃಷ್ಣೇಗೌಡ, ಸುಧಾಬರಗೂರು, ರಿಚರ್ಡ್ ಲೂಯಿಸ್, ಮುಖ್ಯಮಂತ್ರಿ ಚಂದ್ರು, ಎಮ್ ಎಸ್ ನರಸಿಂಹಮೂರ್ತಿ , ಗುಂಡೂರಾವ್, ಮಿಮಿಕ್ರಿ ದಯಾನಂದ್ ಭಾಗವಹಿಸಲಿದ್ದು ಹಿರೇಮಗಳೂರು ಕಣ್ಣನ್ ನಡೆಸಿಕೊಡಲಿದ್ದಾರೆ.
ಹಾಸ್ಯ ದರ್ಬಾರ್ ಸೀಸನ್ 2 ವಿಭಿನ್ನ ರೀತಿಯಲ್ಲಿ ಅದ್ಧೂರಿ ಸೆಟ್ ನಲ್ಲಿ ಇದೇ ಆಗಸ್ಟ್ 28ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 8 ರಿಂದ 9 ಗಂಟೆಯ ವರೆಗೆ ಮೂಡಿಬರಲಿದೆ. ಈ ಕಾರ್ಯಕ್ರಮವು ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣಗೊಳ್ಳುತ್ತಿದ್ದು ಉಚಿತ ಇ ಪಾಸ್ ಗಳಿಗಾಗಿ ವಾಹಿನಿಯನ್ನು ಸಂಪರ್ಕಿಸಬಹುದು ಎಂದು ವಾಹಿನಿ ಮುಖ್ಯಸ್ಥರಾದ ರಾಜೇಶ್ ರಾಜಘಟ್ಟ ತಿಳಿಸಿದ್ದಾರೆ.
ಪುಟಾಣಿ ಮಕ್ಕಳ ಪವರ್ ಫುಲ್ ಎಂಟರ್ಟೈನ್ಮೆಂಟ್ ಶೋ ಲಿಟಲ್ ಕಿಲಾಡೀಸ್ ಸೋಮವಾರದಿಂದ ಶುಕ್ರವಾರ ಸಂಜೆ 6 ಗಂಟೆಗೆ ಮೂಡಿ ಬರಲಿದೆ. ಈ ಕಾರ್ಯಕ್ರಮವನ್ನು ಮೊಟ್ಟ ಮೊದಲ ಬಾರಿಗೆ ಅದ್ಧೂರಿ ಸೆಟ್ ನಲ್ಲಿ ವಿಭಿನ್ನ ಪರಿಕಲ್ಪನೆಯೊಂದಿಗೆ ರೂಪಿಸಲಾಗಿದ್ದು ಒಂದು ವಾರಗಳ children ಚಾಂಪಿಯನ್ ಸಿರೀಸ್ ಮನರಂಜನೆಯ ಹಬ್ಬವನ್ನೇ ನಿಮ್ಮ ಮುಂದೆ ತರಲಿದೆ.
ಇದರೊಂದಿಗೆ ವೀಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸಿ 100 ನೇ ಸಂಚಿಕೆಯತ್ತ ಮುನ್ನುಗ್ಗುತ್ತಿರುವ ಊರ್ಮಿಳ ಧಾರಾವಾಹಿಯು ಬದಲಾದ ಸಮಯದಲ್ಲಿ ರಾತ್ರಿ 7 ಗಂಟೆಗೆ ಮೂಡಿಬರಲಿದ್ದು ಇದರೊಂದಿಗೆ ಎಂದಿನಂತೆ ದೈನಂದಿನ ಧಾರಾವಾಹಿಗಳು ವಿಭಿನ್ನ ಕಾರ್ಯಕ್ರಮಗಳು ಜನಪ್ರಿಯ ಚಲನಚಿತ್ರಗಳು ಸಿರಿಕನ್ನಡದ ಕಿರುಪರದೆಯನ್ನು ಅಲಂಕರಿಸಲಿದ್ದು ಎಂದಿನಂತೆ ವೀಕ್ಷಕರ ಪ್ರೋತ್ಸಾಹ ವಾಹಿನಿಗೆ ಇರಲಿ ಎಂದು ಸಿರಿಕನ್ನಡ ವಾಹಿನಿಯ ಸಂಸ್ಥಾಪಕ ನಿರ್ದೇಶಕರಾದ ಸಂಜಯ್ ಶಿಂಧೆ ಹಾಗೂ ರಾಜೇಶ್ ರಾಜಘಟ್ಟ ಮನವಿ ಮಾಡಿಕೊಂಡಿದ್ದಾರೆ.
ಸಿರಿ ಕನ್ನಡ ವಾಹಿನಿಯಲ್ಲಿ ಹೊಚ್ಚ ಹೊಸ ಶೋಗಳು ಶುರುವಾಗುತ್ತಿದ್ದು ಜೊತೆಗೆ ವಾಹಿನಿಯನ್ನು ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ನೋಡುವ ವೀಕ್ಷಕರಿಗೆ ಚಿನ್ನ ಬೆಳ್ಳಿ ಗೆಲ್ಲುವ ಸುವರ್ಣಾವಕಾಶ. ಇದಕ್ಕೆ ಕಷ್ಟಕರ ಪ್ರಶ್ನೆಗಳಿಗೆ ಉತ್ತರಿಸುವ ಗೋಜಲಿಲ್ಲ. ಚಿನ್ನ ಬೆಳ್ಳಿ ಗೆಲ್ಲುವುದು ಅತ್ಯಂತ ಸುಲಭ. ಸಿರಿ ಕನ್ನಡ ವೀಕ್ಷಿಸುವ ಅದೃಷ್ಟವಂತ ವೀಕ್ಷಕರಿಗೆ ಚಿನ್ನ ಅಥವಾ ಬೆಳ್ಳಿ ಸಿಗುವುದು ನಿಶ್ಚಿತ.