• Home
  • About Us
  • ಕರ್ನಾಟಕ
Monday, July 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಕುಸಿದ ಆಡಳಿತ ಯಂತ್ರ ಕಸಿದ ಜನರ ಸ್ವಾತಂತ್ರ್ಯ

ನಾ ದಿವಾಕರ by ನಾ ದಿವಾಕರ
April 6, 2022
in ಅಭಿಮತ
0
ಉಪಚುನಾವಣೆ ಸೋಲು : ಸಿಎಂ ಬೊಮ್ಮಾಯಿಗೆ ಬಿಜೆಪಿ ಹೈಕಮಾಂಡ್ ಕೇಳಿದ ಐದು ಪ್ರಶ್ನೆಗಳೇನು?
Share on WhatsAppShare on FacebookShare on Telegram
ADVERTISEMENT

ಆಡಳಿತ ಯಂತ್ರದ ಮೇಲೆ ನಿಯಂತ್ರಣವನ್ನೇ ಕಳೆದುಕೊಂಡಿರುವ ಮೌನಿ ಸರ್ಕಾರ

ಕರ್ನಾಟಕದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, ಇಲ್ಲಿ ಒಂದು ಚುನಾಯಿತ ಸರ್ಕಾರ ಆಡಳಿತ ನಡೆಸುತ್ತಿದೆಯೇ ಎಂಬ ಅನುಮಾನ ಮೂಡುವುದು ಖಚಿತ. ಎಂತಹುದೇ ನಿಷ್ಕ್ರಿಯ ಸರ್ಕಾರವಾದರೂ ಸಾರ್ವಜನಿಕ ಬದುಕು ಪ್ರಕ್ಷುಬ್ಧವಾಗುತ್ತಿರುವ ಹೊತ್ತಿನಲ್ಲಿ ತನಗೆ ಸಂಬಂಧವೇ ಇಲ್ಲದಂತೆ ಮೌನವಹಿಸುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಸರ್ಕಾರಗಳ ಪ್ರಥಮ ಆದ್ಯತೆ ಕಾನೂನು ಸುವ್ಯವಸ್ಥೆಯನ್ನು ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡುವುದೇ ಆಗಿರುತ್ತದೆ. ಪೊಲೀಸ್‌ ಇಲಾಖೆ ಇರುವುದು ಕೇವಲ ಅಪರಾಧಗಳನ್ನು ತಡೆಗಟ್ಟುವುದಕ್ಕೆ ಮಾತ್ರವೇ ಅಲ್ಲ ಅಥವಾ ಅಪರಾಧಿಗಳ ಲೋಕವನ್ನು ಗಮನಿಸುವುದಕ್ಕಲ್ಲ. ಸಮಾಜದಲ್ಲಿ ನಡೆಯುವ ಎಲ್ಲ ರೀತಿಯ ವಿಧ್ವಂಸಕ, ವಿಚ್ಚಿದ್ರಕಾರಕ ಮತ್ತು ಸಮಾಜಘಾತುಕ ಚಟುವಟಿಕೆಗಳನ್ನೂ ಗಮನಿಸುತ್ತಾ, ಸಮಸ್ತ ನಾಗರಿಕರು ನೆಮ್ಮದಿಯಿಂದ ಬದುಕಲು ನೆರವಾಗುವಂತಹ ಒಂದು ಶಾಂತಿಯುತ, ಸೌಹಾರ್ದಯುತ ವಾತಾವರಣವನ್ನು ಕಾಪಾಡುವುದು ಪೊಲೀಸ್‌ ಇಲಾಖೆಯ ಆದ್ಯತೆಯಾಗಿರುತ್ತದೆ.  ಈ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಬೇಕಾದ ಅಗತ್ಯ ನೆರವು ನೀಡುವುದು ಮತ್ತು ಪ್ರೋತ್ಸಾಹ  ನೀಡುವುದು ಚುನಾಯಿತ ಸರ್ಕಾರದ ಆದ್ಯತೆಯಾಗಬೇಕಾಗುತ್ತದೆ. ಇದು ಇಲ್ಲವಾದಾಗ ಸಮಾಜಘಾತುಕ ಶಕ್ತಿಗಳೇ ಮೇಲುಗೈ ಸಾಧಿಸಿ, ಜನಸಮುದಾಯಗಳ ನಡುವೆ ವೈಷಮ್ಯಗಳನ್ನು ಹೆಚ್ಚಿಸಿ, ಪಟ್ಟಭದ್ರ ಹಿತಾಸಕ್ತಿಗಳಿಗೆ ನೆರವಾಗುವಂತಹ ಪ್ರಕ್ಷುಬ್ಧ ವಾತಾವರಣವನ್ನು ನಿರ್ಮಿಸುತ್ತವೆ. ಇಂತಹ ಒಂದು ಸನ್ನಿವೇಶವನ್ನು ಕರ್ನಾಟಕದಲ್ಲಿ ಇಂದು ಕಾಣುತ್ತಿದ್ದೇವೆ.

