
ಬಿಡದಿ ಟೌನ್ ಶಿಪ್ಗೆ ರೈತರ ಭೂಮಿ ವಶಕ್ಕೆ ಪಡೆದಿರೋದನ್ನು ಕೈಬಿಡುವಂತೆ ಸಿಎಂ ಸಿದ್ದರಾಮಯ್ಯಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಪತ್ರ ಬರೆದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಡಿಕೆ ಶಿವಕುಮಾರ್ ಮಾತನಾಡಿದ್ದು, ಕುಮಾರಸ್ವಾಮಿ ಕಾಲದಲ್ಲೇ 7 ಟೌನ್ ಶಿಪ್ ಮಾಡಬೇಕು ಅಂತ ತೀರ್ಮಾನ ಆಗಿದ್ದು, ಅದಕ್ಕಾಗಿ 300 ಕೋಟಿ ರೂಪಾಯಿ ಹಣವನ್ನೂ ಕೊಟ್ಟಿದ್ರು ಎಂದು ತಿರುಗೇಟು ನೀಡಿದ್ದಾರೆ.

ಟೌನ್ ಶಿಪ್ ಯೋಜನೆ ಆಗಿದ್ದು ಕುಮಾರಸ್ವಾಮಿ ಅವರ ಕಾಲದಲ್ಲೇ ಎಂದಿರುವ ಡಿಸಿಎಂ ಡಿ.ಕೆ ಶಿವಕುಮಾರ್, ನಾನು ಡಿನೋಟಿಫಿಕೇಶ್ ಮಾಡಲು ಹೋಗಲ್ಲ. ಈ ಹಿಂದೆ ನನ್ನ ಮೇಲೆ ಏನೆಲ್ಲಾ ಹೇಳಿದ್ರು, ಅದೆಲ್ಲ ಇತಿಹಾಸ. ಟೌನ್ ಶಿಪ್ ಪಿತಾಮಹ ದೇವೇಗೌಡ ಹಾಗೂ ಕುಮಾರಸ್ವಾಮಿ ಎಂದು ತಿರುಗೇಟು ನೀಡಿದ್ದಾರೆ.

ಇನ್ನು ಯಾರು ಏನೇ ಹೇಳಿದ್ರು ಗ್ರೇಟರ್ ಬೆಂಗಳೂರು ಮಾಡಿಯೇ ಮಾಡುತ್ತೇವೆ ಎಂದಿರುವ ಡಿ.ಕೆ ಶಿವಕುಮಾರ್, ಬೆಂಗಳೂರಿಗಿಂತ ಚೆನ್ನಾಗಿ ಮಾಡುತ್ತೇವೆ. 10 ಸಾವಿರ ಎಕರೆಯಲ್ಲಿ ಉತ್ತಮ ಸಿಟಿ ನಿರ್ಮಾಣ ಮಾಡುತ್ತೇವೆ ಇದು ಮಾಡೆಲ್ ಸಿಟಿ ಆಗತ್ತದೆ. ರೈತರು ಜಮೀನಿನ ಬದಲಾಗಿ, ದುಡ್ಡು ತೆಗೆದುಕೊಳ್ಳಬಹುದು. ಇಲ್ಲದಿದ್ರೆ ಅಭಿವೃದ್ದಿ ಪಡಿಸಿದ ಲ್ಯಾಂಡ್ ತೆಗೆದುಕೊಳ್ಳಬಹುದು ಎಂದಿದ್ದಾರೆ.

ಎರಡು ಬಾರಿ ಕುಮಾರಸ್ವಾಮಿ ಸಿಎಂ ಆಗಿದ್ರಲ್ಲ ಯಾಕೆ ರೈತರ ಭೂಮಿ ಸ್ವಾಧೀನದಿಂದ ಕೈ ಬಿಡಲಿಲ್ಲ..? ಎಂದು ಪ್ರಶ್ನೆ ಮಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಈ ಬಗ್ಗೆ ದೇವೇಗೌಡರೇ ಮಾತನಾಡಬೇಕು ಎಂದು ಆಗ್ರಹ ಮಾಡಿದ್ದಾರೆ. ಇದರಲ್ಲಿ ರಾಜಕೀಯ ಬೇಡ. ಇದೆಲ್ಲ ನಿಮ್ಮ ಮಗನೆ ಮಾಡಿದ್ದು, ನಿಮ್ಮ ಕಾಲದಲ್ಲೇ ಆಗಿದ್ದು ಅನ್ನೋ ಮೂಲಕ ದೇವೇಗೌಡರಿಗೆ ಡಿ.ಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.