ಕಡು ಬಡವರು ಹಾಗೂ ಕೂಲಿ ಕಾರ್ಮಿಕ ವರ್ಗದ ಮೆಚ್ಚಿನ ಆಹಾರ ತಾಣವಾಗಿ ಒಂದು ಕಾಲದಲ್ಲಿ ಮಿಂಚಿದ್ದ ಇಂದಿರಾ ಕ್ಯಾಂಟೀನ್ಗಳು ಕ್ರಮೇಣ ತಮ್ಮ ಕಳೆ ಕಳೆದುಕೊಳ್ಳುತ್ತಿದೆ. ಕಳಪೆ ಆಹಾರ ಗುಣಮಟ್ಟ ಒಂದು ಕಡೆಯಾದರೆ, ಸರ್ಕಾರದಿಂದ ಯಾವುದೇ ಅನುದಾನ ಇಲ್ಲ ಎನ್ನುವ ಕೂಗು ಮತ್ತೊಂದೆಡೆ. ಈ ನಡುವೆ ಇಂದಿರ್ ಕ್ಯಾಂಟಿನ್ ಗೆ ಬರುವರ ಸಂಖ್ಯೆ ಶೇ.50 ರಷ್ಟು ಕಡಿಮೆಯಾಗಿದೆ. ಈ ನಡುವೇ ಯೋಜನೆಯನ್ನು ಜನ ಮಾನಸದಿಂದ ದೂರಗೊಳಿಸುವ ಬಿಜೆಪಿ ಹುನ್ನಾರ ನಡೆಸುತ್ತಿದೆ ಎಂಬ ಆರೋಪ ರಾಜಕೀಯ ವಲಯಗಳಿ೦ದ ಕೇಳಿ ಬಂದಿದೆ.
ಕ್ಯಾಂಟೀನ್ ಮುಚ್ಚಲು ವ್ಯವಸ್ಥಿತ ಪಿತುರಿ ನಡೆಸುತ್ತಿದ್ದೆಯೇ ಬಿಜೆಪಿ!
ಒಂದು ಕಾಲದಲ್ಲಿ ಮಾಜಿ ಸಿಎಂ ಸಿದ್ದರಾಮಾಯ್ಯನವರ ಕನಸಿನ ಕೂಸು ಎಂದೆ ಬಿಂಬಿತವಾಗಿದ ಇಂದಿರಾ ಕ್ಯಾಂಟೀನ್ ಇಂದು ಮುಚ್ಚಿವ ಹಂತಕ್ಕೆ ಬಂದು ನಿಂತದೆ. ಕಡು ಬಡವರಿಗೆ ಕಡಿಮೆ ಬೆಲೆಯಲ್ಲಿ ಊಟ, ತಿಂಡಿ ನೀಡುತ್ತಿದ್ದ ಕ್ಯಾಂಟೀನ್ ಬಿಜೆಪಿಯವರ ಕುತಂತ್ರಕ್ಕೆ ಬಲಿಯಾಗುತ್ತಿದೆ. ಇದೇ ಕಾರಣಕ್ಕೆ ತಮ್ಮ ಬಜೆಟ್ನಲ್ಲೂ ಕೂಡ ಸಿಎಂ ಬೊಮ್ಮಾಯಿ ನಯಾ ಪೈಸೆ ಮೀಸಲಿಡದೆ ಬಿಬಿಎಂಪಿಗೆ ನಿಮ್ಮ ಖರ್ಚಿನಲ್ಲಿ ನಡೆಸಿಕೊಳ್ಳಿ ಎಂದು ಹೇಳಿದೆ.
3.5 ಲಕ್ಷದಿಂದ 1 ಲಕ್ಷಕ್ಕೆ ಇಳಿದ ಗ್ರಾಹಕರ ಸಂಖ್ಯೆ!
ಬಡವರ ಪಾಲಿಗೆ ಅನ್ನದ ದೇಗುಲದಂತಿದ್ದ ಇಂದಿರಾ ಕ್ಯಾಂಟೀನ್ ಗೆ ಇಂದು ಕಳಪೆ ಅಹಾರ ಪೂರೈಕೆಯಿಂದ ಹಾಗು ಅನುದಾನದ ಕೊರತೆಯಿಂದ ಬಾಗಿಲು ಮುಚ್ಚುವ ಸ್ಥಿತಿ ಎದುರಾಗಿದೆ. ಕಳೆದ ಒಂದು ವರ್ಷದಿಂದ ಇಂದಿರ್ ಕ್ಯಾಂಟೀನ್ ಗೆ ಬರುತ್ತಿರುವ ಗ್ರಾಹಕರ ಸಂಖ್ಯೆಯಲ್ಲಿ ಗಣನಿಯವಾಗಿ ಇಳಿಕೆ ಕಂಡು ಬಂದಿದ್ದು, ಗ್ರಾಹಕರು ಸಂಖ್ಯೆಯಲ್ಲಿ 50% ರಷ್ಟು ಕಡಿಮೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಕಳಪೆ ಗುಣಮಟ್ಟದ ಅಹಾರ ಪೂರೈಕೆ ಹಾಗೂ ಕ್ಯಾಂಟೀನ್ ಗುತ್ತಿಗೆದಾರರಿಗೆ ಸೂಕ್ತ ರೀತಿಯಲ್ಲಿ ಬಿಲ್ ಪಾವತಿಯಾಗದೇ ಇರುವುದು. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 198 ಇಂದಿರಾ ಕ್ಯಾಂಟೀನ್ಗಳಿದ್ದಾವೆ. ಈ ಪೈಕಿ 174 ಸ್ಥಿರ ಹಾಗೂ 24 ಮೊಬೈಲ್ ಕ್ಯಾಂಟಿನ್ಗಳಿದ್ದು, ಆರಂಭದಲ್ಲಿ ಪ್ರತಿ ನಿತ್ಯ ಮೂರುವರೆ ಲಕ್ಷ ಜನ ಊಟ, ತಿಂಡಿಗಾಗಿ ಇಂದಿರಾ ಕ್ಯಾಂಟೀನ್ ಅನ್ನು ಆಶ್ರಯಿಸಿಕೊಂಡಿದ್ದರು. ಆದರೆ ಅದೀಗ ಕೇವಲ 1 ಲಕ್ಷಕ್ಕೆ ಇಳಿದಿದ್ದು ಊಟ, ತಿಂಡಿ ತಿನ್ನಲು ಬರುವವರ ಸಂಖ್ಯೆ 60%ಕ್ಕೆ ಇಳಿಕೆಯಾಗಿದೆ.

