ಪ್ರಸಿದ್ದ ಸುಗಂಧ ದ್ರವ್ಯ ಕಂಪನಿಯ ಜಾಹೀರಾತನ್ನು ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರ ಯೂಟ್ಯೂಬ್ ಹಾಗು ಟ್ವಿಟರ್ಗೆ ನಿರ್ದೇಶನ ನೀಡಿರುವುದಾಗಿ ತಿಳಿದು ಬಂದಿದೆ.
ಜಾಹೀರಾತಿನಲ್ಲಿ ಸಾಮೂಹಿಕ ಅತ್ಯಾಚಾರ ಹಾಗು ಸ್ರ್ತೀ ದ್ವೇಷವನ್ನು ಹರಡುವ ಅಂಶಗಳು ಹೆಚ್ಚಾಗಿವೆ ಎಂದು ಚಳವಳಗಾರರು, ರಾಜಕಾರಣಿಗಳು ಹಾಗು ಜನಸಾಮಾನ್ಯರಿಂದ ವ್ಯಾಪಕ ಟೀಕೆ ಎದುರಾದ ಕಾರಣ ಕೇಂದ್ರ ಮಾಹಿತಿ ಹಾಗು ಪ್ರಸಾರ ಸಚಿವಾಲಯ ಪ್ರಸಾರ ಮಾಡದಂತೆ ಸೂಚನೆ ನೀಡಿದೆ.
ಜಾಹೀರಾತಿನಲ್ಲಿ ಮಾಹಿತಿ ಹಾಗು ಪ್ರಸಾರ ಇಲಾಖೆಯ ನಿಬಂಧನೆಗಳು ಸ್ಪಷ್ಟವಾಗಿ ಉಲ್ಲಂಘನೆಯಾಗಿರುವ ಕಾರಣ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ಸೂಚಿಸಿದೆ.