ಕೇರಳದಲ್ಲಿ ಮಂಕಿಪಾಕ್ಸ್ನ ಮೊದಲ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಇಲಾಖೆಗಳಿಗೆ ಪತ್ರ ಬರೆದಿದ್ದರು. ಈ ಶಿಫಾರಸುಗಳ ಪ್ರಕಾರ ಈ ಕೆಳಗೆ ವಿವರಿಸಿರುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿ ಸೂಚಿಸಿದೆ.
ಮಂಕಿಪಾಕ್ಸ್ ಕಾಯಿಲೆ ಹಲವು ದೇಶಗಳಲ್ಲಿ ವೇಗವಾಗಿ ಹರಡುತ್ತಿದೆ. ಭಾರತದ ಕೆಲವೆಡೆ ರೋಗದ ಲಕ್ಷಣಗಳು ಕಂಡುಬಂದಿದ್ದು ರಾಜ್ಯಗಳ ಗಡಿಗಳಲ್ಲಿ ಆರೋಗ್ಯ ತಪಾಸಣೆ ಮಾಡಬೇಕು. ಕಾಯಿಲೆ ಗುಣಲಕ್ಷಣಗಳು ಕಂಡುಬಂದಲ್ಲಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ಸೋಂಕಿತರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಬೇಕು. ಸೋಂಕಿತ ವ್ಯಕ್ತಿಯ ಸಂಪರ್ಕಿತರನ್ನು ಪತ್ತೆ ಹಚ್ಚಿ, ರೋಗದ ಮಾದರಿಯನ್ನು ಸಂಗ್ರಹಿಸಿ ತಕ್ಷಣ ಪರೀಕ್ಷೆಗೆ ಕಳುಹಿಸಬೇಕು. ಸೋಂಕಿತ ಪ್ರದೇಶಗಳಲ್ಲಿ ಸದಾ ನಿಗಾ ವಹಿಸಲು ಹಾಗೂ ಚಿಕಿತ್ಸೆ ವೇಳೆ ವೈದ್ಯರು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಈ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಖೆಯು, ಆರೋಗ್ಯ ಇಲಾಖೆ, ಕೇರಳದ ಕಣ್ಣೂರು ಜಿಲ್ಲೆಯಿಂದ ಮಂಕಿಪಾಕ್ಸ್ ಪ್ರಕರಣದೊಂದಿಗೆ ಸಂಪರ್ಕದ ಹಿನ್ನೆಲೆ ಇರುವ ಎರಡನೇ ಮಂಕಿಪಾಕ್ಸ್ ಪ್ರಕರಣವು ಖಚಿತ ಪಟ್ಟ ಹಿನ್ನೆಲೆಯಲ್ಲಿ ರಾಜ್ಯವು ಕಣ್ಗಾವಲು ಚಟುವಟಿಕೆಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಕಣ್ಗಾವಲು ಚಟುವಟಿಕೆಯನ್ನು ಚುರುಕುಗೊಳಿಸುವ ಅಗತ್ಯವಿರುತ್ತದೆ, ಆದ್ದರಿಂದ ರಾಜ್ಯದ ಎಲ್ಲಾ ಜಿಲ್ಲೆಗಳು ಪರಿಣಾಮಕಾರಿಯಾದ ಪೂರ್ವಸಿದ್ಧತೆಗಳನ್ನು ಖಚಿತಪಡಿಸಿಕೊಳ್ಳಲು ಹಾಗೂ ಭಾರತ ಸರ್ಕಾರದ ಮಾರ್ಗಸೂಚಿಗಳು ಮತ್ತು ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳ ಪ್ರಕಾರ ಈ ಕೆಳಗೆ ವಿವರಿಸಿರುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಮುಂದುವರೆದು, ಎಲ್ಲಾ ಅಧಿಕಾರಿ ಡಾಕ್ಟರ್ಗಳಿಗೂ ಶಂಕಿತ/ಸಂಭವನೀಯ/ಖಚಿತ ಪಟ್ಟ ಮಂಕಿಪಾಕ್ಸ್ ಪ್ರಕರಣಗಳು ಹಾಗೂ ಸಂಪರ್ಕಿತರ ಸಾಮಾನ್ಯ ಲಕ್ಷಣಗಳು ಹಾಗೂ ಚಿನ್ನೆಗಳು, ರೋಗ ಪತ್ತೆ, ರೋಗದ ವ್ಯಾಖ್ಯೆ ಇತ್ಯಾದಿಗಳ ಕುರಿತು ಮುನರ್ ಮನನ ನೀಡಬೇಕಾಗಿರುತ್ತದೆ. ಸಂಪರ್ಕಿತರ ಪತ್ತೆ ಹಾಗೂ ಸಂಭವನೀಯ ಮಂಕಿಪಾಕ್ಸ್ ಪ್ರಕರಣದ ಪತ್ತೆಯ ನಂತರ ಸೋಂಕು ನಿಯಂತ್ರಣ ಮತ್ತು ತಡೆಗಟ್ಟುವಿಕೆಗೆ ಸಂಬಂಧಿಸಿದ ಶಿಷ್ಠಾಚಾರಗಳು ಹಾಗೂ ಪ್ರಕರಣ ನಿರ್ವಹಣೆ ಹಾಗೂ ಇತರ ಸರ್ವೇಕ್ಷಣಾ ಚಟುವಟಿಕೆಗಳ ಕುರಿತು ತರಬೇತಿ ನೀಡತಕ್ಕದ್ದು ಎಂದು ಆದೇಶಿಸಿದೆ.

