ಕಲಿಯುಗದ ಕಾಮಧೇನು ಗುರು ರಾಘವೇಂದ್ರ ಸ್ವಾಮಿಗಳ (Raghavendra swamy) ಹುಟ್ಟುಹಬ್ಬದ ಹಿನ್ನಲೆ, ರಾಯರ ಸನ್ನಿಧಿ ಮಂತ್ರಾಲಯದಲ್ಲಿ (Mantralayam) ಈಗಾಗಲೇ ಗುರು ವೈಭವೋತ್ಸವ ಸಂಭ್ರಮ ಮನೆ ಮಾಡಿದೆ.ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರ (Sri Subudendra theertharu) ನೇತೃತ್ವದಲ್ಲಿ ಗುರು ವೈಭವೋತ್ಸವ ಸಮಾರಂಭ ಆರಂಭವಾಗಿದ್ದು, ನಾಳೆ (ಮಾ.6) ರಾಯರ ವರ್ಧಂತಿ ಉತ್ಸವ ನಡೆಯಲಿದೆ.

ಇಂದು (ಮಾ.5) ಬೆಳಗ್ಗೆಯಿಂದಲ್ಲೇ ಶ್ರೀಮಠದಲ್ಲಿ ವಿಶೇಷ ಪೂಜೆ ಆರಂಭಗೊಂಡಿದೆ. ಇವತ್ತು ಮಹಾ ಪಂಚಾಮೃತ ಅಭಿಷೇಕ ನೆರವೇರಿಸಿ ತಿರುಪತಿ ತಿರುಮಲ(Tirupati) ದೇವಾಲಯದಿಂದ ಮಠಕ್ಕೆ ಬರುವ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ರಾಯರಿಗೆ ಸಮರ್ಪಣೆ ಮಾಡಲಾಗುವುದು.
ಆ ಬಳಿಕ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಮಂತ್ರಾಲಯದಲ್ಲಿ ಸನ್ಮಾನ ನಡೆಯಲಿದ್ದು ಜೊತೆಗೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಮಂತ್ರಾಲಯಕ್ಕೆ ಆಗಮಿಸುತ್ತಿದ್ದು, ರಾಯರ ಅನುಗ್ರಹಕ್ಕೆ ಪಾತ್ರರಾಗಲಿದ್ದಾರೆ.