ಮೈಸೂರು: ಜೆಡಿಎಸ್ ಪಕ್ಷದ ಬಲವರ್ಧನೆಗಾಗಿ ಜೆಡಿಎಸ್ ಸಭೆ ನಡೆಸಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕ ಜಿ.ಟಿ ದೇವೇಗೌಡ ಗೈರು ಹಾಜರಾಗಿದ್ದಾರೆ. ಸಾರಾ ಕನ್ವೇನ್ಷನ್ ಹಾಲ್‌ನಲ್ಲಿ ನಡೆದ ಸಭೆಗೆ ಗೈರು ಹಾಜರಾಗುವ ಮೂಲಕ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ.
ಮುಂದಿನ ಕೆಲವೇ ದಿನಗಳಲ್ಲಿ ಎದುರಾಗಲಿರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗು ಪಾಲಿಕೆ ಚುನಾವಣೆ ಹಿನ್ನಲೆಯಲ್ಲಿ ಕಾರ್ಯಕರ್ತರ ಸಭೆ ಮಾಡಲಾಗಿತ್ತು. ಜೆಡಿಎಸ್ ಪಕ್ಷ ಬಲಪಡಿಸಲು ಕುಮಾರಸ್ವಾಮಿ ನಡೆಸಿದ ಕಾರ್ಯಕರ್ತರ ಸಭೆಗೆ ಜಿ.ಟಿ ದೇವೇಗೌಡರು ಗೈರು ಹಾಜರಾಗಿದ್ದು, ಪಕ್ಷದಲ್ಲಿ ಬಂಡಾಯ ಎನಿಸಿದೆ.
ಮಾಜಿ ಸಚಿವ ಸಾರಾ ಮಹೇಶ್, ಶಾಸಕ ಹರೀಶ್ ಗೌಡ, ಎಂಎಲ್‌ಸಿ ಮಂಜೇಗೌಡ, ಮಾಜಿ ಶಾಸಕ ಅಶ್ವಿನ್ ಕುಮಾರ್ ಸೇರಿದಂತೆ ಜೆಡಿಎಸ್ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು. ಕುಮಾರಸ್ವಾಮಿ ಸಭೆಗೆ ಪುತ್ರ ಹೋದರೂ ಜಿ.ಟಿ ದೇವೇಗೌಡರು ಗೈರು ಹಾಜರಾಗುವ ಮೂಲಕ ರಾಜಕೀಯ ದಾಳ ಉರುಳಿಸಿದ್ದಾರೆ.