ಬೆಂಗಳೂರು: ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದಾದ ಗೃಹಜ್ಯೋತಿ ಯೋಜನೆಯ ನೋಂದಣಿ ಕಾರ್ಯಕ್ಕೆ ಸರ್ಕಾರ ಜೂನ್ 18ರಂದು ಅಧಿಕೃತವಾಗಿ ಚಾಲನೆ ನೀಡಿತ್ತು. ಇದೀಗ ಗೃಹ ಜ್ಯೋತಿ ನೋಂದಣಿ ಕಾರ್ಯ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಈವೆರೆಗೆ 1,61,958 ಲಕ್ಷ ಗ್ರಾಹಕರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ಧಾರೆ. ಮೊದಲ ದಿನ 55,000 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದರು.
ಬೆಂಗಳೂರು ಓನ್, ಗ್ರಾಮ ಓನ್ ಹಾಗೂ ಕರ್ನಾಟಕ ಓನ್ ಕಚೇರಿಗಳಲ್ಲಿ ನೋಂದಣಿ ಕಾರ್ಯ ನಿರಾತಂಕವಾಗಿ ನಡೆದಿದೆ. 2ನೇ ದಿನದಂದು ಗ್ರಾಹಕರ ಸಂಖ್ಯೆ ದುಪ್ಪಟ್ಟುಗೊಂಡಿದ್ದು, ಸೋಮವಾರ 1,06,958 ಲಕ್ಷ ಮಂದಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ.
ನೋಂದಣಿ ಪ್ರಕ್ರಿಯೆ ಸತ್ಯಂತ ಸರರಳವಾಗಿದ್ದು, ಗ್ರಾಹಕರು ಯಾವುದೇ ದಾಖಲೆಗಳನ್ನು ನೀಡಬೇಕಾಗಿಲ್ಲ. ವಿದ್ಯುತ್ ಬಿಲ್ಲಿನಲ್ಲಿರುವ ಗ್ರಾಹಕರ ಸಂಖ್ಯೆ, ಆಧರದದ ಸಂಖ್ಯೆ, ದೂರವಾಣಿ ಸಂಖ್ಯೆಯನ್ನು ನಮೂದಿಸಬೇಕು. ನೋಂದಣಿ ಕಾರ್ಯವು ಬೆಂಗಳೂರು ಓವ್, ಗ್ರಾಮ ಓನ್ ಹಾಗೂ ಕರ್ನಾಟಕ ಓನ್ ಕಚೇರಿಗಳಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಮಾಡಲಾಗುತ್ತಿದೆ. ನೋಂದಣಿ ಕಾರ್ಯಕ್ಕೆ ಸರ್ಕಾರ ಯಾವುದೇ ಗಡುವು ನಿಗದಿಪಡಿಸಿಲ್ಲವಾದ್ದರಿಂದ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.