ಕೋವಿಡ್ ಸಂಬಂಧಿತ ತ್ಯಾಜ್ಯವನ್ನು ನಿರ್ವಹಿಸುವ ರಾಜ್ಯದ 26 ಬಯೋಮೆಡಿಕಲ್ ತ್ಯಾಜ್ಯ ಸಂಸ್ಕರಣಾ ಘಟಕಗಳು ಜೂನ್ 1 ರಿಂದ ಕಾರ್ಯಾಚರಣೆ ನಿಲ್ಲಿಸುವುದಾಗಿ ತಿಳಿಸಿವೆ. ರಾಜ್ಯ ಸರ್ಕಾರವು ಒಂದು ವರ್ಷದಿಂದ ಬಾಕಿ ಹಣ ಪಾವತಿಸಿದ ಕಾರಣ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ನಿರ್ವಾಹಕ ಸಂಘ ತಿಳಿಸಿದೆ. ಸರ್ಕಾರಕ್ಕೆ ಹಣ ಪಾವತಿಸುವಂತೆ ಮೇ 10 ರವರೆಗೆ ಗಡುವು ಕೊಡಲಾಗಿತ್ತು. ಅದಾಗ್ಯೂ ಮೂರು ವಾರಗಳ ಸಮಯ ಕೊಡಲಾಗಿತ್ತೆಂದು ತಿಳಿದುಬಂದಿದೆ.
ಹಾಸನದಲ್ಲಿ ನಿರ್ವಾಹಣ ಘಟಕ ನಡೆಸುತ್ತಿರುವ ಬಯೋಮೆಡಿಕಲ್ ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಸೌಲಭ್ಯ ನಿರ್ವಾಹಕರ ಸಂಘದ ಅಧ್ಯಕ್ಷ ಡಿ.ಕೆ.ನಾಗರಾಜ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗೆ ಹಣ ಪಾವತಿಯಾಗದೆ ಎದುರಾದ ಸಮಸ್ಯೆಯನ್ನು ತಿಳಿಸಿದ್ದು, ಮಾರ್ಚ್ 2020 ರಿಂದ ನಿರ್ವಾಹಕರಿಗೆ ಹಣ ಪಾವತಿ ಮಾಡಲಾಗಿಲ್ಲ ಎಂದಿದ್ದಾರೆ.

ಉದ್ಯೋಗಿಗಳಿಗೆ ನಮ್ಮ ಕೈಯಿಂದ ಹಣವನ್ನು ಪಾವತಿಸಿದ್ದೇವೆ, ಯಾಕೆಂದರೆ ಪರಿಸರ ಸಂರಕ್ಷಣೆ ಮತ್ತು ಅದರಿಂದ ಆರೋಗ್ಯದ ಮೇಲಾಗುವ ಪರಿಣಾಮವನ್ನು ತಡೆಗಟ್ಟುವ ಸಲುವಾಗಿ, ಕೋವಿಡ್ ತ್ಯಾಜ್ಯವು ಹೆಚ್ಚು ಅಪಾಯಕಾರಿಯಾಗಿದ್ದು, ಸಿಬ್ಬಂದಿಗಳು ಅದನ್ನು ನಿರ್ವಹಿಸುವಾಗ ಮತ್ತು ಸುಡುವಾಗ ಹೆಚ್ಚು ಎಚ್ಚರವಹಿಸುವ ಅಗತ್ಯವಿದೆ. ಪ್ರತಿನಿತ್ಯ ಕೂಡ ನಾವು ಖಾಸಗಿ ಹಾಗು ಸರ್ಕಾರಿ ಆಸ್ಪತ್ರೆಗಳಿಗೆ ನಮ್ಮ ವಾಹನವನ್ನು ಕಳಿಸುತ್ತೇವೆ. ವೈದ್ಯಕೀಯ ತ್ಯಾಜ್ಯವನ್ನು ಸಂಗ್ರಹಿಸದೆ ಹಾಗೆ ಬಿಟ್ಟರೆ ಹೆಚ್ಚು ಸೋಂಕು ಹಬ್ಬಿ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ ಎಂದು ನಾಗರಾಜು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಖಾಸಗಿ ಆಸ್ಪತ್ರೆ ಮತ್ತು ಬಿಬಿಎಂಪಿ ಆಸ್ಪತ್ರೆಗಳು ಕೋವಿಡ್ ತ್ಯಾಜ್ಯ ತೆರವಿಗಾಗಿ ಪಾವತಿಗಳನ್ನು ಮಾಡುತ್ತಿವೆ. ಆದರೆ ಸರ್ಕಾರದ ಅಧೀನದಲ್ಲಿರುವ ಕೋವಿಡ್ ಕೇರ್ ಕೇಂದ್ರಗಳು ಮತ್ತು ಕೋವಿಡ್ ಆಸ್ಪತ್ರೆಗಳು ಹಣ ಪಾವತಿ ಮಾಡುತ್ತಿಲ್ಲ ಎಂದಿದ್ದಾರೆ.
ರಾಜ್ಯದ ತ್ಯಾಜ್ಯ ವಿಲೇವಾರಿ ಘಟಕಗಳು ಪ್ರತಿದಿನ 25 ಕೆ.ಜಿ ತ್ಯಾಜ್ಯ ಸಂಸ್ಕರಣೆ ಮಾಡುತ್ತಿದ್ದು, ನಿರ್ವಹಣೆಗೆ ಸರ್ಕಾರದಿಂದ ಹಣಬಿಡುಗಡೆ ಮಾಡುವಂತೆ ನಿರ್ವಹಕರು ಪದೇ-ಪದೇ ಒತ್ತಾಯಿಸುತ್ತಿದ್ದರು. ಸರ್ಕಾರ ಇನ್ನೂ ಹಣ ಬಿಡುಗಡೆ ಮಾಡಿಲ್ಲ, ಲೆಕ್ಕಚಾರದ ಪ್ರಕಾರ ಸರ್ಕಾರ 10 ಕೋಟಿ ರೂ ಪಾವತಿಸಬೇಕು ಎಂದು ನಾಗರಾಜ್ ಹೇಳಿದ್ದಾರೆ. ಹಣ ಪಾವತಿಯಾಗದ ಕಾರಣ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ವಹಿಸುವುದು ಕಷ್ಟ ಸಾಧ್ಯವಾಗಿದೆ. ಇದರಿಂದ ಸಂಸ್ಕರಣಾ ಘಟಕವನ್ನು ಮುಚ್ಚಲು ನಿರ್ಧರಿಸಿದ್ದೇವೆಂದು ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸರ್ಕಾರದ ಅಸಮರ್ಥತೆಯೇ ಪಾವತಿ ವಿಳಂಬಕ್ಕೆ ಕಾರಣ ಎಂದು ಅಧಿಕೃತ ಮೂಲಗಳು ತಿಳಿಸಿವೆ.