ಹಾಸನದ (Hasan) ಮೊಸಳೆಹೊಸಳ್ಳಿ ಗಣಪತಿ ಮೆರವಣಿಗೆ (Ganesha procession) ವೇಳೆ ರಸ್ತೆ ಅಪಘಾತದಲ್ಲಿ 10 ಮಂದಿ ದುರ್ಮಣ ಹೊಂದಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಮೃತಪಟ್ಟ ವಿದ್ಯಾರ್ಥಿಗಳ ಮನೆಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (HD Devegowda) ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.

ಹಾಸನ ತಾಲೂಕಿನ ಡನಾಯಕನಹಳ್ಳಿ ಮೃತ ಯುವಕ ಈಶ್ವರ್ ಹಾಗೂ ಮತ್ತೋರ್ವ ಮೃತ ವಿದ್ಯಾರ್ಥಿ ಮುತ್ತಿಗೆ ಹಿರೆಹಳ್ಳಿ ಗೋಕುಲ್ ಪೋಷಕರನ್ನ ದೇವೇಗೌಡರು ಭೇಟಿಯಾಗಿ ತಂದೆ ತಾಯಿ ಸಂಪತ್ ಕುಮಾರ್ ಹಾಗೂ ಗಾಯಿತ್ರಿಗೆ ದೈರ್ಯ ಹೇಳಿದ್ದಾರೆ.

ಈ ವೇಳೆ ನನ್ನ ಮಗನನ್ನ ಕೂಲಿ ಮಾಡಿ ಓದಿಸುತ್ತಿದೆ ,ಸೈನ್ಸ್ ಓದುತಿದ್ದ.ಮೃತ ಈಶ್ವರ್ ಹಾಗೂ ನನ್ನ ಮಗ ಗೊಕುಲ್ ಇಬ್ಬರು ಒಟ್ಟಿಗೆ ಸ್ನೇಹಿತರು ಜೊತೆ ಜೊತೆ ಇದ್ರು ಜೊತೆನೇ ಸಾವನ್ನಪ್ಪಿದ್ರು. ನನಗೆ ಇನ್ಯಾರು ಗತಿ, ನಮ್ಮ ಗತಿ ಏನು ಎಂದು ಕುಟುಂಬ ದೇವೇಗೌಡರ ಬಳಿ ದುಃಖ ತೋಡಿಕೊಂದಿದ್ದಾರೆ.
ಈ ವೇಳೆ ಗೋಕುಲ್ ತಂಗಿ ಓದಿಸುವ ಸಂಪೂರ್ಣ ಜವಾಬ್ದಾರಿ ನಮಗೆ ಬಿಡಿ ಅವಳು ಎಷ್ಟು ಓದುತ್ತಾಳೋ ಅದರ ಆರ್ಥಿಕ ಜವಾಬ್ದಾರಿ ನಮ್ಮದು, ಬೇರೆ ಏನೇ ಸಮಸ್ಯೆಗಳಿದ್ದರೂ ನಮಗೆ ತಿಳಿಸಿ ಎಂದು ದೇವೇಗೌಡರು ಭರವಸೆ ನೀಡಿದ್ದಾರೆ.