ಕಳೆದ ಆರು ತಿಂಗಳಲ್ಲಿ ಕರ್ನಾಟಕ ಹಲವು ರೀತಿಯ ರಾಜಕೀಯ ಪ್ರಕ್ಷುಬ್ಧತೆಗೆ ಈಡಾಗಿದೆ. ಹಲವು ರೀತಿಯ ಸಾಂಸ್ಕೃತಿಕ ಪಲ್ಲಟಗಳಿಗೆ ಗುರಿಯಾಗಿದೆ. ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹಾಗೂ ಮುಂಬರುವ ಚುನಾವಣೆಗಳಲ್ಲಿ ಗೆದ್ದು ಪುನಃ ಅಧಿಕಾರಕ್ಕೆ ಬರಲು ತಾನು ರೂಪಿಸಿದ ಜನಪರ ಯೋಜನೆಗಳು ಮತ್ತು ನೀತಿಗಳನ್ನು ಅವಲಂಬಿಸಬೇಕಾದ ರಾಜ್ಯ ಬಿಜೆಪಿ ಸರ್ಕಾರ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ರಾಜಕೀಯ ಭ್ರಷ್ಟತೆಯಿಂದ ತತ್ತರಿಸುತ್ತಿದ್ದು, ತನ್ನ ಕೋಮುವಾದಿ ಮತೀಯ ರಾಜಕಾರಣದ ಮೂಲಕ ಜನಸಾಮಾನ್ಯರ ನಡುವೆ ಒಡಕು ಉಂಟುಮಾಡಲೆತ್ನಿಸುತ್ತಿದೆ. ಶ್ರೀಯುತ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡಕೂಡಲೇ ದಕ್ಷಿಣಕನ್ನಡ, ಮಲೆನಾಡು ಮತ್ತು ಕರಾವಳಿಯಲ್ಲಿ ಉಲ್ಬಣಿಸಿದ ಮತಾಂಧರ ಉಪಟಳವನ್ನು ಕೂಡಲೇ ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಜರುಗಿಸಿದ್ದಲ್ಲಿ ಬಹುಶಃ ಇಂದು ಕತ್ತಿ ತಲವಾರು ಹಿಡಿದ ಮತಾಂಧ ಶಕ್ತಿಗಳು ಸಾರ್ವಜನಿಕ ಬದುಕನ್ನು ಅಸ್ತವ್ಯಸ್ತಗೊಳಿಸುತ್ತಿರಲಿಲ್ಲ. ತಮ್ಮ “ ಕ್ರಿಯೆ ಇದ್ದರೆ ಪ್ರತಿಕ್ರಿಯೆ ಇದ್ದೇ ಇರುತ್ತದೆ ” ಎಂಬ ಹೇಳಿಕೆಯ ಮೂಲಕ ಹಿಂದೂ ಮತ್ತು ಮುಸ್ಲಿಂ ಮತಾಂಧರಿಗೆ ಉತ್ತೇಜನ ನೀಡುವ ಮಾತುಗಳನ್ನಾಡುವ ಬದಲು, ಮಾನ್ಯ ಮುಖ್ಯಮಂತ್ರಿಗಳು ಎಲ್ಲ ರೀತಿಯ ಸಮಾಜಘಾತುಕ, ಮತಾಂಧ ಶಕ್ತಿಗಳನ್ನೂ ನಿಯಂತ್ರಿಸುವ ಕ್ರಮ ಕೈಗೊಂಡಿದ್ದರೆ, ಬಹುಶಃ ಹಿಜಾಬ್‌ ಹಲಾಲ್‌ ವಿವಾದಗಳು ಉಲ್ಬಣಿಸುತ್ತಿರಲಿಲ್ಲ.

