ಹೆಚ್.ಡಿ. ಕುಮಾರಸ್ವಾಮಿ(HD Kumaraswamy) ಮೈತ್ರಿ ಕುರಿತಾದ ಆಡಿದ ಮಾತುಗಳು ಬಿಜೆಪಿ (BJP) ಸ್ಪಷ್ಟ ಸಂದೇಶ ರವಾನಿಸೋದ್ರಲ್ಲಿ ಯಶಸ್ವಿಯಾಗಿದೆ . ಖುದ್ದು ಅಮಿತ್ ಶಾ (Amit Sha)ಹೆಚ್.ಡಿ.ಕೆ ಗೆ ಕರೆ ಮಾಡಿ ಕೋಲಾರ (Kolara) ಬಿಟ್ಟುಕೊಡುವ ಭರವಸೆ ಕೊಟ್ಟಿದ್ದಾರೆ. ಮೊದಲಗೆ ಬಿಜೆಪಿ (BJP) ಅಭ್ಯರ್ಥಿಯನ್ನೇ ಜೆಡಿಎಸ್ (Jds) ಚಿನ್ನೆಯಲ್ಲಿ ಸ್ಪರ್ಧೆ ಮಾಡಿಸೋಣ ಎಂಬ ಆಫರ್ ಕೊಟ್ಟ ಅಮಿತ್ ಶಾ , ಕುಮಾರಸ್ವಾಮಿ ಅದಕ್ಕೆ ಒಪ್ಪದಿದ್ದಾಗ ಜೆಡಿಎಸ್ ಗೆ ಕೋಲಾರ ಬಿಟ್ಟುಕೊಡುವ ನಿರ್ಧಾರ ಮಾಡಿದ್ದಾರೆ.

ಒಂದು ವೇಳೆ ಕೋಲಾರ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡದಿದ್ರೆ ಬಿಜೆಪಿ ಪರಿಣಾಮ ಎದುರಿಸಬೇಕಾಗುತ್ತೆ ಅನ್ನೋ ಧಾಟಿಯಲ್ಲಿ ಹೆಚ್.ಡಿ.ಕೆ. (HDK) ನಿನ್ನೆಯಷ್ಟೇ ಎಚ್ಚರಿಕೆ ರವಾನಿಸಿದ್ದು . ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ (BJP jds alliance) ಮಾಡಿಕೊಂಡಿದ್ದು , ಈಗಾಗಲೇ ಚುನಾವಣೆಯ ದಿನಾಂಕವೂ ಘೋಷಣೆಯಾಗಿದ್ರು ಬಿಜೆಪಿ ಮತ್ತು ಜೆಡಿಎಸ್ ನುಡುವೆ ಇನ್ನೂ ಸೀಟು ಹಂಚಿಕೆ ಫೈನಲ್ ಆಗಿರಲಿಲ್ಲ , ಕೋಲಾರ ಕ್ಷೇತ್ರ ಬಿಟ್ಟುಕೊಡಲು ಬಿಜೆಪಿ ಮೀನಮೇಷ ಎಣಿಸಿದ್ದು ಜೆಡಿಎಸ್ ಆಕ್ರೋಶಕ್ಕೆ ಕಾರಣವಾಗಿತ್ತು.

ಜೆಡಿಎಸ್ ಒಟ್ಟಾಗಿ ಕೇಳಿದ್ದೇ ೩ ಕ್ಷೇತ್ರಗಳು. ಹಾಸನ ಮಂಡ್ಯ ಮತ್ತು ಕೋಲಾರ . ಈ ಪೈಕಿ ಈಗಾಗಲೇ ಮಂಡ್ಯ (Mandya) ಹಾಸನ (Hassan) ಜೆಡಿಎಸ್ ಗೆ ಎಂಬ ಖಾತ್ರಿ ಸಿಕ್ಕಿದ್ದು, ಕೋಲಾರ ಪೆಂಡಿಂಗ್ (pending) ಇತ್ತು. ಒಂದುವೇಳೆ ಕೋಲಾರ (Kolar) ಬಿಟ್ಟುಕೊಡದಿದ್ರೆ ಮೈತ್ರಿಯೇ ಬೇಡ ಎಂಬ ನಿರ್ಧಾರಕ್ಕೆ ಜೆಡಿಎಸ್ ಬರೋ ಸೂಚನೆ ಕೊಟ್ಟಿತ್ತು. ಇಷ್ಟೇ ಅಲ್ಲ , ಒಂದು ವೇಳೆ ಬಿಜೆಪಿ ಕೋಲಾರ (Kolara) ಬಿಟ್ಟುಕೊಡದಿದ್ದರೆ ಮೈತ್ರಿಯಿಂದ ಹೊರಬಂದು ಜೆಡಿಎಸ್ ರಾಜ್ಯದಲ್ಲಿ ಬಿಜೆಪಿ ವಿರುದ್ಧ ಸ್ಪರ್ಧೆ ಮಾಡಿ , ಬಿಜೆಪಿಗೆ ಸರಿಯಾದ ಪೆಟ್ಟು ನೀಡಬೇಕು ಎಂಬ ಲೆಕ್ಕಾಚಾರಕ್ಕೆ ಕೂಡ ಜೆಡಿಎಸ್ ಸಜ್ಜಾಗಿತ್ತು. ಒಂದುವೇಳೆ ಮೈತ್ರಿ ಮುರಿದುಬಿದ್ರೆ ಬಿಜೆಪಿಗೆ ಹೊಡೆತ ಬೀಳೋದು ಖಂಡಿತ ಎಂಬುದನ್ನು ಅರಿತ ಬಿಜೆಪಿ ಹೈಕಮಾಂಡ್ (BJP Highcommand) ಜೆಡಿಎಸ್ ಪಟ್ಟಿಗೆ ಮಣಿದಿದೆ. ಅಲ್ಲಿಗೆ ಮೈತ್ರಿಯಲ್ಲಿನ ಬಿರುಕು ಸರಿಹೋದಂತಾಗಿದೆ.











