ಹಲಾಲ್ ಮಾಂಸ ಮಾರುತ್ತಿದ್ದ ವ್ಯಾಪಾರಿ ಮೇಲೆ ಭಜರಂಗ ದಳ ಕಾರ್ಯಕರ್ತರು ಹಲ್ಲೆ ಮಾಡಿದ ಘಟನೆ ಭದ್ರಾವತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭದ್ರಾವತಿಯ ಹೊಸಮನೆ ಬಳಿ ಮುಸ್ಲಿಂ ವ್ಯಾಪಾರಿ ಜೊತೆ ವಾಗ್ವಾದ ನಡೆಸಿದ ಭಜರಂಗ ದಳ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಇದರಿಂದ ಹಿಜಾಬ್ ನಂತರ ಭುಗಿಲೆದ್ದಿರುವ ಹಲಾಲ್ ವಿವಾದ ಹಿಂಸಾರೂಪದತ್ತ ತಿರುಗುತ್ತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಲಾಲ್ ಮಾಂಸದ ಕುರಿತ ವಿವಾದ ಕುರಿತು ಗಂಭೀರ ಕ್ರಮ ಕೈಗೊಳ್ಳುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿದೆ.
ಬುಧವಾರ ಈ ಘಟನೆ ನಡೆದಿದ್ದು, ಭಜರಂಗ ದಳ ಕಾರ್ಯಕರ್ತರು ಹಲಾಲ್ ಮಾಂಸ ಮಾರದಂತೆ ಹೇಳಿದ್ದಾರೆ. ಆದರೆ ವ್ಯಾಪಾರಿ ಹಲಾಲ್ ಮಾಂಸ ಈಗ ಸಿದ್ಧವಿಲ್ಲ. ಮುಂದಿನ ದಿನಗಳಲ್ಲಿ ಅದರ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾನೆ. ಆದರೆ ಇದರಿಂದ ಆಕ್ರೋಶಗೊಂಡ ಭಜರಂಗ ದಳ ಕಾರ್ಯಕರ್ತರು ಕೂಡಲೇ ವ್ಯವಸ್ಥೆ ಮಾಡಬೇಕು. ಅಲ್ಲಿಯವರೆಗೆ ವ್ಯಾಪಾರ ಮಾಡಲು ಬಿಡುವುದಿಲ್ಲ ಎಂದು ಹೇಳಿ ಪಟ್ಟು ಹಿಡಿದಾಗ ವಾಗ್ವಾದ ನಡೆದಿದೆ.