
ಮೈಸೂರಲ್ಲಿ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ವಂಚನೆ ಮಾಡಲಾಗಿದೆ. ಮೈಸೂರಿನ ಹಲವರ ಬಳಿ ಲಕ್ಷ ಲಕ್ಷ ಹಣ ಪೀಕಿರುವ ಖತರ್ನಾಕ್ ಗಳು ಕೆಲಸ ಕೊಡಿಸದೆ ಮೋಸ ಮಾಡಿದ್ದಾರೆ.ಸರ್ಕಾರಿ ಉದ್ಯೋಗ ಸಿಕ್ಕೇ ಬಿಡ್ತು ಅಂತ ಖುಷಿಯಲ್ಲಿದ್ದವರಿಗೆ ನಕಲಿ ಆದೇಶದ ಪ್ರತಿ ನೀಡಿ ವಂಚನೆ ಮಾಡಿದ್ದಾರೆ. ಸರ್ಕಾರದ ಆದೇಶ, ನೇಮಕಾತಿ ಪತ್ರ, ನಡಾವಳಿ, ನಿರಾಕ್ಷೇಪಣ ಪ್ರಮಾಣಪತ್ರ, ಐಡಿ ಕಾರ್ಡ್ ಎಲ್ಲವನ್ನು ನೀಡಿರುವ ಗ್ಯಾಂಗ್ ಅಭ್ಯರ್ಥಿಗಳಿಗೆ ಮೋಸ ಮಾಡಿದೆ.

ಮೈಸೂರಿನ ಪ್ರಮೋದ್ ಕುಮಾರ್ ಎಂಬುವವರಿಂದ ವಂಚನೆಗೊಳಗಾದ ಉದ್ಯೋಗಾಕಾಂಕ್ಷಿಗಳು ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಳ್ತಿದ್ದಾರೆ. ಇಬ್ಬರು ವಂಚಕರನ್ನು ವಶಕ್ಕೆ ಪಡೆದಿರುವ ಮೈಸೂರಿನ ಉದಯಗಿರಿ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ. ಅಟೆಂಡರ್, ಡಾಟಾ ಎಂಟ್ರಿ ನೇಮಕಾತಿಯ ಗ್ರೂಪ್ ಡಿ ಹುದ್ದೆಗಳನ್ನು ಕೊಡಿಸುವುದಾಗಿ ಮೋಸ ಎಸಗಲಾಗಿದೆ.

ಕರ್ನಾಟಕ ಸರ್ಕಾರ ಆರೋಗ್ಯ ಕುಟುಂಬ ಕಲ್ಯಾಣ ಸೇವೆ ಆಯುಕ್ತಾಲಯ ಬೆಂಗಳೂರು ಎಂದು ಲೆಟರ್ ಹೆಡ್ ನೀಡಿರುವ ಖತರ್ನಾಕ್ ಗಳು ಲಕ್ಷ ಲಕ್ಷ ಹಣ ಪಡೆದು ಉಂಡೆ ನಾಮಹಾಕಿದ್ದಾರೆ.

2020 ರಿಂದ ಈ ಗ್ಯಾಂಗ್ ಈ ರೀತಿಯ ಕೆಲಸ ಮಾಡುತ್ತಾ ಬಂದಿದೆ.ಒಬ್ಬೊಬ್ಬರಿಂದ 3 ರಿಂದ 5 ಲಕ್ಷದವರೆಗೂ ಹಣ ಪಡೆದು 30ಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಲಾಗಿದೆ.