ಬಿಜೆಪಿ (BJP) ರಾಜ್ಯ ಕಾರ್ಯಕಾರಿಣಿ ಸಭೆ ಹಿನ್ನೆಲೆ ಪಕ್ಷಕ್ಕೆ ವಾಪಸ್ಸಾದ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish shetter) ಅಧಿಕೃತವಾಗಿ ಸಭೆಗೆ ಆಗಮಿಸಿದರು.
ಕಳೆದೆರಡು ದಿನಗಳ ಹಿಂದೆ ದೆಹಲಿಯ ರಾಷ್ಟ್ರೀಯ ನಾಯಕರ ಸಮಕ್ಷಮದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದ ಜಗದೀಶ್ ಶೆಟ್ಟರ್ ಇಂದು ಕಮಲ ಪಾಳಯಕ್ಕೆ ಎಂಟ್ರಿ ಕೊಟ್ಟರು.ಇನ್ನು ಬಿಜೆಪಿ ತೊರೆದು ಹೋಗಿ, ಘರ್ ವಾಪ್ಸಿ ಆಗಿರುವ ಜಗದೀಶ್ ಶೆಟ್ಟರ್ ಇಂದು ಅಧಿಕೃತವಾಗಿ ಬಿಜೆಪಿಯ ಕಾರ್ಯಕಾರಿಣಿ ಸಭೆಗೆ ಆಗಮಿಸಿದ್ದು, ಶೆಟ್ಟರ್ ಆಗಮಿಸುತ್ತಿದಂತೆ ಬಿಜೆಪಿಯ ನಾಯಕರುಗಳು ಸ್ವಾಗತ ಕೋರಿದರು.
ಕಾಂಗ್ರೆಸ್ ನಿಂದ ಬಿಜೆಪಿಗೆ ಮರಳಿ ಬಂದ ಶೆಟ್ಟರ್ ನೋಡಿ ಬಿಜೆಪಿ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು. ಅಲ್ಲದೆ ಈಶ್ವರಪ್ಪ ಹಾಗೂ ಜೋಶಿ ಸಿಟಿ ರವಿ ಶೆಟ್ಟರ್ ಅವರನ್ನು ನಗು ಮುಖದೊಂದಿಗೆ ಸ್ವಾಗತಿಸಿದರು