ಒಂದು ಸಣ್ಣ ಕಾಲೇಜಿನಲ್ಲಿ ಆರಂಭವಾದ ಹಿಜಾಬ್‌ ವಿವಾದವನ್ನು ಸ್ಥಳೀಯ ಮಟ್ಟದಲ್ಲೇ ಬಗೆಹರಿಸುವ ಸಾಧ್ಯತೆಗಳಿದ್ದವು. ಪಾರಂಪರಿಕವಾಗಿ ನಡೆದುಬಂದಂತಹ ಒಂದು ಧಾರ್ಮಿಕ ಆಚರಣೆಯನ್ನು ಸಾರ್ವಜನಿಕ ವಿವಾದಕ್ಕೀಡುಮಾಡುವ ಮತೀಯವಾದಿ ಸಂಘಟನೆಗಳನ್ನು ಹೊರಗಿಟ್ಟು, ಕಾಲೇಜು ಆಡಳಿತ ಮಂಡಳಿ, ಸ್ಥಳೀಯ ರಾಜಕೀಯ ಮತ್ತು ಧಾರ್ಮಿಕ ನಾಯಕರೊಡನೆ ಸಮಾಲೋಚನೆ ನಡೆಸುವ ಮೂಲಕ ವಿವಾದವನ್ನು ಬಗೆಹರಿಸಬಹುದಿತ್ತು. ಕೆಲವು ಮತೀಯ ಕಾವಲುಪಡೆಗಳು ಶಾಲಾ ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳನ್ನು ರಸ್ತೆಯಲ್ಲೇ ತಡೆಹಿಡಿದು ಹಿಂಸಿಸುತ್ತಿದ್ದರೂ, ಅಂಥವರನ್ನು ನಿಯಂತ್ರಿಸಲೆತ್ನಿಸದೆ, ರಾಜ್ಯದ ಕೆಲವು ಸಚಿವರು, ಶಾಸಕರು ಕೋಮುವಾದವನ್ನು ಉತ್ತೇಜಿಸುವಂತಹ ಹೇಳಿಕೆಗಳನ್ನು ನೀಡುತ್ತಿದ್ದರೂ, ಪರಿಸ್ಥಿತಿಯನ್ನು ಸುಧಾರಿಸುವ ಯಾವುದೇ ಕ್ರಮ ಕೈಗೊಳ್ಳದೆ ರಾಜ್ಯ ಸರ್ಕಾರ ತನ್ನ ಬೇಜವಾಬ್ದಾರಿಯನ್ನು ಪ್ರದರ್ಶಿಸಿದೆ. ಹಿಜಾಬ್‌ ಕಾರಣಕ್ಕಾಗಿಯೇ ಸಾವಿರಾರು ಮುಸ್ಲಿಂ ಹೆಣ್ಣುಮಕ್ಕಳು ಪರೀಕ್ಷೆ ಬರೆಯಲಾಗದೆ, ಶಿಕ್ಷಣ ವಂಚಿತರಾಗಿರುವುದಕ್ಕೆ ಸರ್ಕಾರದ ಅಸೂಕ್ಷ್ಮ, ಬೇಜವಾಬ್ದಾರಿಯುತ ಧೋರಣೆಯೇ ಕಾರಣವಾಗಿದೆ. ಹೈಕೋರ್ಟ್‌ ತೀರ್ಪು ಬಂದ ನಂತರವೂ ರಾಜ್ಯ ಸರ್ಕಾರ ಸಂಬಂಧಪಟ್ಟ ವಿದ್ಯಾರ್ಥಿಗಳು, ಪೋಷಕರು, ಸಮಾಜದ ಹಿರಿಯರು, ಧಾರ್ಮಿಕ ನಾಯಕರೊಡನೆ ಸಮಾಲೋಚನೆ ನಡೆಸಿ, ಈ ಹೆಣ್ಣುಮಕ್ಕಳಿಗೆ ಪರೀಕ್ಷೆ ಬರೆಯುವಂತೆ ಮಾಡಬಹುದಿತ್ತು. ಆದರೆ ಈ ವಿಚಾರದಲ್ಲಿ ಮತೀಯವಾದಿ ಕಾವಲುಪಡೆಗಳ ಮತ್ತು ಮತಾಂಧ ನಾಯಕರ ಅಭಿಪ್ರಾಯಗಳಿಗೇ ಹೆಚ್ಚಿನ ಮನ್ನಣೆ ನೀಡುವ ಮೂಲಕ ರಾಜ್ಯ ಸರ್ಕಾರ ತನ್ನ ನೈತಿಕ ಹೊಣೆಯನ್ನು ಮರೆತಂತಿದೆ.

