ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. 180 ಕೋಟಿ ಹಣವನ್ನು ಚೆಕ್ನಲ್ಲಿ ಲೂಟಿ ಮಾಡಿದ್ದಾರೆ. ನಿಮಗೆ ಮಾನ ಮರ್ಯಾದೆ ಇದ್ದರೆ, ಸಿಎಂ ಸ್ಥಾನಕ್ಕೆ ಗೌರವ ಕೊಡುವುದಾದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಆಗ್ರಹ ಮಾಡಿದ್ದಾರೆ. ನಾನು ಲಂಚ ಹೊಡೆದಿದ್ದನ್ನು ಒಂದು ಸಾಕ್ಷ್ಯ ಕೊಡಿ ಅಂದ್ರಲ್ಲ, ಇವಾಗ ಲೂಟಿ ಮಾಡಿದ್ದೀರಲ್ಲ ಏನು ಹೇಳ್ತೀರಾ ಸಿದ್ದರಾಮಯ್ಯನವರೇ..? ಎಂದು ಪ್ರಶ್ನೆ ಮಾಡಿರುವ ಅಶೋಕ್, ಲೂಟಿ ಭಾಗ್ಯ ಕೊಟ್ಟಿದ್ದೀರಲ್ಲ, ನಾನು ಹೇಳ್ತಿದ್ದೇನೆ ಸೈಲೆಂಟಾಗಿ ಹಣ ಬಿಡುಗಡೆ ಮಾಡಿ ಅಂತಾ ಅಧಿಕಾರಿ ಹೇಳಿದ್ದಾನೆ. ಈಶ್ವರಪ್ಪ ಮೇಲೆ ಆರೋಪ ಬಂದಾಗ ಈಶ್ವರಪ್ಪ ಕಾರಣ ಅಂದ್ರಲ್ಲ, ಇವಾಗ ಏನು ಹೇಳ್ತೀರಾ..? ಇವಾಗ ಯಾಕೆ ರಾಜೀನಾಮೆ ಕೊಡಲ್ಲ..? ಎಂದು ಆಕ್ರೋಶ ಹೊರ ಹಾಕಿದ್ದಾರೆ.

ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಧಿಕಾರಿ ನೇರವಾಗಿ ಯಾರ್ಯಾರಿಗೆ ಎಷ್ಟು ಕೊಟ್ಟಿದ್ದೇನೆ ಎಂದು ಬರೆದಿದ್ದಾರೆ. ಇದರಲ್ಲಿ ಇಡೀ ಸಂಪುಟವೇ ಶಾಮೀಲು ಆಗಿದೆ. ಈಶ್ವರಪ್ಪ ಮೇಲೆ ಈ ಹಿಂದೆ ಆರೋಪ ಬಂದಾಗ ಏನ್ ಹೇಳಿದ್ರು ಸಿದ್ದರಾಮಯ್ಯ..? ಮಾನ ಮರ್ಯಾದೆ ಇದೆಯಾ ಎಂದು ಕೇಳಿದ್ರು, ಈಗ ತಕ್ಷಣ ಸರ್ಕಾರವೇ ರಾಜೀನಾಮೆ ಕೊಡಬೇಕು.. ಭ್ರಷ್ಟಾಚಾರಕ್ಕೆ ಸಾಕ್ಷಿ ಕೇಳ್ತಿದ್ರಲ್ಲ, ಈಗ ತಕ್ಷಣ ಸಚಿವರು ರಾಜೀನಾಮೆ ಕೊಡಬೇಕು. ಇದರ ಬಗ್ಗೆ ನಾವು ಅಗತ್ಯ ಮಾಹಿತಿ ಕಲೆ ಹಾಕ್ತಿದ್ದೇವೆ. ಬರುವ ಅಧಿವೇಶನದಲ್ಲಿ ಇದರ ಬಗ್ಗೆ ಧ್ವನಿ ಎತ್ತುತ್ತೇವೆ. ಈಶ್ವರಪ್ಪ ರಾಜೀನಾಮೆ ಹೇಗೆ ಕೇಳಿದ್ರೋ ಹಾಗೇ ಸಚಿವರ ರಾಜೀನಾಮೆ ಕೇಳ್ತೀವಿ ಎಂದಿದ್ದಾರೆ.
ವಾಲ್ಮೀಕಿ ನಿಗಮದ ಅಧಿಕಾರಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡ್ಕೊಂಡಿದ್ದಾರೆ. ಇದು ಹೃದಯವಿದ್ರಾವಕ ಘಟನೆ. ಇದು ಲೂಟಿ ಸರ್ಕಾರ, ಲಂಚಬಾಕ ಸರ್ಕಾರ. ಲಂಚ ತಗೊಂಡಿದ್ದು ಸಾಬೀತಾದರೆ ಅಧಿಕಾರ ತ್ಯಜಿಸೋದಾಗಿ ಸಿದ್ದರಾಮಯ್ಯ ಹೇಳಿದ್ರು. ಈಗ ಆ ಅಧಿಕಾರಿ ವಿವರವಾಗಿ ಅಧಿಕಾರಿಗಳ ಹೆಸರು, ಮಂತ್ರಿ ಹೆಸರು ಬರೆದು ಆತ್ಮಹತ್ಯೆ ಮಾಡ್ಕೊಂಡಿದ್ದಾರೆ. ಈಗೇನು ಹೇಳ್ತಾರೆ ಸಿದ್ದರಾಮಯ್ಯ..? ಎಂದಿರುವ ಅಶೋಕ್, ಚಂದ್ರಶೇಖರನ್ ಸಾವಿಗೆ ನೇರ ಕಾರಣ ಸರ್ಕಾರ ಎಂದಿದ್ದಾರೆ. ಕಾಂಗ್ರೆಸ್ನವ್ರು ಲೂಟಿಕೋರರು. ಸ್ಕೀಂ ಮಾಡಿ 187 ಕೋಟಿ ಲೂಟಿಗೆ ಪ್ಲಾನ್ ಮಾಡಿದ್ದಾರೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ, ಕೂಡಲೇ ಇಲಾಖೆ ಮಂತ್ರಿ ರಾಜೀನಾಮೆ ಕೊಡಬೇಕು ಎಂದು ಆಗ್ರಹ ಮಾಡಿದ್ದಾರೆ.

