ಜಿ.ಎಸ್.ಟಿ (GST) ಸ್ಲ್ಯಾಬ್ ಗಳಲ್ಲಿ ಕೇಂದ್ರ ಸರ್ಕಾರ (Union government) ಮಹತ್ತರ ಬದಲಾವಣೆಗಳನ್ನು ಮಾಡಿದ್ದು, ಆರೋಗ್ಯ ವಲಯ ಮತ್ತು ಶೈಕ್ಷಣಿಕ ವಲಯಕ್ಕೆ ಕೇಂದ್ರ ಸರ್ಕಾರ ಬಿಗ್ ರಿಲೀಫ್ ಕೊಟ್ಟಿದೆ. ಝೀರೋ ಜಿಎಸ್‌ಟಿ ಘೋಷಣೆ ಮಾಡಿ ಗುಡ್‌ನ್ಯೂಸ್ ಕೊಟ್ಟಿದೆ.

ಹೌದು 33 ಜೀವರಕ್ಷಕ ಔಷಧಗಳು, ಕ್ಯಾನ್ಸರ್ ಔಷಧಗಳು, ಅಪರೂಪದ ಕಾಯಿಲೆಗಳ ಔಷಧಗಳು, ವೈಯಕ್ತಿಕ ಜೀವ ವಿಮೆ, ಆರೋಗ್ಯ ಪಾಲಿಸಿಗಳು, ಮ್ಯಾಪ್, ಚಾರ್ಟ್, ಗ್ಲೋಬ್‌ಗಳು, ಪೆನ್ಸಿಲ್‌ಗಳು, ಶಾರ್ಪನರ್, ಕ್ರಯೋನ್, ನೋಟ್‌ಬುಕ್‌ಗಳು, ಪ್ಯಾಸ್ಟೆಲ್‌ಗಳು, ಎರೇಸರ್‌ಗೆ ಜಿಎಸ್‌ಟಿ ಇಲ್ಲ, UHT ಹಾಲು, ಪನೀರ್, ಪಿಜ್ಜಾ, ಬ್ರೆಡ್, ಚಪಾತಿ, ರೋಟಿಯ ಮೇಲಿನ ಜಿಎಸ್‌ಟಿಯನ್ನ ತೆಗೆದು ಹಾಕಲಾಗಿದೆ. ಇದ್ರಿಂದ ದೇಶದ ಮಧ್ಯಮ ವರ್ಗದವರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ.

ಇನ್ನು ಕೆಲವು ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರವನ್ನ ಕೇಂದ್ರ ಸರ್ಕಾರ ಹೆಚ್ಚಿಸಿದೆ. ಅವು ಯಾವು ಅಂತ ನೋಡಿದ್ರೆ..ಪಾನ್ ಮಸಾಲ, ಸಿಗರೇಟ್,ತಂಬಾಕು ಪದಾರ್ಥಗಳ ಮೇಲಿನ ಜಿಎಸ್‌ಟಿಯನ್ನ ಕೇಂದ್ರ ಸರ್ಕಾರ ಶೇಕಡ 40ಕ್ಕೆ ಏರಿಕೆ ಮಾಡಿದೆ. ತಂಪು ಪಾನೀಯಗಳು, ವೈಯಕ್ತಿಕ ಬಳಕೆಯ ವಿಮಾನ, ನಾನ್ ಆಲ್ನೋಹಾಲ್ ಪಾನೀಯಗಳ ಮೇಲಿನ ಜಿಎಸ್‌ಟಿ ಏರಿಕೆಯಾಗಿದೆ.