ಈ ಘಟನೆಗಳಿಂದ ಉತ್ತೇಜಿತರಾಗಿಯೇ ಮತೀಯ ಕಾವಲುಪಡೆಗಳು, ಹಿಂದೂ ಮತಾಂಧ ಪಡೆಗಳು ಇಂದು ಮಾರುಕಟ್ಟೆ ಆವರಣದಲ್ಲಿ ಬಂದು ಗಲಭೆ ಸೃಷ್ಟಿಸುವುದರಲ್ಲಿ ತೊಡಗಿವೆ. ಯಾವುದೇ ಕಾನೂನು ಕಟ್ಟಳೆಗಳ ಭೀತಿಯಿಲ್ಲದೆ, ಪೊಲೀಸ್‌ ನಿಯಂತ್ರಣದ ಭೀತಿ ಇಲ್ಲದೆ ಮತಾಂಧರ ಗುಂಪುಗಳು ಅಲ್ಪಸಂಖ್ಯಾತರ ನಿತ್ಯಬದುಕಿನ ಮೇಲೆ ಸಹ ದಾಳಿಮಾಡಲಾರಂಭಿಸಿವೆ. ಹಿಂದೂಗಳು ನಡೆಸುವ ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ನಿಷೇಧ ಹೇರುವುದು, ದೇವಾಲಯಗಳ ಬಳಿ ಮುಸ್ಲಿಂ ಅಂಗಡಿ ಮುಗ್ಗಟ್ಟುಗಳನ್ನು ನಿಷೇಧಿಸುವುದು ಸರ್ಕಾರದ ನಿರ್ಧಾರ ಆಗಿರಬೇಕೇ ಹೊರತು ಯಾವುದೋ ಒಂದು ನಿರ್ದಿಷ್ಟ ಮತೀಯ ಗುಂಪಿನ ನಿರ್ಧಾರವಲ್ಲ. ಸಾರ್ವಜನಿಕ ಸ್ಥಳದಲ್ಲಿ ವ್ಯಾಪಾರ ನಡೆಸುವ ಜನತೆಯ ಸಾಂವಿಧಾನಿಕ ಹಕ್ಕನ್ನು ಕಸಿದುಕೊಳ್ಳುವ ಅಧಿಕಾರ, ನಿರ್ದಿಷ್ಟ ಸಕಾರಣವಿಲ್ಲದೆ, ಸರ್ಕಾರಕ್ಕೂ ಇರುವುದಿಲ್ಲ. ನ್ಯಾಯಾಲಯಗಳ ಕೆಲವು ಆದೇಶಗಳ ಮೇರೆಗೆ ಈಗ ಅನುಸರಿಸಲಾಗುತ್ತಿರುವ ನಿರ್ಭಂಧ, ನಿಬಂಧನೆಗಳನ್ನು ಹರತುಪಡಿಸಿ ಮತ್ತಾವುದೇ ನಿರ್ಬಂಧಗಳನ್ನು ಹೇರುವುದು ಕಾನೂನುಬಾಹಿರ ಎನಿಸಿಕೊಳ್ಳುತ್ತದೆ. ಆದರೆ ರಾಜ್ಯದಾದ್ಯಂತ ಹಿಂದೂ ಮತಾಂಧ ಗುಂಪುಗಳು ಹಲವು ಜಾತ್ರೆಗಳಲ್ಲಿ ಈ ರೀತಿಯ ನಿಷೇಧ ಹೇರುತ್ತಿದ್ದು, ಆಡಳಿತ ಪಕ್ಷದ ಕೆಲವು ಶಾಸಕರೂ ಇದನ್ನು ಬೆಂಬಲಿಸುತ್ತಿದ್ದಾರೆ. ಜನರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಬೇಕಾದ ಸರ್ಕಾರ ಕೈಕಟ್ಟಿ ಕುಳಿತಿದೆ.