ಸೂಚನೆಗಳು ಇಂತಿವೆ :
1. ಪ್ರವೇಶ ಘಟ್ಟಗಳಲ್ಲಿ ಹಾಗೂ ಸಮುದಾಯದಲ್ಲಿರುವ ಎಲ್ಲಾ ಶಂಕಿತ ಪ್ರಕರಣಗಳನ್ನು ಆಸ್ಪತ್ರೆ ಆಧಾರಿತ ಅಥವಾ ಉದ್ದೇಶಿತ ಸರ್ವೇಕ್ಷಣೆಯ ಮೂಲಕ ಪ್ರಾಥಮಿಕ ಪರೀಕ್ಷೆಗೆ ಒಳಪಡಿಸತಕ್ಕದ್ದು,
2. ಖಚಿತ ಪಟ್ಟ ಪ್ರಕರಣಗಳನ್ನು ಕನಿಷ್ಠ 21 ದಿನಗಳವರೆಗೆ ಹಾಗೂ ದದ್ದುಗಳು ಸಂಪೂರ್ಣ ಗುಣವಾಗುವವರೆಗೆ ಮತ್ತು ಚರ್ಮದ ಹುರುಪೆಗಳು ಪೂರ್ಣವಾಗಿ ಬಿದ್ದು ಹೋಗುವವರೆಗೆ ಪ್ರತ್ಯೇಕವಾಗಿರಿಸತಕ್ಕದ್ದು.
3. ಆರೋಗ್ಯ ಸೌಲಭ್ಯಗಳಲ್ಲಿನ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಸಾಮಾನ್ಯವಾಗಿ ಗುರುತಿಸಲಾದ ಚರ್ಮ ಮತ್ತು ಮಕ್ಕಳ ಹೊರರೋಗಿ ವಿಭಾಗಗಳು, ರೋಗನಿರೋಧಕ ಚಿಕಿತ್ಸಾಲಯಗಳು ಹಾಗೂ NACO ದಿಂದ ಗುರುತಿಸಲಾದ ಸಾರ್ವಜನಿಕ ಸಂಪರ್ಕ ಸ್ಥಳಗಳಲ್ಲ, ಆರೋಗ್ಯ ಶಿಕ್ಷಣವನ್ನು ನೀಡತಕ್ಕದ್ದು. ಸರಳ ತಡೆಗಟ್ಟುವಿಕೆ ತಂತ್ರಗಳ ಕುರಿತು ಹಾಗೂ ಸಮುದಾಯದಲ್ಲಿನ ಪ್ರಕರಣಗಳನ್ನು ಕೂಡಲೇ ವರದಿ ಮಾಡುವ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸತಕ್ಕದ್ದು.
4. ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಶಂಕಿತ/ಖಚಿತಪಟ್ಟ ಪ್ರಕರಣಗಳಿಗಾಗಿ ಕನಿಷ್ಠ 2 ಹಾಸಿಗೆಗಳನ್ನು ಮೀಸಲಿಡುವುದು ಹಾಗೂ ಶಂಕಿತ/ಖಚಿತಪಟ್ಟ ಮಂಕಿಪಾಕ್ಸ್ ಪ್ರಕರಣಗಳ ನಿರ್ವಹಣೆಗಾಗಿ ಸಾಕಷ್ಟು ಮಾನವ ಸಂಪನ್ಮೂಲ ಮತ್ತು ಲಾಜಿಸ್ಟಿಕ್ಸ್ ಲಭ್ಯವಿರುವ ಬಗ್ಗೆ ಖಚಿತ ಪಡಿಸಿಕೊಳ್ಳತಕ್ಕದ್ದು.
