ವರ್ಷಕ್ಕೆ ಒಮ್ಮೆ ದರ್ಶನ ನೀಡು ಹಾಸನದ ಹಾಸನಾಂಬೆ ದೇವಿಯ (Hasanambe temple) ಸಾರ್ವಜನಿಕ ದರ್ಶನಕ್ಕೆ ಇಂದು ಕಡೆಯ ದಿನವಾಗಿದ್ದು 9 ದಿನಗಳ ಬಳಿಕ ನಾಳೆ ದೇಗುಲ ಬಂದ್ ಆಗಲಿದೆ. ಹೀಗಾಗಿ ಇಂದು ದೀಪಾವಳಿ (Deepavali) ದಿನವೂ ದೇವಿಯ ದರ್ಶನಕ್ಕೆ ಅಪಾರ ಭಕ್ತಗಣ ಆಗಮಿಸುತ್ತಿದೆ.

ಈಗಾಗಲೇ ಧರ್ಮದರ್ಶನದ ಸಾಲುಗಳು ಸಂಪೂರ್ಣ ಭರ್ತಿಯಾಗಿವೆ. ರಾತ್ರಿ 12 ಗಂಟೆಗೆ ನೈವೇದ್ಯಕ್ಕಾಗಿ ಬಾಗಿಲು ಮುಚ್ಚಿದ್ದ ದೇಗುಲ ಮತ್ತೆ ಮುಂಜಾನೆ 4 ಗಂಟೆಯಿಂದ ದರ್ಶನ ಆರಂಭವಾಗಿದೆ.
ನಿನ್ನೆಯಿಂದ ವಿವಿಐಪಿ ವಿಐಪಿ (VIP pass) ಪಾಸ್‌ಗಳನ್ನು ರದ್ದು ಮಾಡಲಾಗಿದ್ದು ನಾಳೆ ಮುಂಜಾನೆ 4 ಗಂಟೆವರೆಗೆ ನಿರಂತವಾಗಿ ದೇವಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಾಳೆ ಮದ್ಯಾಹ್ನ 12 ಗಂಟೆ ನಂತರ ಹಾಸನಾಂಬೆ ಗರ್ಭಗುಡಿಯ ದೇಗುಲ ಬಂದ್ ಆಗಲಿದೆ.