ಸರ್ಕಾರದ ಈ ನಿಷ್ಕ್ರಿಯತೆಯ ಪರಿಣಾಮ ಕೆಲವು ಮತಾಂಧ ಸಂಘಟನೆಗಳು ಮುಸ್ಲಿಂ ಸಮುದಾಯದ ಆಹಾರದ ಹಕ್ಕಿನ ಮೇಲೆ ದಾಳಿ ನಡೆಸುವುದಕ್ಕೆ ಸುಗಮ ಹಾದಿ ಸೃಷ್ಟಿಯಾಗಿದೆ. ಉಗಾದಿ ಹಬ್ಬದ ಸಂದರ್ಭದಲ್ಲಿ ಸೃಷ್ಟಿಸಲಾದ ಹಲಾಲ್-ಜಟ್ಕಾ ಕಟ್‌ ವಿವಾದ ಅನಪೇಕ್ಷಿತವಷ್ಟೇ ಅಲ್ಲ, ಅನಾಗರಿಕವೂ ಹೌದು. ನಾಡಿನ ಸಮಸ್ತ ಜನತೆಗೆ ಉಗಾದಿಯ-ಹೊಸ ಸಂವತ್ಸರದ ಶುಭಾಕಾಂಕ್ಷೆಗಳನ್ನು ಹೇಳಿದ ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯ ಸರ್ಕಾರಕ್ಕೆ, ಉಗಾದಿಯ ಮರುದಿನ, ನಾಡಿನ ಬಹುಸಂಖ್ಯೆಯ ಜನರು ಆಚರಿಸುವ, ವರ್ಷ ತೊಡಕು ಹಬ್ಬದ ಸಂದರ್ಭದಲ್ಲಿ ಜನರು ಪೊಲೀಸ್‌ ರಕ್ಷಣೆಯೊಂದಿಗೆ ತಮಗೆ ಬೇಕಾದ ಮಾಂಸ ಖರೀದಿಸಬೇಕಾದ್ದು ಅವಮಾನಕರವಲ್ಲವೇ ? ನೆಮ್ಮದಿಯಿಂದ ವರ್ಷತೊಡಕು ಆಚರಿಸಿ, ತಿಂದುಂಡು, ವರ್ಷದ ಮೊದಲ ದಿನವನ್ನು ಸಂಭ್ರಮದಿಂದ ಕಳೆಯಬೇಕಾದ ಜನರು ಪೊಲೀಸ್‌ ಕಣ್ಗಾವಲಿನಲ್ಲಿ ಮಾಂಸ ಖರೀದಿಸಬೇಕಾದ ಸನ್ನಿವೇಶ ಸೃಷ್ಟಿಯಾದದ್ದಾದರೂ ಹೇಗೆ ? ಯಾರಿಂದ ? ಕಾಲಾನುಕ್ರಮದಿಂದ ಅನೂಚಾನವಾಗಿ ಆಚರಿಸಿಕೊಂಡು ಬಂದಿದ್ದ ಒಂದು ಹಬ್ಬವನ್ನು ಹೀಗೆ ಏಕಾಏಕಿ ಧಾರ್ಮಿಕ ಅಸ್ಮಿತೆಗಳ ಘರ್ಷಣೆಯ ನೆಲೆಗಳನ್ನಾಗಿ ಮಾಡಿದ ಸಮಾಜಘಾತುಕ ಶಕ್ತಿಗಳನ್ನು ನಿಗ್ರಹಿಸುವುದು ಸರ್ಕಾರದ ಕರ್ತವ್ಯವಾಗಿತ್ತಲ್ಲೇ? ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರೇ ಯಾವುದೇ ಬೆದರಿಕೆಗೆ ಜಗ್ಗದೆ ತಮ್ಮ ಪ್ರಜ್ಞಾನುಸಾರವಾಗಿ ನಡೆದುಕೊಂಡು ಹಬ್ಬ ಆಚರಿಸಿದ್ದಾರೆ.

