
ಪ್ರಭಾಸ್ ಬಗ್ಗೆ ತಿಳಿದಿರಲೇಬೇಕಾದ 5 ವಿಷಯಗಳು
ನಟ ಪ್ರಭಾಸ್ ಸದ್ಯ ಪ್ಯಾನ್ ಇಂಡಿಯಾ ಹೀರೋ. ಸಾಲು ಸಾಲು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡುವ ಮೂಲಕ ಬಹುಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಇನ್ನೇನು ಬರ್ತಡೇ (ಅ.23) ಆಚರಿಸಿಕೊಳ್ಳಲಿದ್ದಾರೆ ಪ್ರಭಾಸ್. ಅವರ ಬರ್ತಡೇ ಕೇವಲ ತೆಲುಗು ಭಾಷಿಕ ರಾಜ್ಯಗಳಿಗೆ ಸೀಮಿತವಾಗಿಲ್ಲ. ಇಡೀ ಭಾರತ, ಇಡೀ ವಿಶ್ವ ಸೆಲೆಬ್ರೇಟ್ ಮಾಡಲು ಮುಂದಾಗಿದೆ.
ಪ್ರಭಾಸ್ ಅವರ ಪ್ರತಿ ಸಿನಿಮಾ ಅವರ ಅಭಿಮಾನಿ ವಲಯದಲ್ಲಿ ಒಂದು ಉತ್ಸವವಾಗುತ್ತದೆ, ಪ್ರತಿ ಶೋ ಸೆನ್ಸೆಷನ್ ಸೃಷ್ಟಿಸುತ್ತದೆ. ಈ ಅಸಾಮಾನ್ಯ ಸೂಪರ್‌ಸ್ಟಾರ್ ಬಗ್ಗೆ ಬರ್ತಡೇ ಪ್ರಯುಕ್ತ ನೀವು ತಿಳಿದುಕೊಳ್ಳಲೇಬೇಕಾದ ಐದು ವಿಷಯಗಳು ಇಲ್ಲಿವೆ.
1.ಪ್ಯಾನ್ ಇಂಡಿಯನ್ ಸೂಪರ್‌ಸ್ಟಾರ್
ಸದ್ಯ ಭಾರತದಲ್ಲಿ ಯಶಸ್ವಿ ಪ್ಯಾನ್ ಇಂಡಿಯನ್ ಹೀರೋ ಯಾರು ಎಂದರೆ, ಮೊದಲಿಗೆ ಬರುವ ಹೆಸರೇ ಪ್ರಭಾಸ್ ಅವರದ್ದು. ಸಾವಿರ ಸಾವಿರ ಕೋಟಿ ಬಾಚಿಕೊಂಡ ಅವರ ಸಿನಿಮಾಗಳೇ ಉದಾಹರಣೆ.
2. ಈ ತಿಂಗಳು ಪ್ರಭಾಸ್‌ಗೆ ಸೇರಿದ್ದು
ಪ್ರತಿ ವರ್ಷ, ಅಕ್ಟೋಬರ್ ತಿಂಗಳು ಬಂತೆಂದರೆ, ಅವರ ಫ್ಯಾನ್ಸ್ ದೃಷ್ಟಿ ಪ್ರಭಾಸ್ ಸಿನಿಮಾಗಳ ಮೇಲಿರುತ್ತೆ. ಟೀಸರ್, ಟ್ರೇಲರ್, ಪೋಸ್ಟರ್ ಗಳ ಮೂಲಕ ಸರ್ಪೈಸ್ ನೀಡುತ್ತಲೇ ಇರುತ್ತಾರೆ. ಬರ್ತಡೇ ಪ್ರಯುಕ್ತ ಪ್ರಭಾಸ್ ಅವರ ಹಲವು ಸಿನಿಮಾಗಳು ಈ ವರ್ಷವೂ ಮರು-ಬಿಡುಗಡೆ ಆಗಲಿವೆ. ಆ ಪೈಕಿ ಸಲಾರ್, ಈಶ್ವರ್, ಮತ್ತು ಪೌರ್ಣಮಿ ಅಕ್ಟೋಬರ್ 23 ರಂದು ಬಿಡುಗಡೆ ಆಗಲಿದ್ದು, ಬಾಹುಬಲಿ: ದಿ ಎಪಿಕ್ ಅಕ್ಟೋಬರ್ 31 ರಂದು ತೆರೆಗೆ ಬರಲಿದೆ.

