ಗ್ವಾಲಿಯರ್: ಚ್ಯುಯಿಂಗ್ ಗಮ್ ಜಗಿಯುತ್ತಾ ಬ್ಯಾಟ್ ಸ್ವಿಂಗ್ ಮಾಡಿ ವಿಚಿತ್ರ ಶಾಟ್ ಹೊಡೆದ ಹಾರ್ದಿಕ್ ಪಾಂಡ್ಯ ಬಾಂಗ್ಲಾದೇಶದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಗೇ ಟಾಂಗ್ ಕೊಟ್ಟರಾ ಎಂಬ ಸಂಶಯ ಮೂಡುತ್ತಿದೆ.
ರೋಹಿತ್ ಶರ್ಮಾ ಟಿ20 ಕ್ರಿಕೆಟ್ ನಿಂದ ನಿವೃತ್ತರಾದ ಮೇಲೆ ಹಾರ್ದಿಕ್ ಪಾಂಡ್ಯ ನಾಯಕರಾಗಬಹುದು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಅಚ್ಚರಿಯೆಂಬಂತೆ ಸೂರ್ಯಕುಮಾರ್ ನಾಯಕರಾದರು. ಇದರ ಹಿಂದಿನ ಕಾರಣಗಳು ಏನೇ ಇರಬಹುದು. ಆದರೆ ಸಹಜವಾಗಿಯೇ ಇದು ಹಾರ್ದಿಕ್ ಗೆ ಎಲ್ಲೋ ಅಸಮಾಧಾನಕ್ಕೆ ಕಾರಣವಾಗಿರುತ್ತದೆ.
ಇದೀಗ ಸೂರ್ಯಕುಮಾರ್ ನಾಯಕತ್ವದಲ್ಲಿ ಹಾರ್ದಿಕ್ ಸಾಮಾನ್ಯ ಆಟಗಾರನಾಗಿ ಆಡುತ್ತಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಅಬ್ಬರದ 39 ರನ್ ಗಳಿಸಿದರು. ಅವರ ಇನಿಂಗ್ಸ್ ನಲ್ಲಿ ಭರ್ಜರಿ ಹೊಡೆತಗಳೂ ಸೇರಿತ್ತು. ಅದರಲ್ಲೂ ಒಂದು ಶಾಟ್ ಅಂತೂ ಇದು ಯಾವ ಪರಿ ಶಾಟ್ ಎಂದು ವೀಕ್ಷಕರು ಅಚ್ಚರಿಗೊಳಪಡುವಂತೆ ಮಾಡಿತು.
ಒಂಥರಾ ಸೂರ್ಯಕುಮಾರ್ ಯಾದವ್ ಶೈಲಿಯಲ್ಲೇ ಬ್ಯಾಟ ಸ್ವಿಂಗ್ ಮಾಡಿ ಹೆಚ್ಚು ಶ್ರಮಪಡದೇ ವಿಕೆಟ್ ಕೀಪರ್ ಹಿಂದುಗಡೆ ಚೆಂಡು ತಳ್ಳಿ ಬೌಂಡರಿ ಗಿಟ್ಟಿಸಿದರು. ಅವರ ಈ ಹೊಡೆತ ಎಲ್ಲರೂ ಅಚ್ಚರಿಪಡುವಂತೆ ಮಾಡಿತು. ಸಾಮಾನ್ಯವಾಗಿ ಬ್ಯಾಟಿಂಗ್ ಮಾಡುವಾಗ ಸೂರ್ಯ ಚ್ಯುಯಿಂಗ್ ಗಮ್ ಜಗಿಯುತ್ತಿರುತ್ತಾರೆ. ಇದೀಗ ಹಾರ್ದಿಕ್ ಕೂಡಾ ಚ್ಯುಯಿಂಗ್ ಗಮ್ ಜಗಿಯುತ್ತಾ ಸೂರ್ಯ ಶೈಲಿಯಲ್ಲೇ ಆ ಶಾಟ್ ಹೊಡದಿದ್ದಾರೆ. ಇದಕ್ಕೆ ಫ್ಯಾನ್ಸ್ ಸೂರ್ಯಗೆ ಟಾಂಗ್ ಕೊಡಲೆಂದೇ ಹಾರ್ದಿಕ್ ಈ ರೀತಿ ಮಾಡಿದ್ದಾರೆ ಎಂದು ಅಭಿಪ್ರಾಯಪಡುತ್ತಿದ್ದಾರೆ.
No one noticed this !!
— JAISH 𝕏 (@i_boulti) October 7, 2024
Hardik Pandya mocking SKY with a chewing gum action 😭😭
pic.twitter.com/zYmpXQKEoc