ಆದರೆ ಈ ವಿಚಾರದಲ್ಲಿ ಸರ್ಕಾರದ ನಿಷ್ಕ್ರಿಯತೆಯನ್ನು ಗಮನಿಸಿಯೇ ಈಗ ಹಿಂದೂ ಮತಾಂಧ ಪಡೆಗಳು ಮಸೀದಿಯಲ್ಲಿ ಧ್ವನಿವರ್ಧಕ ಬಳಸುವುದರ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ. ಮುಂಜಾನೆ ಮತ್ತು ಸಂಜೆ ಕೆಲವು ನಿಮಿಷಗಳ ಕಾಲ ಅಝಾನ್‌ ಸಮಯದಲ್ಲಿ ಕೇಳಿಬರುವ ಈ ಸದ್ದು ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುತ್ತದೆ ಎಂಬ ಕ್ಷುಲ್ಲಕ ಆರೋಪಕ್ಕೆ ಸರ್ಕಾರವೇ ಉತ್ತರ ನೀಡಬಹುದಿತ್ತು. ಈಗಾಗಲೇ ಸುಪ್ರೀಂಕೋರ್ಟ್‌ ಆದೇಶದನ್ವಯ ಸಾರ್ವಜನಿಕ ಸ್ಥಳಗಳಲ್ಲಿ, ಪೂಜಾ ವಲಯಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವಾಗ ಶಬ್ದದ ನಿರ್ದಿಷ್ಟ ಮಾನದಂಡಗಳನ್ನು ನಿಗದಿಪಡಿಸಲಾಗಿದ್ದು, ಈ ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದೂ ಸರ್ಕಾರದ ಕರ್ತವ್ಯವೇ ಆಗಿದೆ. ಆದರೆ ಕೆಲವು ಹಿಂದೂ ಮತಾಂಧರು ತಾವೂ ಸಹ ದೇವಾಲಯಗಳಲ್ಲಿ ಅಷ್ಟೇ ಸದ್ದುಮಾಡುವ ಧ್ವನಿವರ್ಧಕಗಳನ್ನು ಬಳಸುತ್ತೇವೆ ಎನ್ನುವುದು ಶಬ್ದಮಾಲಿನ್ಯವನ್ನು ಹೆಚ್ಚು ಮಾಡುವುದೇ ಅಲ್ಲದೆ, ಸಮಾಜದಲ್ಲಿ ಬೌದ್ಧಿಕ ಮಾಲಿನ್ಯವನ್ನೂ ಹೆಚ್ಚಿಸುತ್ತಾ ಹೋಗುತ್ತದೆ. ಈ ದ್ವೇಷ ರಾಜಕಾರಣದ ಪೋಷಕರಿಗೆ ಕಡಿವಾಣ ಹಾಕುವುದು ಕರ್ತವ್ಯದ ಆದ್ಯ ಕತ್ಯವ್ಯವಲ್ಲವೇ? ಎಲ್ಲವನ್ನೂ ನ್ಯಾಯಾಂಗವೇ ನಿರ್ಧರಿಸಬೇಕೆಂದರೆ ಶಾಸಕಾಂಗ ಇರುವುದಾದರೂ ಏತಕ್ಕಾಗಿ ? ಜನರು224 ಪ್ರತಿನಿಧಿಗಳನ್ನು ಆಯ್ಕೆ ಮಾಡಿರುವ ಉದ್ದೇಶವಾದರೂ ಏನು ?