5. ಯಾವುದಾದರೂ ಶಂಕಿತ ಮಂಕಿಪಾಕ್ಸ್ ಪ್ರಕರಣ ವರದಿಯಾದಲ್ಲಿ ಅವರ ಮಾದರಿಯನ್ನು ಸಂಗ್ರಹಿಸಿ ನಿಗದಿತಗ ಪ್ರಯೋಗಶಾಲೆಗೆ ಸಾಗಾಣಿಕೆ ಮಾಡಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳತಕ್ಕದ್ದು. ಪ್ರವೇಶ ಘಟ್ಟಗಳಲ್ಲಿ (PoES) ಹಾಗೂ ಆಸ್ಪತ್ರೆಗಳಲ್ಲಿ ಕೈಗೊಳ್ಳಬೇಕಾದ ಸರ್ವೇಕ್ಷಣಾ ಕ್ರಮಗಳು ಹಾಗೂ ಮಾದರಿ ಸಂಗ್ರಹ ಮತ್ತು ಸಾಗಾಣಿಕೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಾದ ಮಾರ್ಗಸೂಚಿಗಳನ್ನು ಈ ಸುತ್ತೋಲೆಯ ಅನುಬಂಧದಲ್ಲಿ ನೀಡಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ/ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಇದನ್ನು ತಪ್ಪದೆ ಅನುಸರಿಸುವಂತೆ ಈ ಮೂಲಕ ಸೂಚಿಸಿದೆ.
ವಿಮಾನ ನಿಲ್ದಾಣಗಳು/ಕಡಲ ಬಂದರುಗಳಲ್ಲಿಗಳಲ್ಲಿ ಹೈ ಅಲರ್ಟ್ :
1. ನೇರವಾಗಿ ಬೆಂಗಳೂರು ಅಥವಾ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ/ಕಡಲ ಬಂದರುಗಳಿಗೆ ನೇರವಾಗಿ ಆಗಮಿಸಿದವರು, ಮುಖ್ಯವಾಗಿ ಕಳೆದ 21 ದಿನಗಳಲ್ಲಿ ಖಚಿತಪಟ್ಟ ಪ್ರಕರಣದೊಂದಿಗೆ ಸಂಪರ್ಕಕ್ಕೆ ಬಂದವರ ಕುರಿತು ವರದಿ ಮಾಡಿಕೊಳ್ಳುವುದು.
a. ರೋಗ ಲಕ್ಷಣವಿರುವ ಪ್ರಯಾಣಿಕರು: ಈ ಕೆಳಕಂಡ ಒಂದು ಅಥವಾ ಹೆಚ್ಚು ರೋಗ ಲಕ್ಷಣವಿರುವವರನ್ನು ಪ್ರಾಥಮಿಕ ಪರೀಕ್ಷೆಗೊಳಪಡಿಸುವುದು, ಪ್ರತ್ಯೇಕವಾಗಿರಿಸುವುದು ಮತ್ತು ಪ್ರಯೋಗ ಶಾಲಾ ಪರೀಕ್ಷೆಗೊಳಪಡಿಸುವುದು.
ಜ್ವರ
ಚಳಿ ಮತ್ತು ಬೆವರುವಿಕೆ
ಹಾಲ್ರಸ ಗ್ರಂಥಗಳ ಊತ
ತಲೆನೋವು, ಮಾಂಸಖಂಡಗಳ ನೋವು, ಸುಸ್ತು.
