2023ರ ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ನಡೆಯಲಿದೆ. ಇಂದು ಮಾನ್ವಿಯಲ್ಲಿ ರಾಜಾ ವೆಂಕಟಪ್ಪ ನಾಯಕ ಪರ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭರ್ಜರಿ ಮತ ಪ್ರಚಾರ ನಡೆಸಿದರು. ಪ್ರಚಾರದ ಬಳಿಕ ಅಸಂಖ್ಯಾತ ಜನರನ್ನು ಉದ್ದೇಶಿಸಿ ಕುಮಾರಸ್ವಾಮಿ ಭಾಷಣ ಮಾಡಿದ್ರು. ʻಕಳೆದ ನಾಲ್ಕೈದು ತಿಂಗಳಲ್ಲಿ ಮಾನ್ವಿಗೆ 3ನೇ ಬಾರಿ ಬಂದಿದ್ದೇನೆ. ಕಳೆದ 5 ವರ್ಷಗಳಿಂದ ತಾಲೂಕಿನ ಅಭಿವೃದ್ಧಿ ಶ್ರಮ, ಎಲ್ಲಾ ಮಾಹಿತಿಗಳನ್ನ ರಾಜಾ ವೆಂಕಟಪ್ಪ ನಾಯಕ್ ಕೊಟ್ಟಿದ್ದಾರೆ.
ಮುಂದಿನ ದಿನಗಳಲ್ಲಿ ಬಡವರ ಮಕ್ಕಳಿಗೆ ಉತ್ತಮ ಉಚಿತ ಶಿಕ್ಷಣ, ಅಪರೂಪದ ಖಾಯಿಲೆಗಳಿಗೆ 50 ಲಕ್ಷದವರೆಗೆ ಚಿಕಿತ್ಸಾ ವೆಚ್ಚ, ಕೂಲಿ ಕಾರ್ಮಿಕರಿಗೆ ಪ್ರತಿತಿಂಗಳು 2 ಸಾವಿರ ರೂಪಾಯಿ, ವಿಧವೆಯರಿಗೆ ಪ್ರತಿ ತಿಂಗಳು ಎರಡೂವರೆ ಸಾವಿರ ರೂಪಾಯಿ ನೀಡ್ತೇವೆʼ ಅಂತ ಮಾನ್ವಿಯ ಸಮಾವೇಶದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ರು. ʻರೈತರಿಗೆ ಬೆಳೆ ಬೆಳೆಯಲು ಶಾಶ್ವತ ನೀರು ಪೂರೈಕೆ ಮಾಡ್ತೀವಿ ಗುಳೆ ಹೋಗೋದನ್ನ ನಿಲ್ಲಿಸಿ ಇಲ್ಲೇ ಉದ್ಯೋಗಾವಕಾಶ, ಮನೆ ಇಲ್ಲದವರಿಗೆ ಮುಂದಿನ 5 ವರ್ಷದಲ್ಲಿ ಉಚಿತ ವಸತಿ ಸೌಲಭ್ಯ ಒದಗಿಸಿಕೊಡುತ್ತೇವೆ. ಕಳೆದ ನಾಲ್ಕೂವರೆ ತಿಂಗಳಿಂದ ಪ್ರತಿದಿನ 18 ಗಂಟೆ ಪ್ರಚಾರ ಮಾಡ್ತಿದ್ದೇವೆ. ಮೇ 10ನೇ ತಾರೀಖಿಗೆ ಇನ್ನು 8 ದಿನ ಮಾತ್ರ ಇದೆ. ಪ್ರತಿಯೊಂದು ಸಭೆಗೂ ಬಂಜಾರ ಸಮುದಾಯದವ್ರು ಬರ್ತೀರ. ನಿಮ್ಮೆಲ್ಲರ ಆಶೀರ್ವಾದ ಜೆಡಿಎಸ್ ಮೇಲಿರಲಿ. ಯಡವಾಳ ನೀರಾವರಿ ಯೋಜನೆಗೆ 84 ಕೋಟಿ ಹಣ, ಸರ್ಕಾರ ಬಂದ ತಕ್ಷಣವೇ ಯಡವಾಳ ಯೋಜನೆ ಪೂರ್ಣ ಅಂತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.