![](https://pratidhvani.com/wp-content/uploads/2024/05/FB_IMG_1716651022927-819x1024.jpg)
ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಸ್ಟಾಂಕೋವಿಕ್ (Natasa Stankovic) ಈಗ ಸುದ್ದಿಯಲ್ಲಿದ್ದಾರೆ. ಅವರು ಮತ್ತು ಹಾರ್ದಿಕ್ ಈಗಾಗಲೇ ಪರಸ್ಪರ ಒಪ್ಪಂದದಿಂದ ಬೇರ್ಪಟ್ಟಿದ್ದಾರೆ ಎಂದು ಸಾಕಷ್ಟು ವದಂತಿಗಳಾಗಿವೆ.
![](https://pratidhvani.com/wp-content/uploads/2024/05/FB_IMG_1716651016206-768x1024.jpg)
ಈ ಗಾಸಿಪ್ ಸುದ್ದಿಯ ಬೆಂಕಿಗೆ ಹೆಚ್ಚಿನ ತುಪ್ಪ ಸುರಿಯುವಂತೆ ಅವರು ಬಾಲಿವುಡ್ ಉದಯೋನ್ಮುಖ ನಟಿ ದಿಶಾ ಪಟಾನಿ ಅವರ ಬಾಯ್ಫ್ರೆಂಡ್ ಎಂದು ಹೇಳಿಕೊಳ್ಳಲಾಗುತ್ತಿರುವ ವ್ಯಕ್ತಿಯ ಜತೆ ಕಾಣಿಸಿಕೊಂಡಿದ್ದಾರೆ. ಅವರಿಬ್ಬರೂ ಸಾರ್ವಜನಿಕಗಾಗಿ ಹೋಗುತ್ತಿರುವ ವಿಡಿಯೊ ವೈರಲ್ ಆಗಿದ್ದು ಕ್ಯಾಮೆರಾಮನ್ಗಳು ಅವರಿಬ್ಬರ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.
![](https://pratidhvani.com/wp-content/uploads/2024/05/Natasa-1.jpg)
ಅಲೆಕ್ಸಾಂಡರ್ ಅಲೆಕ್ಸ್ಲಿಕ್ ಮತ್ತು ನತಾಶಾ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾಮೆನ್ ಗೆ ನತಾಶಾ ಪೋಸ್ ನೀಡಿದ್ದಾರೆ. ಹೀಗಾಗಿ ಪಾಂಡ್ಯಾ ಜತೆಗಿನ ಡೈವೋರ್ಸ್ ಪ್ರಕರಣವನ್ನು ಇನ್ನಷ್ಟು ಆಸಕ್ತಿದಾಯಕವಾಗಿದೆ. ಐಪಿಎಲ್ 2024 ರಲ್ಲಿ ಹಾರ್ದಿಕ್ ತಮ್ಮ ಉನ್ನತ ನಿರೀಕ್ಷೆಗಳಿಗೆ ತಕ್ಕ ಹಾಗೆ ಆಡಿಲ್ಲ. ಪತಿ ಸೋಲುತ್ತಿದ್ದರೂ ಒಂದೇ ಒಂದು ಬಾರಿಯೂ, ನತಾಶಾ ತಮ್ಮ ಪತಿಯ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸ್ಟ್ಯಾಂಡ್ಗಳಿಗೆ ಬಂದಿರಲಿಲ್ಲ.