ಗಂಟಲ ಉರಿ ಹಾಗೂ ಕೆಮ್ಮು
ಚರ್ಮದ ಮೇಲೆ ದದ್ದುಗಳು.
b. ರೋಗಲಕ್ಷಣ ರಹಿತ ಪ್ರಯಾಣಿಕರು: ಮುಂದಿನ ಅನುಸರಣೆಗಾಗಿ ಸಂಬಂಧಪಟ್ಟ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗೆ ಪ್ರಯಾಣಿಕರ ಪಟ್ಟಿಯನ್ನು ನೀಡತಕ್ಕದ್ದು.
i. ಸೋಂಕಿತ ಪ್ರದೇಶಗಳಿಂದ ಬಂದನಂತರ 21 ದಿನಗಳ ವರೆಗೆ ಯಾವುದೇ ರೀತಿಯ ಚಿಲ್ಲೆಗಳು ಹಾಗೂ ರೋಗ ಲಕ್ಷಣಗಳ ಬೆಳವಣಿಗಾಗಿ ಗಮನವಿರಿಸಿ.
ii. ಚಿನ್ನೆಗಳು ರೋಗಲಕ್ಷಣಗಳು ಕಂಡುಬಂದರೆ, ಪ್ರತ್ಯೇಕ ಹಾಗೂ ಮಾರ್ಗಸೂಚಿಗಳಂತೆ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಿ.
2. ಪ್ರಯಾಣಿಕರಿಗಾಗಿ ಆರೋಗ್ಯ ಶಿಕ್ಷಣ ಹಾಗೂ ಸ್ವಯಂ ವರದಿ ಮಾಡಿಕೊಳ್ಳುವಿಕೆ: ವಿಮಾನ/ಹಡಗಿನಲ್ಲಿ ಪ್ರಯಾಣಿಸುತ್ತಿರುವಾಗ “ಮಂಕಿಪಾಕ್ಸ್ ಗುರುತಿಸುವಿಕೆ ಕಾರ್ಡ್” ಯೊಂದಿಗೆ ಮಂಕಿಪಾಕ್ಸ್ ರೋಗ ಲಕ್ಷಣವಿರುವವರು ವಿಮಾನ ನಿಲ್ದಾಣ/ಬಂದರಿನ ಆರೋಗ್ಯ ಸಂಸ್ಥೆಗೆ ವರದಿ ಮಾಡಿಕೊಳ್ಳುವಂತೆ ಮುನ್ಸೂಚನೆಗಳನ್ನು ನೀಡುವುದು.
3. ಶಂಕಿತರನ್ನು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ (ಸೂಕ್ತ ವೈಯಕ್ತಿಕ ರಕ್ಷಣಾ ಸಲಕರಣೆಗಳೊಂದಿಗೆ) ಈ ಕೆಳಕಂಡ ಐಸೋಲೇಷನ್ ಆಸ್ಪತ್ರೆಗೆ ವರ್ಗಾಯಿಸುವುದು ಮತ್ತು ಮೇ,2022ರ ಭಾರತ ಸರ್ಕಾರದ ಮಾರ್ಗಸೂಚಿಗಳಂತೆ ನಿರ್ವಹಣೆ ಮಾಡುವುದು.
a. ಐಸೋಲೇಷನ್/ ಇಡಿ ಆಸ್ಪತ್ರೆ, ಇಂದಿರಾನಗರ, ಬೆಂಗಳೂರು.
b. ವೆನ್ಲಾಕ್ ಆಸ್ಪತ್ರೆ, ಮಂಗಳೂರು.
ಆ) ಆರೋಗ್ಯ ಸಂಸ್ಥೆಗಳು/ಆಸ್ಪತ್ರೆಗಳಲ್ಲಿ:
1. ಶಂಕಿತ ಪ್ರಕರಣವೊಂದು ಬಾಧಿತ ದೇಶದಿಂದ ಅಥವಾ ಖಚಿತ ಪಟ್ಟ ಅಥವಾ ಶಂಕಿತ ಮಂಕಿಪಾಕ್ಸ್ ಪ್ರಕರಣದೊಂದಿಗೆ ಕಳೆದ 21 ದಿನಗಳಲ್ಲಿ ಸಂಪರ್ಕಕ್ಕೆ ಬಂದವರು (ಸರ್ಕಾರಿ ಅಥವಾ ಖಾಸಗೀ) ಆಸ್ಪತ್ರೆಗೆ ವರದಿ ಮಾಡಿಕೊಂಡರೆ, ಅಂತಹ ಪ್ರಕರಣಗಳನ್ನು ಜಿಲ್ಲೆಯಲ್ಲಿ ನಿಗದಿಪಡಿಸಲಾದ ಜಿಲ್ಲಾ ಆಸ್ಪತ್ರೆಯಲ್ಲಿ ಕೂಡಲೇ ಪ್ರತ್ಯೇಕವಾಗಿರಿಸುವುದು.
