ಸ್ಯಾಂಡಲ್‌ವುಡ್(sandalwood) ನಟ ರಿಷಬ್ ಶೆಟ್ಟಿ(rishab shetty) ನಟಿಸಿ, ನಿರ್ದೇಶಿಸಿದ್ದ ʻಕಾಂತಾರʼ(kantara) ಸಿನಿಮಾ, ವಿಶ್ವದಾದ್ಯಂತ ಬಿಡುಗಡೆಯಾಗಿ ಯಶ್ವಸಿ ಪ್ರದರ್ಶನ ಕಂಡಿತ್ತು. ಇದೀಗ ʻಕಾಂತಾರ 2ʼ ಚಿತ್ರದ ಸ್ಕ್ರಿಪ್ಟ್ ಕೆಲಸ ಬಹುತೇಕ ಪೂರ್ಣಗೊಂಡಿದೆ ಎನ್ನಲಾಗ್ತಿದೆ.
‘ಕಾಂತಾರ’ ಸೌತ್ ಸಿನಿಮಾ ಇಂಡಸ್ಟ್ರಿ ರೇಂಜ್ ಅನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ಕೊಂಡೊಯ್ದ ಅದ್ಭುತ ಚಿತ್ರ. ರಿಷಬ್ ಶೆಟ್ಟಿ ಸ್ವಯಂ ನಿರ್ದೇಶಿಸಿ, ನಟಿಸಿ ಸೈ ಎನಿಸಿಕೊಂಡ ಸಿನಿಮಾವಿದು. ಅದ್ಭುತ ಕಥೆಯೊಂದಿಗೆ ಪ್ರತಿ ಪಾತ್ರವನ್ನೂ ಸುಂದರವಾಗಿ, ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಈ ಅಂಶಗಳು ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆದವು.
ಹೊಂಬಾಳೆ ಫಿಲ್ಮ್ಸ್(hombale films) ನಿರ್ಮಾಣದ ʻಕಾಂತಾರʼ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಯ್ತು. ಕನ್ನಡ ಅಲ್ಲದೇ ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ತುಳು ಭಾಷೆಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.
ʻಕಾಂತಾರ 2ʼ (kantara 2) ಕುರಿತ ಅಪ್ಡೇಟ್ಗೆ ಅಭಿಮಾನಿಗಳು ಕಾತರರಾಗಿದ್ದರು. ಇದೀಗ ಸಿನಿಪ್ರಿಯರಿಗೊಂದು ಗುಡ್‌ನ್ಯೂಸ್ ಸಿಕ್ಕಿದೆ. ಪ್ರೀಕ್ವೆಲ್ ತಯಾರಿ ಆರಂಭಿಸಿರುವ ಚಿತ್ರತಂಡ ಸಿನಿಮಾದ ಸ್ಕ್ರಿಪ್ಟ್ನ ಫೈನಲ್ ಡ್ರಾಫ್ಟ್ ರೆಡಿ ಮಾಡಿದೆ.
ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನೆಟಿಜನ್‌ಗಳು ಪ್ರೀಕ್ವೆಲ್ ಕಥೆಯನ್ನು ಊಹಿಸಿ ಪೋಸ್ಟ್ ಮಾಡುತ್ತಿದ್ದಾರೆ. ರಿಷಬ್ ಮತ್ತು ಚಿತ್ರತಂಡ(film team) ಅಂತಿಮ ಡ್ರಾಫ್ಟ್‌ನಿಂದ ತೃಪ್ತರಾಗಿದ್ದಾರೆ ಎಂದು ವರದಿಯಾಗಿದೆ. ಮತ್ತೊಮ್ಮೆ ಈ ಕಥೆ ಕಡೆಗೆ ಕಣ್ಣು ಹಾಯಿಸಿ, ಫೈನಲ್ ಮಾಡಲಿದ್ದಾರೆ.