ಎಲ್ಲ ಜನಸಮುದಾಯಗಳ ನಡುವೆ ಸೌಹಾರ್ದಯುತ ಸಂಬಂಧಗಳನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರಗಳು ತಮ್ಮ ಕಾನೂನಾತ್ಮಕ, ಸಾಂವಿಧಾನಿಕ ಮತ್ತು ಶಾಸನಬದ್ಧ ಕಾಯ್ದೆ ನಿಯಮಗಳನ್ನು ಬಳಸಿ ಸದಾ ಕ್ರಿಯಾಶೀಲವಾಗಿರಬೇಕಾಗುತ್ತದೆ.  ಜನಸಮುದಾಯಗಳೂ ಸಹ ಸಂವಿಧಾನಬದ್ಧತೆಯೊಂದಿಗೆ, ಸಮಾಜದ ಶಾಂತಿ ಸುವ್ಯವಸ್ಥೆ ಮತ್ತು ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಸಹಕರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಹಕರಿಸಲೊಪ್ಪದ ಯಾವುದೇ ಸಂಸ್ಥೆ, ಸಂಘಟನೆ, ಪಕ್ಷ, ಗುಂಪು ಅಥವಾ ವ್ಯಕ್ತಿಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳುವ ಪರಮಾಧಿಕಾರವನ್ನೂ ಸರ್ಕಾರ ಹೊಂದಿದೆಯಲ್ಲವೇ ? ದುರಂತ ಎಂದರೆ ಇಂದು ಸಮಸ್ತ ನಾಗರಿಕರನ್ನು ಬಾಧಿಸುವ ವಿಚಾರಗಳಲ್ಲಿ ಕೆಲವೇ ಸಂಘಟನೆಗಳು, ಗುಂಪುಗಳು ನಿರ್ಣಾಯಕವಾಗುತ್ತಿವೆ. ಧಾರ್ಮಿಕ ಆಚರಣೆಯ ಹೆಸರಿನಲ್ಲಿ, ಮತನಿಷ್ಠೆಯ ನೆಪದಲ್ಲಿ, ಸಂಸ್ಕೃತಿ ಮತ್ತು ಪರಂಪರೆಯ ಹೆಸರಿನಲ್ಲಿ ಕೆಲವೇ ಗುಂಪುಗಳು, ಬೆರಳೆಣಿಕೆಯ ವ್ಯಕ್ತಿಗಳು ಸಾಮಾಜಿಕ ಚಟುವಟಿಕೆಗಳನ್ನು ನಿರ್ದೇಶಿಸುತ್ತಿರುವುದನ್ನು ಗಮನಿಸುತ್ತಿದ್ದೇವೆ. ಇಂತಹ ಬೆಳವಣಿಗೆಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕಾದ ರಾಜ್ಯ ಸರ್ಕಾರ ಕೈಕಟ್ಟಿ ಕುಳಿತಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಸರ್ಕಾರಗಳು ತಮ್ಮ ಜವಾಬ್ದಾರಿಯನ್ನು ಮರೆತು, ಕೆಲವೇ ಪಟ್ಟಭದ್ರ ಶಕ್ತಿಗಳಿಗೆ ಮಣಿದು, ಪಕ್ಷಪಾತಿ ಧೋರಣೆಯನ್ನು ಅನುಸರಿಸಿದರೆ, ಅಂತಹ ಸಮಾಜ ಸಾಮಾಜಿಕ ಅರಾಜಕತೆಯತ್ತ ಸಾಗುತ್ತದೆ. ಕರ್ನಾಟಕ ಈ ಹಾದಿಯಲ್ಲಿ ಸಾಗುತ್ತಿರುವುದನ್ನು ನೋಡಿದರೆ, ಈ ರಾಜ್ಯದಲ್ಲಿ ಚುನಾಯಿತ ಸರ್ಕಾರ ಇದೆಯೇ ಎಂಬ ಅನುಮಾನ ಮೂಡುತ್ತದೆ. ಬೊಮ್ಮಾಯಿ ಸರ್ಕಾರ ಕೂಡಲೇ ತನ್ನ ಹೊಣೆಗಾರಿಕೆಯನ್ನರಿತು ಕ್ರಿಯಾಶೀಲವಾದರೆ ಈ ರಾಜ್ಯ “ ಸರ್ವ ಜನಾಂಗದ ಶಾಂತಿಯ ತೋಟ ”ವಾಗಿ ಉಳಿಯುತ್ತದೆ.