2. ಮಂಕಿಪಾಕ್ಸ್ ನ ಸರ್ವೇಕ್ಷಣಾ ಚಟುವಟಿಕೆಗಳಿಗಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟಗಳಲ್ಲಿ ತ್ವರಿತ ಪ್ರತಿಕ್ರಯಾ ತಂಡಗಳಿಗೆ ಕೂಡಲೇ ಪುರನ್ ಮನನ ತರಬೇತಿ ನೀಡುವುದು.
a. ತ್ವರಿತ ಪ್ರತಿಕ್ರಿಯಾ ತಂಡಗಳು ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಆರೋಗ್ಯಾಧಿಕಾರಿಗಳು ಒದಗಿಸಿದ ಪಟ್ಟಿಯಂತೆ ಬಾಧಿತ ದೇಶಗಳಿಂದ ಆಗಮಿಸಿದ ಪ್ರಯಾಣಿಕರನ್ನು ಅವರು ಆಗಮಿಸಿದ 21 ದಿನಗಳ ವರೆಗೆ ಅನುಸರಣಿ ಮಾಡುವುದು.
b. ಬಾಧಿತ ದೇಶಗಳಿಂದ ಬಂದ 21 ದಿನಗಳವರೆಗೆ ಯಾವುದಾದರೂ ಲಕ್ಷಣಗಳು ಹಾಗೂ ಚಿನ್ನೆಗಳು ಕಂಡುಬರುತ್ತವೆಯೋ, ಗಮನಿಸಿ: ಲಕ್ಷಣಗಳು ಹಾಗೂ ಚಿನ್ದಗಳು ಕಂಡುಬಂದರೆ ಶಿಷ್ಟಾಚಾರವನ್ನು ಅನುಸರಿಸಿ ಕ್ರಮಕೈಗೊಳ್ಳ
c. “ಮಂಕಿಪಾಕ್ಸ್ ಗುರುತಿಸುವಿಕೆ ಕಾರ್ಡ್” ನ್ನು (ಅನುಬಂಧ-ಬಿ ದಲ್ಲಿ ಪ್ರತಿಯನ್ನು ನೀಡಲಾಗಿದೆ) ಗಾಬರಿ ಹುಟ್ಟಿಸದಂತೆ, ಜನಸಾಮಾನ್ಯರಿಗೆ ಅರಿವು ಮೂಡಿಸಲು ಐವಿಯಂತಹ ಸಮೂಹ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಬಳಕೆ ಮಾಡುವುದು.
d. ರಾಜ್ಯದಾದ್ಯಂತ ಚರ್ಮ ತಜ್ಞರಿಗೆ ವಿಶೇಷ ತರಬೇತಿ ನೀಡಲು ಹೆಚ್ಚಿನ ಕ್ರಮವಹಿಸುವುದು.
e. ಮಂಕಿಪಾಕ್ಸ್ ಕುರಿತಾದ ಒಂದು ಕರಪತ್ರ (ಸಾಪ್ಟ ಕಾಪಿ) (ಕನ್ನಡ ಹಾಗೂ ಇಂಗ್ಲೀಷಿನಲ್ಲಿ) ತಯಾರಿಸಿ ಅದನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಜನಸಾಮಾನ್ಯರಿಗೆ ಆರೋಗ್ಯ ಶಿಕ್ಷಣ ನೀಡಲು ಬಳಸಿಕೊಳ್ಳುವುದು.
ಇ. ಮಾದರಿ ಸಂಗ್ರಹ ಹಾಗೂ ಸಾಗಾಣಿಕೆ: ಮಂಕಿಪಾಕ್ಸ್ ಶಂಕಿತ ಅಥವಾ ಹಾಲಿ ಮಂಕಿಪಾಕ್ಸ್ ರೋಗ ಸ್ಫೋಟ ವರದಿಯಾಗಿರುವ ಪ್ರದೇಶದಿಂದ ಆಗಮಿಸಿರುವ ಅಂತರರಾಷ್ಟ್ರೀಯ ಪ್ರಯಾಣಿಕರಿಂದ ಈ ಕೆಳಕಂಡಂತೆ ಮಾದರಿಗಳನ್ನು ಸಂಗ್ರಹಿಸುವುದು ಎಂದು ತಿಳಿಸಿದೆ ಅದರ ಪೂರ್ತಿ ಮಾರ್ಗಸೂಚಿ ಇಲ್ಲಿದೆ.