3. ದೊಡ್ಡ ಪರದೆಯ ಆಚೆಗೆ
ಕೇವಲ ಪ್ಯಾನ್ ಇಂಡಿಯನ್ ಸ್ಟಾರ್ ಆಗದೇ, ತೆರೆ ಹಿಂದೆ ಮೌನವಾಗಿಯೇ ಸಾಕಷ್ಟು ಜನಪರ ಕಾರ್ಯಗಳನ್ಮೂ ಪ್ರಭಾಸ್ ಮಾಡಿತ್ತಿದ್ದಾರೆ. ತೆರೆಯ ಮೇಲೆ ಸೂಪರ್‌ಸ್ಟಾರ್ ಮತ್ತು ತೆರೆಯ ಆಚೆಗಿನ ಉದಾತ್ತ ವ್ಯಕ್ತಿ, ಅಭಿಮಾನಿಗಳಿಂದ ಆಳವಾಗಿ ಪ್ರೀತಿಸಲ್ಪಟ್ಟ ಮತ್ತು ಗೌರವಿಸಲ್ಪಟ್ಟ ಆತ್ಮವಾಗಿದ್ದಾರೆ.
4. ಮೆಗಾ ಲೈನ್-ಅಪ್, ಬತ್ತಳಿಕೆಯಲ್ಲಿವೆ ಬಿಗ್ ಸಿನಿಮಾಗಳು
ಪ್ರಭಾಸ್ ಅವರ ಮುಂದೆ ಅತ್ಯಾಕರ್ಷಕ ಚಿತ್ರಗಳ ದೊಡ್ಡ ಸಾಲೇ ಇದೆ. ಅವರ ಮುಂಬರುವ ಬಿಡುಗಡೆಗಳಲ್ಲಿ ದಿ ರಾಜಾ ಸಾಬ್ (ಜನವರಿ 9, 2026), ಸಲಾರ್: ಪಾರ್ಟ್ 2 – ಶೌರ್ಯಾಂಗ ಪರ್ವ, ಸ್ಪಿರಿಟ್, ಕಲ್ಕಿ 2898 AD: ಪಾರ್ಟ್ 2, ಮತ್ತು ಫೌಜಿ ಸಿನಿಮಾಗಳು ಪ್ರಭಾಸ್ ಅವರ ಬತ್ತಳಿಕೆಯಲ್ಲಿವೆ.
5. 1000 ಕೋಟಿ ಬಾಕ್ಸ್ ಆಫೀಸ್ ಶಕ್ತಿ
ಬಾಹುಬಲಿಯಂತಹ ಚಿತ್ರಗಳು ಪ್ರಭಾಸ್ ಗೆ ಪ್ಯಾನ್ ಇಂಡಿಯನ್ ನಾಯಕನ ಪಟ್ಟ ನೀಡಿವೆ. ಭಾರತ ಮಾತ್ರವಲ್ಲದೆ, ಜಾಗತಿಕವಾಗಿಯೂ ಸ್ಟಾರ್ ಆಗಿ ಬೆಳೆದಿದ್ದಾರೆ. ಕಲ್ಕಿ 2898 AD ಮತ್ತು ಬಾಹುಬಲಿಯಂತಹ ಸಿನಿಮಾಗಳು ಸತತವಾಗಿ ₹1000 ಕೋಟಿ ಗಡಿ ದಾಟುವುದರೊಂದಿಗೆ ಸ್ಟಾರ್ ಡಮ್ ಹೆಚ್ಚಿಸಿವೆ. ನಿರ್ಮಾಪಕರ ಪಾಲಿನ ಅಕ್ಷಯಪಾತ್ರೆಯಾಗಿದ್ದಾರೆ.