ಮಹಿಳೆ ಗೃಹಿಣಿಯಾಗಿ ಮನೆಯೊಡತಿಯಾಗಿ ಮುಂದುವರೆಯಲು ಆರ್ಥಿಕವಾಗಿ ಸ್ವಾವಲಂಬಿ ಗಳಗಾಲು ನಮ್ಮ ಸರ್ಕಾರ ಗೃಹ ಶಕ್ತಿ ಯೋಜನೆ ಜಾರಿಗೆ ತಂದಿದೆ ಎಂದು ಸಚಿವ ಶಿವಲಿಂಗೇಗೌಡ ಹೇಳಿದ್ದಾರೆ.
ಮೈಸೂರಿನಲ್ಲಿ ಬುಧವಾರ (ಆಗಸ್ಟ್ 30) ಆಯೋಜಿಸಿರುವ ಗೃಹಲಕ್ಷ್ಮಿ ಯೋಜನೆ ಉದ್ಘಾಟನೆಗೂ ಮುನ್ನ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನಮಗೆ ಕೇಂದ್ರ ಸರ್ಕಾರ ಅಕ್ಕಿ ಕೊಡದೇ ಅನ್ಯಾಯ ಮಾಡಿದೆ. ಗೊಡೌನ್ ನಲ್ಲಿ ಅಕ್ಕಿ ಕೊಳೀತಾ ಇದೆ. ಆದರೂ ನಮ್ಮ ಸರ್ಕಾರ ಎದೆಗುಂದದೆ ಮುನ್ನಡೆಯುತ್ತಿದೆ. ಮುಂದಿನ ತಿಂಗಳು ನಿರುದ್ಯೋಗಿಗಳಿಗೆ 3೦೦೦ ರೂ. ಕೊಡುತ್ತೇವೆ. ಬಡವರ ಪರ ಇರುವ ಸರ್ಕಾರ ನಮ್ಮದು ಎಂದು ಹೇಳಿದರು.
ಕೇಂದ್ರ ಸರ್ಕಾರ ಕಪ್ಪು ಹಣ ಇಟ್ಟವರಿಗೆ ಸಹಾಯ ಮಾಡುತ್ತಿದೆ ಹೊರತು, ನೀವು ಸೈನಿಕರಿಗಾಗಲಿ ,ರೈತರ ಹಿತಕ್ಕಾಗಿ ಮಾಡುತ್ತಿಲ್ಲ. ಆದರೆ ಸಿದ್ದರಾಮಯ್ಯನವರ ಸರ್ಕಾರ ಇದೆಲ್ಲದಕ್ಕೂ ಅಡಿಗಲ್ಲಾಗಿ ನಿಂತಿದೆ ಎಂದರು.