ಅಧಿಕಾರಿ ಆತ್ಮಹತ್ಯೆ ಪ್ರಕರಣ ಖಂಡಿಸಿ ದೊಡ್ಡ ಹೋರಾಟ ಮಾಡ್ತೇವೆ. ಈಶ್ವರಪ್ಪ ರಾಜೀನಾಮೆಗೆ ಇವರು ಯಾವ ರೀತಿ ಆಗ್ರಹಿಸಿದ್ರೋ ಹಾಗೇ ನಾವು ಸಹ ನಾಗೇಂದ್ರ ರಾಜೀನಾಮೆಗೆ ಆಗ್ರಹ ಮಾಡ್ತೇವೆ. ದಾಖಲೆ ಸಮೇತ ಸರ್ಕಾರದ ಭ್ರಷ್ಟಾಚಾರ ಬಯಲಾಗಿದೆ ಎಂದಿದ್ದಾರೆ. ಸಂಸದ ಸದಾನಂದ ಗೌಡ ಮಾತನಾಡಿ, ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣ ಒಂದು ಸ್ಯಾಂಪಲ್ ಅಷ್ಟೇ. ಇಂಥ ನೂರಾರು ಅಧಿಕಾರಿಗಳು ಒತ್ತಡದಲ್ಲಿದ್ದಾರೆ. ಪಾರದರ್ಶಕ ಆಡಳಿತ ಅಂದಿದ್ದು ಇದೇನಾ..? ಎಂದಿರುವ ಡಿವಿಎಸ್, ಅಧಿಕಾರಿಯಿಂದಲೇ ಚೆಕ್ ಬರೆಸಿ ಬಲಿ ಕೊಟ್ಟಿದ್ದಾರೆ. ಅಧಿಕಾರಿಗಳು ಇಂಥ ಕೆಲಸ ಮಾಡ್ಕೋಬೇಡಿ, ಆತ್ಮಹತ್ಯೆ ಕೆಲಸಕ್ಕೆ ಮುಂದಾಗಬೇಡಿ. ಅಧಿಕಾರಿಗಳ ಪರ ಬಿಜೆಪಿ ಇದೆ. ಗೂಂಡಾಗಳು ಬೀದಿಗೆ ಬಂದಿದ್ದಾರೆ ಎಂದಿದ್ದಾರೆ.
ಅಧಿಕಾರಿ ಆತ್ಮಹತ್ಯೆಗೆ ಸಿಎಂ ಸಿದ್ದರಾಮಯ್ಯ ನೇರ ಜವಾಬ್ದಾರರರು, ಇಲಾಖೆ ಸಚಿವರು ಜವಾಬ್ದಾರರು. ಪ್ರಕರಣದ ತನಿಖೆ ಸಿಬಿಐಗೆ ವಹಿಸಲಿ, ಆಗ ಸತ್ಯ ಹೊರಗೆ ಬರುತ್ತೆ. ಈಶ್ವರಪ್ಪ ಮೇಲೆ ಏನು ಒತ್ತಡ ಹಾಕಿದ್ರೋ ಅದರ ಹತ್ತರಷ್ಟು ಒತ್ತಡ ಹಾಕ್ತೇವೆ. ತಕ್ಷಣ ಸಚಿವರು ರಾಜೀನಾಮೆ ಕೊಡಬೇಕು ಎಂದು ಡಿವಿಎಸ್ ಆಗ್ರಹ ಮಾಡಿದ್ದಾರೆ. ಮಾಜಿ ಸಚಿವ ಅಶ್ವಥ್‌ನಾರಾಯಣ ಮಾತನಾಡಿ, ನ್ಯಾಯ ಎತ್ತಿ ಹಿಡಿಯಲು, ಭ್ರಷ್ಟಾಚಾರ ಬಯಲಿಗೆಳೆಯಲು ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 187 ಕೋಟಿ ಹೇಗೆ ಚೆಕ್ನಲ್ಲಿ ಬರೆಸಿಕೊಂಡ್ರು..? ಹಣಕಾಸು ಸಚಿವರಾಗಿರುವ ಸಿಎಂ ಸಿದ್ದರಾಮಯ್ಯನವರಿಗೆ ಇದು ಗೊತ್ತಾಗಲಿಲ್ವಾ..? ಎಂದು ಪ್ರಶ್ನಿಸಿದ್ದಾರೆ. ಕೂಡಲೇ ಭ್ರಷ್ಟ ಸಚಿವ ರಾಜೀನಾಮೆ ಕೊಡಬೇಕು. ಈ ಅಸಮರ್ಥ ಸರ್ಕಾರ ಕೂಡಲೇ ತೊಲಗಬೇಕು ಎಂದು ಆಗ್ರಹ ಮಾಡಿದ್ದಾರೆ.