ನಾಳೆಯಿಂದ (24/10/2024) ಶಕ್ತಿ ದೇವತೆ ಹಾಸನಾಂಬೆ (Hasanambe) ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಒಂದು ವರ್ಷದ ಬಳಿಕ ಹಾಸನಾಂಬೆ ದೇವಾಲಯದ ಗರ್ಭ ಗುಡಿಯ ಬಾಗಿಲನ್ನು ನಾಳೆ ಮಧ್ಯಾಹ್ನ ೧೨ ಗಂಟೆಗೆ ತೆರೆಯಲಾಗುತ್ತಿದೆ.

ಇಲ್ಲಿನ ದೇವಸ್ಥಾನದಲ್ಲಿ ಹುತ್ತದ ರೂಪದಲ್ಲಿ ನೆಲೆಸಿರುವ ಶಕ್ತಿದೇವತೆ ಹಾಸನಾಂಬೆ ದೇವಿ ದರ್ಶನ ಲಭಿಸುವುದು ವರ್ಷಕ್ಕೆ ಒಮ್ಮೆ ಮಾತ್ರ. ಪ್ರತೀ ವರ್ಷ ಅಶ್ವಯುಜ ಮಾಸದ ಅಷ್ಟಮಿಯಂದು ದೇಗುಲದ ಬಾಗಿಲು ಓಪನ್ ಮಾಡಲಾಗುತ್ತದೆ.
ಅದೇ ರೀತಿಯಾಗಿ ಈ ವರ್ಷ ಅ. 24ರ ಮಧ್ಯಾಹ್ನ ೧೨ ಗಂಟೆಗೆ ಮುಹೂರ್ತ ನಿಗದಿಯಾಗಿದ್ದು, ಹಾಸನಾಂಬೆ ದೇಗುಲದ ಬಾಗಿಲು ತೆರೆಯಲಿದೆ. ಒಟ್ಟು 9 ದಿನಗಳ ಕಾಲ ಭಕ್ತರಿಗೆ ದರ್ಶನಕ್ಕೆ ಅವಕಾಶವಿದ್ದು, ನ. 3ಕ್ಕೆ ಮಧ್ಯಾಹ್ನ 12ಕ್ಕೆ ಗರ್ಭಗುಡಿ ಬಾಗಿಲನ್ನು ಮತ್ತೆ ಮುಚ್ಚಲಾಗುತ್ತದೆ. ಲಕ್ಷಾಂತರ ಭಕ್ತರು ಬರುವ ನಿರೀಕ್ಷೆಯಿದ್ದು ಜಿಲ್ಲಾಡಳಿತ ಸಕಲ ಸಿದ್ಧತೆಯಲ್ಲಿ ತೊಡಗಿದೆ.