
ಬೆಂಗಳೂರಿನ ವ್ಯಕ್ತಿ ಬಳಿ ಹ್ಯಾಂಡ್ ಗ್ರೆನೇಡ್ ಪತ್ತೆ ಆಗಿದೆ.. ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಬ್ದುಲ್ ರೆಹಮಾನ್ ಎಂಬಾತನ ಬ್ಯಾಗ್ನಲ್ಲಿ ಹ್ಯಾಂಡ್ ಗ್ರೆನೇಡ್ ಪತ್ತೆ ಆಗಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಪೊಲೀಸರು. ನನಗೆ ಗೊತ್ತಿಲ್ಲ, ರಸ್ತೆ ಬದಿ ಸಿಕ್ಕಿತ್ತು ಎಂದು ಪೊಲೀಸರ ಬಳಿ ಹೇಳಿಕೆ ನೀಡಿದ್ದಾನೆ ಆರೋಪಿ. ಆರೋಪಿ ಅಬ್ದುಲ್ ರೆಹಮಾನ್ ವಶಕ್ಕೆ ಪಡೆದಿರೋ ಸಂಪಿಗೆಹಳ್ಳಿ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಪಿಗೆಹಳ್ಳಿಯಲ್ಲಿ ಹ್ಯಾಂಡ್ ಗ್ರೆನೇಡ್ ಪತ್ತೆ ಪ್ರಕರಣದಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕುಪೇಂದ್ರ ಠಾಣೆಗೆ ದೂರು ನೀಡಿದ್ದಾರೆ. ಬೆಳಗ್ಗೆ ಬಂದ ಮಾಹಿತಿ ಪ್ರಕಾರ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ ಪಿಎಸ್ಐ, ಹೋಟೆಲ್ ಮಾಲೀಕರ ಬಳಿ ಮೊದಲು ಮಾಹಿತಿ ಪಡೆದು, ತಕ್ಷಣ ಅಬ್ದುಲ್ ರೆಹಮಾನ್ ಬ್ಯಾಗ್ ಪರಿಶೀಲನೆ ನಡೆಸಿದ್ದಾರೆ. ಆ ವೇಳೆ ಬ್ಯಾಗ್ನಲ್ಲಿ ಗ್ರೆನೇಡ್ ಪತ್ತೆಯಾಗಿದೆ. ತಕ್ಷಣ ವಶಕ್ಕೆ ಪಡೆದಿದ್ದಾರೆ ಪೊಲೀಸರು. ಇದರ ಬಗ್ಗೆ ಮಾಹಿತಿ ಕೇಳಿದಾಗ ಭಯ ಪಟ್ಟು ಮಾಹಿತಿ ನೀಡಿದ್ದಾನೆ ಅಬ್ಧುಲ್ ರೆಹಮಾನ್. ತಕ್ಷಣ ಆರೋಪಿ ಹಾಗೂ ಸ್ಫೋಟಕವನ್ನ ವಶಪಡಿಸಿಕೊಂಡಿದ್ದಾರೆ.
ಕೋಗಿಲು ಕ್ರಾಸ್ ಬಳಿಯ ಬೆಳ್ಳಳ್ಳಿ ನಿವಾಸಿಯಾಗಿರುವ ಅಬ್ಧುಲ್ ರೆಹಮಾನ್, ವೈಭವ್ ಹೋಟೆಲ್ನಲ್ಲಿ ಕೆಲಸಕ್ಕೆ ಸೇರಿದ್ದ. ಎರಡು ದಿನದ ಹಿಂದೆ ಕೆಲಸಕ್ಕೆ ಸೇರಿದ್ದ ಈತ ಆತ ತಾನು ಬೆಳ್ಳಹಳ್ಳಿಯ ನಿವಾಸಿ ಎಂದು ಹೇಳಿಕೊಂಡಿದ್ದ. ಹೋಟೆಲ್ ಸಪ್ಲೆಯರ್ ಕೆಲಸಕ್ಕೆ ಸೇರಿದ ಈತನಿಂದ ಹೋಟೆಲ್ನವರು ಆಧಾರ್ ಕಾರ್ಡ್ ಕೇಳಿದ್ದಾರೆ.. ಆದ್ರೆ ಆತ ಕಾರ್ಡ್ ಕೇಳಿದಾಗ ಕೊಟ್ಟಿಲ್ಲಾ. ಎರಡು ದಿನ ಆಧಾರ್ ಕಾರ್ಡ್ ಕೇಳಿದಾಗ ಕೊಟ್ಟಿಲ್ಲ ಎಂದು ವಾಸವಿದ್ದ ಶೆಡ್ನಲ್ಲಿ ಬ್ಯಾಗ್ ಚೆಕ್ ಮಾಡಿದಾಗ ಬ್ಯಾಗ್ನಲ್ಲಿ ಹ್ಯಾಂಡ್ ಗ್ರೆನೇಡ್ ಸಿಕ್ಕಿದೆ ಎನ್ನಲಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಅರೆಸ್ಟ್ ಮಾಡಿಸಿದ್ದಾರೆ.