ನಾವು ನಮ್ಮ ತ್ವಜೆಯ ಬಗೆ ಎಷ್ಟು ಕಾಳಜಿ ವಹಿಸುತ್ತೆವೊ ಅದೇ ರೀತಿ ನಮ್ಮ ಕೂದಲಿನ ಬಗ್ಗೆ ಕೂಡ ಕಾಳಜಿ ವಹಿಸುವುದು ಉತ್ತಮ.ಕಾಲಕ್ಕೆ ತಕ್ಕಂತೆ ನಮ್ಮ ಕೂದಲಿನ ಆರೈಕೆಯಲ್ಲಿ ಕೂಡಾ ಬದಲಾವಣೆ ಆಗ್ಬೇಕು..ಇಲ್ಲವಾದಲ್ಲಿ ಹೇರ್ ಫಾಲ್,ಡ್ಯಾಂಡ್ರಫ್ ಎಲ್ಲವು ಕೂಡಾ ಹೆಚ್ಚಾಗುತ್ತದೆ. ಇನ್ನೂ ಆಯ್ಲಿ ಹೇರ್ ಹೆಚ್ಚು ಜನರಲ್ಲಿ ಕಂಡು ಬರುವಂತ ಸಮಸ್ಯೆ, ಅದರಲ್ಲು ಸಮರ್ ಬಂತು ಆಂದ್ರೆ ಈ ಸಮಸ್ಯೆ ಜಾಸ್ತಿ ಆಗುತ್ತದೆ. ಕಾರಣ ಬೇಸಿಗೆಯಲ್ಲಿ ನಾವು ಸ್ವೆಟ್ ಆಗೊದು ಹೆಚ್ಚು ಹಾಗಾಗಿ ನಮ್ಮ ಹೇರ್ ಇನ್ನಷ್ಟು ಆಯ್ಲಿ ಆಗುತ್ತದೆ ಜೊತೆಗೆ ನೆತ್ತಿಯ ಭಾಗದಲ್ಲಿ ಎಣ್ಣೆಯ ಅಂಶ ತುಂಬಯಿರುತ್ತದೆ. ಹಾಗಾದ್ರೆ ಬೇಸಿಗೆಯಲ್ಲಿ ಆಯ್ಲಿ ಹೇರ್‌ನ ಹೇಗೇ ಕಡಿಮೆ ಮಾಡಿಕೊಳ್ಳಬಹುದು ಅನ್ನೊ ಚಿಂತೆಯಿದ್ರೆ ಈ ಟಿಪ್ಸ್‌ನ ಫಾಲೋ ಮಾಡಿ ಆಯ್ಲಿ ಹೇರ್‌ನ ಕಂಟ್ರೋಲ್ ಮಾಡಿ..
ಮೊಟ್ಟಯ ಬಿಳಿಯ ಭಾಗ
ಎಗ್ ವೈಟ್‌ನಲ್ಲಿ ಹೆಚ್ಚು ಪ್ರೋಟಿನ್ ಇರುತ್ತದೆ,ಹಾಗೂ ನೆತ್ತಿಯ ಭಾಗದಲ್ಲಿ ಬರುವಂತಹ ಎಣ್ಣೆಯನ್ನು ಹೀರಿಕೊಳ್ಳುವ ಸಾಮರ್ಥ್ಯವಿರುತ್ತದೆ ಹಾಗಾಗಿ ವಾರಕ್ಕೆ ಒಂದು ಅಥವ ಎರಡು ಭಾರಿ ಎಗ್ ವೈಟ್‌ನ ನಮ್ಮ ಸ್ಕಾಲ್ಪ್ ಹಾಗೂ ಕೂದಲಿಗೆ ಅಪ್ಲೈ ಮಾಡಿ ೨೦ ನಿಮಿಷ ಬಿಟ್ಟು ವಾಶ್ ಮಾಡುವುದರಿಂದ ಆಯ್ಲಿನೆಸ್ ಕಡಿಮೆ ಆಗುತ್ತದೆ. ಹಾಗೂ ಇದು ನಮ್ಮ ಹೇರ್‌ನ ಪೋಷಿಸುತ್ತದೆ.
ಆಪಲ್ ಸೈಡರ್ ವಿನಿಗರ್
ಕೂದಲಿನಲ್ಲಿ ಎಣ್ಣೆ ಅಂಶ ಹೆಚ್ಚು ಇದ್ರೆ ಆಪಲ್ ಸೈಡರ್ ವಿನಿಗರನ್ನ ಅಪ್ಲೈ ಮಾಡಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ತಲೆಗೆ ಸ್ನಾನ ಮಾಡುವುದರಿಂದ ಆಯಿಲಿನೆಸ್ ಬೇಗನೆ ಕಡಿಮೆಯಾಗುತ್ತೆ,ಅಸಿಟಿಕ್ ಆಸಿಡ್ ಜಾಸ್ತಿ ಇರೋದ್ರಿಂದ ನಮ್ಮ ಸ್ಕಾಲ್ಪ್ ಪಿ ಹೆಚ್ ಲೆವೆಲ್ ನ ಬ್ಯಾಲೆನ್ಸ್ ಮಾಡುವುದಕ್ಕೆ ಇದು ತುಂಬಾನೇ ಹೆಲ್ಪ್ ಫುಲ್..
ನಿಂಬೆರಸ
ನಮ್ಮ ಸ್ಕಾಲ್ಪ್ ಪ್ರೊಡ್ಯೂಸ್ ಆಗುವ ಆಯಿಲ್ ನ ಕಂಟ್ರೋಲ್ ಮಾಡೋದಕ್ಕೆ ಲೆಮೆನ್ ಜ್ಯೂಸ್ ತುಂಬಾನೇ ಸಹಾಯಕಾರಿ. ಒಂದು ಕಪ್ ನೀರಿಗೆ ಒಂದು ನಿಂಬೆ ಹಣ್ಣಿನ ರಸವನ್ನ ಹಾಕಿ ತಲೆಗೆ ಹಚ್ಚಿ ಕೆಲ ನಿಮಿಷಗಳ ಕಾಲ ಬಿಟ್ಟು ಸ್ನಾನ ಮಾಡಬೇಕು ಅದರಿಂದ ಆಯಿಲ್ ಕಂಟೆಂಟ್ ಕಡಿಮೆಯಾಗುತ್ತೆ, ಡ್ಯಾಂಡ್ರಫ್ ಕೂಡ ಬೇಗನೆ ನಿವಾರಣೆ ಆಗುತ್ತೆ.
ಇದರ ಜೊತೆಗೆ ನಾವು ಬೇಸಿಗೆಯಲ್ಲಿ ವಾರಕ್ಕೆ ಮೂರು ಬಾರಿಯಾದ್ರು ತಲೆಗೆ ಸ್ನಾನವನ್ನು ಮಾಡುವುದು ಉತ್ತಮ . ಇದರ ಜೊತೆಗೆ ಆಗಾಗ ಹೇರ್ ಕೂಂಬ್ ಮಾಡ್ತಾನೆ ಇರಬೇಕು ಇಲ್ಲವಾದಲ್ಲಿ ಎಣ್ಣೆ ಅಂಶ ಜಾಸ್ತಿ ಆಗುತ್ತೆ.