11 ತಿಂಗಳಿಂದ 270 ಕೋಟಿ ಗುತ್ತಿಗೆದಾರರಿಗೆ ಬಿಲ್ ಬಾಕಿ!
ಬಿಬಿಎಂಪಿ ವ್ಯಾಪ್ತಿಯಲ್ಲಿ 174 ಸ್ಥಿರ ಹಾಗೂ 24 ಮೊಬೈಲ್ ಕ್ಯಾಂಟಿನ್ಗಳಿದ್ದು, ಕಳೆದ ಎರಡು ಮೂರು ವರ್ಷದಿಂದ ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟಿನ ಗಳ ನಿರ್ವಹಣೆಗೆ ರಾಜ್ಯ ಸರ್ಕಾರ ಅನುದಾನ ನೀಡುತ್ತಿಲ್ಲ. ಬಿಬಿಎಂಪಿ ತನ್ನ ಆದಾಯ ದಲ್ಲಿಯೇ ನಿರ್ವಹಣೆ ಮಾಡುತ್ತಿದೆ. ಕಳೆದ 11 ತಿಂಗಳಿಂದ ಸುಮಾರು 270 ಕೋಟಿ ಗುತ್ತಿಗೆದಾರರಿಗೆ ಬಿಲ್ ಬಾಕಿ ಇದೆ. ಹೀಗಾಗಿ ಗುತ್ತಿಗೆದಾರರು ಕ್ಯಾಂಟೀನ್ಗಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿಲ್ಲ ಎಂಬ ಆರೋಪಗಳಿವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ಗಳಿಗೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಿ ಉತ್ತಮ ಊಟ ನೀಡುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಲಾಗುತ್ತಿತ್ತು. ಈಗ ಮೇಲ್ವಿಚಾರಣೆ ನಡೆಸುವವರಿಲ್ಲ. ಹೀಗಾಗಿ ಗುಣಮಟ್ಟ ಕಳೆದುಕೊಂಡಿದೆ.
			
                                
                                
                                
