ಗದಗ:ಗಜೇಂದ್ರಗಢದ ಅತ್ತೆ-ಸೊಸೆ ಗೃಹಲಕ್ಷ್ಮೀ ಯೋಜನೆಯ ಹಣದ ಸಹಾಯದಿಂದ ತಮ್ಮ ಜಮೀನಿನಲ್ಲಿ ಕೊಳವೆಬಾವಿ ಕೊರೆಸುವ ಮೂಲಕ ಬಂದ ಹಣವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ.
ಪಟ್ಟಣದ ಮಾಲ್ದಾರ್ ಕುಟುಂಬದ ಅತ್ತೆ-ಸೊಸೆಯಾದ ಮಾಬೂಬೀ ಮತ್ತು ರೋಷನ್ ಬೇಗಂ ಇಬ್ಬರು ಸೇರಿ ಬಂದ ಗೃಹಲಕ್ಷ್ಮೀಯ ಒಟ್ಟು ಹಣವನ್ನು ಸೇರಿಸಿ ತಮ್ಮ 3ಎಕರೆ ಜಮೀನಿನಲ್ಲಿ ಕೊಳವೆಬಾವಿ ಕೊರೆಸುವುದಕ್ಕೆ ಬಳಸಿಕೊಂಡಿದ್ದಾರೆ.
ಕೊಳವೆಬಾವಿ ಕೊರೆಸಲು ಒಟ್ಟು ಖರ್ಚು 60ಸಾವಿರ ರೂಪಾಯಿಗಳಾಗಿದ್ದು ಅದರಲ್ಲಿ 44ಸಾವಿರ ರೂಪಾಯಿ ಗೃಹಲಕ್ಷ್ಮಿ ಹಣವಾಗಿದೆ ಇನ್ನೂಳಿದ 16ಸಾವಿರ ರೂಪಾಯಿಗಳನ್ನು ಮಾಬೂಬೀ ರವರ ಮಗನಾದ ನಜ಼ೀರ್ ಮಲ್ದಾರ್ ಭರಿಸಿದ್ದಾರೆ.
ಸಿದ್ಧರಾಮಯ್ಯನವರ ಸರ್ಕಾರದ ಯೋಜನೆಗಳು ನಮ್ಮಂತ ಬಡವರಿಗೆ ತುಂಬಾ ಉಪಯುಕ್ತವಾಗಿದೆ, ಡಿಸೆಂಬರ್10ರಂದು ಕೊರೆಸಿದ್ದು ಒಂದೂವರೆ ಇಂಚು ನೀರು ಬಂದಿದೆ ಎಂದರು.