![](https://pratidhvani.com/wp-content/uploads/2025/02/WhatsApp-Image-2025-02-08-at-10.22.12-AM-1024x565.jpeg)
ಮಂಡ್ಯ : ಮಂಡ್ಯದಲ್ಲಿ ಸಚಿವ ಎನ್. ಚಲುವರಾಯಸ್ವಾಮಿ(H. N. Chaluvarayaswamy) ಮಾತನಾಡಿ ಸಿಎಂ ಸಿದ್ದರಾಮಯ್ಯ (CM Siddaramaiah)ವಿರುದ್ಧದ ಮುಡಾ ಕೇಸ್ ರಾಜಕೀಯ ಪ್ರೇರಿತ ಎಂದಿದ್ದಾರೆ. ಜೊತೆಗೆ ಲೋಕಾಯುಕ್ತ ತನಿಖೆ ಮಾಡ್ತಿದೆ, ಇನ್ನೊಂದು ತನಿಖೆಗೆ ಅರ್ಜಿ ಕೊಟ್ಟರೆ ನಿಲ್ಲಲ್ಲ. ಮುಡಾ ಕೇಸ್‌ನಲ್ಲಿ ಯಾವುದೇ ಸತ್ವ ಇಲ್ಲ. ನ್ಯಾಯ ಕೊಟ್ಟ ನ್ಯಾಯಾಲಯಕ್ಕೆ ಧನ್ಯವಾದ ಎಂದಿದ್ದಾರೆ. ಸರ್ಕಾರದ ಎಲ್ಲಾ ನಿರ್ಧಾರಗಳನ್ನು ರಾಜ್ಯಪಾಲರು ನಿರಾಕರಣೆ ಮಾಡ್ತಾರೆ. ಅನೇಕ ವಿಚಾರಗಳಿಗೆ ಅಂಕಿತ ಹಾಕದೆ ವರ್ಷಗಟ್ಟಲೇ ಬಾಕಿ ಉಳಿದಿದೆ ಅಂತಾನೂ ಬೇಸರ ಹೊರ ಹಾಕಿದ್ದಾರೆ.
![](https://pratidhvani.com/wp-content/uploads/2025/02/image-18-1024x576.png)
ಆದ್ರೆ ಎಲ್ಲದಕ್ಕೂ ಸಿಎಂ ಸಿದ್ದರಾಮಯ್ಯ(CM Siddaramaiah)ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ್ರು. ಅದೇ ಬಿಜೆಪಿ-ಜೆಡಿಎಸ್ ನಾಯಕರ ಮೇಲಿನ ಆರೋಪಕ್ಕೆ ಸ್ಪಷ್ಟನೆ ಕೇಳಿ ಹಾಗೇ ಉಳಿಸಿಕೊಂಡಿದ್ದಾರೆ. ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಎಷ್ಟು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ನಿಲುವು ತೆಗೆದುಕೊಂಡಿದೆ. ಆದರೆ ರಾಜ್ಯಪಾಲರು ಬಿಜೆಪಿ ವಕ್ತಾರರಾಗಿ ಕೆಲಸ ಮಾಡ್ತಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿದ್ದು ನ್ಯಾಯ ಕೊಡುವ ಕೆಲಸವನ್ನ ರಾಜ್ಯಪಾಲರು ಮಾಡಬೇಕು. ಹೀಗೆ ಆದ್ರೆ ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಬೇಸತ್ತವರೆಲ್ಲರೂ ಹೋಗಿ ಪ್ರತಿಭಟನೆ ಮಾಡುವ ಕಾಲ ಬರುತ್ತದೆ ಎಂದಿದ್ದಾರೆ.
![](https://pratidhvani.com/wp-content/uploads/2025/02/image-20.png)
ಸಾಲ ಕೊಟ್ಟಿದ್ದಾರೆ ಅಂತ ಆತ್ಮಹತ್ಯೆ ಮಾಡಿಕೊಳ್ಳುವ ಹಾಗೇ ಹಿಂಸಿಸಬಾರದು. ನಿಯಮಾನುಸಾರ ಸಾಲ ವಸೂಲಾತಿ ಮಾಡಬೇಕು. ಸರ್ಕಾರದ ವಿರುದ್ಧ ಆರ್ ಅಶೋಕ್(R Ashok)ವಾಗ್ದಾಳಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಅಶೋಕ್ ವಿಪಕ್ಷ ನಾಯಕರಾಗಿ ಕೆಲಸ ಮಾಡ್ತಿಲ್ಲ. ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ನನಗೆ ಅಶೋಕ್ ಆತ್ಮೀಯ, ಆದರೆ ಆತ ಪಾಪದ ಮನುಷ್ಯ. ಪಕ್ಷ ಕೊಟ್ಟಿರುವ ಸ್ಥಾನ ಉಳಿಸಿಕೊಳ್ಳಲು ಮಾತನಾಡ್ತಾರೆ. ಟಿವಿ ಮುಂದೆ ಮಾತನಾಡದೆ ಇದ್ರೆ ವಿಪಕ್ಷ ನಾಯಕರಾಗಿ ಇರಲ್ಲ ಎಂದಿದ್ದಾರೆ. ಸರ್ಕಾರದ ಮೇಲೆ ವಾಗ್ದಾಳಿ ನಡೆಸದಿದ್ರೆ ಅಶೋಕನನ್ನೇ ಬದಲಾಯಿಸಿ ಬಿಡ್ತಾರೆ ಎಂದಿದ್ದಾರೆ.