ಜಮ್ಮು: ಜಮ್ಮು ಮತ್ತು ಕಾಶ್ಮೀರದ (Jammu and Kashmir)ಕಿಶ್ತ್ವಾರ್ ಜಿಲ್ಲೆಯಲ್ಲಿ ಶುಕ್ರವಾರ ಉಗ್ರರು ಮತ್ತು ಭದ್ರತಾ Security)ಪಡೆಗಳ ನಡುವೆ ಗುಂಡಿನ ಚಕಮಕಿ (gunfight )ನಡೆದಿದ್ದು, ನಾಲ್ವರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಕಿಶ್ತ್ವಾರ್ Kishtwar)ದೋಡಾ ಪ್ರದೇಶದ ನೆರೆಯ ಜಿಲ್ಲೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ..
ಈ ಕುರಿತು ಎಡಿಜಿಪಿ ADGP)ಜಮ್ಮು ಆನಂದ್ ಜೈನ್ ಮಾತನಾಡಿ, “ಕಿಶ್ತ್ವಾರ್ ಜಿಲ್ಲೆಯ ಛತ್ರೂ ಪೊಲೀಸ್ ಠಾಣೆ ವ್ಯಾಪ್ತಿಯ ನೈದ್ಗಾಮ್ ಗ್ರಾಮದ ಮೇಲ್ಭಾಗದ ಪಿಂಗ್ನಾಲ್ ದುಗಡ್ಡಾ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳ ಶೋಧ ತಂಡಗಳು ಮತ್ತು ಅಡಗಿರುವ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ.
ಮೂಲಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಸೇನೆಯೊಂದಿಗೆ ಉಗ್ರಗಾಮಿ ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಎನ್‌ಕೌಂಟರ್ ಪ್ರಾರಂಭವಾಯಿತು.ಈ ಪ್ರದೇಶದಲ್ಲಿ ಅಡಗಿ ಕುಳಿತಿದ್ದ ಉಗ್ರರು ಶೋಧ ದಳದ ಮೇಲೆ ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿವೆ. ಪ್ರಸ್ತುತ ಎನ್‌ಕೌಂಟರ್ ನಡೆಯುತ್ತಿರುವ ಕಿಶ್ತ್‌ವಾರ್‌ನ ಚಾಟ್ರೋ ಪ್ರದೇಶದಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆ ಜೈಶ್-ಎ-ಮೊಹಮ್ಮದ್‌ನ (Jaish-e-Mohammed)ಕನಿಷ್ಠ ನಾಲ್ವರು ಉಗ್ರರು ಸಿಕ್ಕಿಬಿದ್ದಿದ್ದಾರೆ ಮತ್ತು ಎನ್‌ಕೌಂಟರ್ ಪ್ರದೇಶದ ಹತ್ತಿರದ ಪ್ರದೇಶಗಳಿಗೆ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.ಉಗ್ರರನ್ನು ಸದೆಬಡಿಯಲು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೇನೆಯೊಂದಿಗೆ ಸುತ್ತುವರಿದಿದ್ದಾರೆ.