ಚನ್ನಪಟ್ಟಣ ಉಪ ಚುನಾವಣೆ (Channapattana bypoll) ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ನನ್ನ ಮಾತನ್ನು ಕೇಳಲಿಲ್ಲ ಎಂದು ನಿಖಿಲ್ (Nikhil) ಸೋಲಿನ ಬಗ್ಗೆ ಮೈಸೂರಿನಲ್ಲಿ ಶಾಸಕ ಜಿಟಿ ದೇವೇಗೌಡ ಹೇಳಿದ್ದಾರೆ.
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲಿನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜಿ.ಟಿ.ದೇವೇಗೌಡ, ಚನ್ನಪಟ್ಟಣ ಟಿಕೆಟ್ ವಿಚಾರದಲ್ಲಿ ಕುಮಾರಸ್ವಾಮಿ ನನ್ನ ಮಾತನ್ನ ಗಣನೆಗೆ ತೆಗೆದುಕೊಳ್ಳಲಿಲ್ಲ. ಸಿ.ಪಿ.ಯೋಗೇಶ್ವರ್‌ರನ್ನ (Cp Yogeshwar) ಒಗ್ಗೂಡಿಸಿದ್ದೇ ನಾನು. ಆ ನಂತರ ಅವರೇ ಸಂಸತ್ ಚುನಾವಣೆಯಲ್ಲಿ ಒಂದಾದ್ರು ಎಂದಿದ್ದಾರೆ.

ಚನ್ನಪಟ್ಟಣ ಉಪಚುನಾವಣೆ ಟಿಕೆಟ್ ವಿಚಾರದಲ್ಲಿ ಕುಮಾರಸ್ವಾಮಿ ಗೊಂದಲಕ್ಕೆ ಒಳಗಾದ್ರು. ನನ್ನ ಜೊತೆ ಮಾತನಾಡುವಾಗ ಚನ್ನಪಟ್ಟಣದ ನಮ್ಮ ಅಭ್ಯರ್ಥಿ ಸೋಲ್ತಾನೆ ಅಂತ 3 ಬಾರಿ ಅವರೇ ನನ್ನ ಬಳಿ ಹೇಳಿದ್ರು.ಅದೇ ವಿಚಾರಕ್ಕೆ ನನಗೂ ಅವರಿಗೂ ಮನಸ್ತಾಪ ಉಂಟಾಗಿ ನನ್ನ ಮೇಲೆ ಕುಮಾರಸ್ವಾಮಿ ಮುನಿಸಿಕೊಂಡರು ಎಂದು ಹೇಳಿದ್ದಾರೆ.