ಚಂದ್ರು ಕೊಲೆಯ ನಿಜವಾದ ಕಾರಣ ಬಿಚ್ಚಿಟ್ಟ ಕಮಲ್‌ ಪಂತ್
Tags: BJPKarnatakaKarnataka Politicspratidvaniಕರ್ನಾಟಕಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಬೋಗಸ್‌ ಧರ್ಮ ಪ್ರಚಾರ: ಸಿದ್ದರಾಮಯ್ಯ ಕಿಡಿ

Next Post

ರಾಜ್ಯಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭಾವನಾತ್ಮಕ ಭಾಷಣ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳ ತಿಕ್ಕಾಟದಲ್ಲಿ ಚರ್ಚೆ ಇಲ್ಲದೆ ಬಿಲ್ ಪಾಸ್: ಮಾಜಿ ಪ್ರಧಾನಿ ದೇವೇಗೌಡ ಬೇಸರ

ರಾಜ್ಯಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭಾವನಾತ್ಮಕ ಭಾಷಣ

Please login to join discussion

Recent News

ಸಂತೋಷ್‌ ಲಾಡ್‌ ಫೌಂಡೇಶನ್‌ ವತಿಯಿಂದ ಬುದ್ಧ, ಬಸವ ಮತ್ತು ಅಂಬೇಡ್ಕರ್‌ ವಿಚಾರ ಸಂಕಿರಣ
Top Story

ಸಂತೋಷ್‌ ಲಾಡ್‌ ಫೌಂಡೇಶನ್‌ ವತಿಯಿಂದ ಬುದ್ಧ, ಬಸವ ಮತ್ತು ಅಂಬೇಡ್ಕರ್‌ ವಿಚಾರ ಸಂಕಿರಣ

by ಪ್ರತಿಧ್ವನಿ
July 13, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

by ಪ್ರತಿಧ್ವನಿ
July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ
Top Story

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

by ಪ್ರತಿಧ್ವನಿ
July 13, 2025
Top Story

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

by ಪ್ರತಿಧ್ವನಿ
July 12, 2025
Top Story

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

by ಪ್ರತಿಧ್ವನಿ
July 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಂತೋಷ್‌ ಲಾಡ್‌ ಫೌಂಡೇಶನ್‌ ವತಿಯಿಂದ ಬುದ್ಧ, ಬಸವ ಮತ್ತು ಅಂಬೇಡ್ಕರ್‌ ವಿಚಾರ ಸಂಕಿರಣ

ಸಂತೋಷ್‌ ಲಾಡ್‌ ಫೌಂಡೇಶನ್‌ ವತಿಯಿಂದ ಬುದ್ಧ, ಬಸವ ಮತ್ತು ಅಂಬೇಡ್ಕರ್‌ ವಿಚಾರ ಸಂಕಿರಣ

July 13, 2025
ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

July 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada