
ಮುಡಾ ಹಗರಣದ ಬಗ್ಗೆ ಇ.ಡಿ ದಾಳಿಯ ಒತ್ತಡದ ಮಧ್ಯೆಯೂ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್ ಉಪ ಚುನಾವಣೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಉಪ ಚುನಾವಣೆ ಅಭ್ಯರ್ಥಿ ಆಯ್ಕೆಯ ಸಂಬಂಧ ಮಾತುಕತೆ ನಡೆಸಿದ್ದಾರೆ.

ಕೇರಳದ ವಯನಾಡು ಲೋಕಸಭಾ ಉಪ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಮಾಡುತ್ತಿದ್ದು, ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ತೆರಳುವ ಬಗ್ಗೆಯೂ ನಾಯಕರು ಚರ್ಚೆ ನಡೆಸಿದ್ದಾರೆ. ಅಕ್ಟೋಬರ್ 23 ರಂದು ವಯನಾಡಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿ ನಾಮಪತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಿರ್ಧಾರ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮುಡಾ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಮುಡಾ ದಾಳಿ ಬಗ್ಗೆ ನೀವು ಮುಡಾ ಮುಡಾ ಅಂದ್ರೆ ನಾನೇನ್ ಮಾಡೋಕಾಗುತ್ತೆ..? ಕಾನೂನು ಪ್ರಕಾರ ಏನೇನ್ ನಡೆಯುತ್ತೋ ನಡೆಯಲಿ ಬಿಡಿ.. ಎಂದು ಹೇಳಿ ತೆರಳಿದ್ದಾರೆ.
ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಸುರೇಶ್ ಮಾತನಾಡಿ, ಇಡಿ ದಾಳಿ ಅಲ್ಲ, ದಾಖಲೆಗಳನ್ನು ತೆಗೆದುಕೊಳ್ಳಲು ಬಂದಿದ್ದಾರೆ ಅಷ್ಟೆ ಎಂದಿದ್ದಾರೆ. ದಾಖಲೆಗಳನ್ನು ಕೊಡುವುದಕ್ಕೇ ನಾಲ್ಕೈದು ದಿನಗಳು ಬೇಕಾಗುತ್ತದೆ. ದಾಖಲೆ ತೆಗೆದುಕೊಂಡು ಹೋಗಿ ತನಿಖೆ ಮಾಡಲಿ ಬಿಡಿ ಎಂದಿದ್ದಾರೆ. ಮುಡಾ ಕಚೇರಿ ಮೇಲೆ ಇಡಿ ದಾಳಿ ಮಾಡಿರುವ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿದ್ದು, ಇಡಿ ಅವರು ಮಾಹಿತಿ ಪಡೆಯಬಹುದು..
ದಾಖಲೆ ಕೇಳ್ತಿದ್ದಾರೆ, ದಾಖಲೆ ಪಡೆಯಬಹುದು.. ದಾಖಲೆ ಪರಿಶೀಲನೆ ಮಾಡ್ತಾರೆ.. ಅದಕ್ಕೆ ಇಡಿ ರೆಡ್ ಅಂತ ಯಾಕ್ ಕರೆಯುತ್ತಿರಾ..? ಎಲ್ಲ ದಾಖಲೆಗಳು ಪಬ್ಲಿಕ್ ಡೊಮೇನ್‌ನಲ್ಲಿ ಇದೆ.. ಮತ್ಯಾಕೆ ಭಯ ಎಂದು ಪ್ರಶ್ನಿಸಿದ್ದಾರೆ.