ಚಿನ್ನದ ಬೆಲೆ (Gold rate) ದಿನೇ ದಿನೇ ಗಗನಕ್ಕೇರುತ್ತಲೇ ಇದೆ. ಪ್ರತಿ ನಿತ್ಯ ಚಿನ್ನ ಬೆಳ್ಳಿ (Gold – silver) ದರದಲ್ಲಿ ಏರಿಳಿತಗಳು ಸಂಭವಿಸುತ್ತಲೇ ಇದ್ದು, ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ.
ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ(Delhi) ಗುರುವಾರ ಚಿನ್ನದ ಬೆಲೆ 10 ಗ್ರಾಂ ಗೆ ₹ 1,400 ಹೆಚ್ಚಳವಾಗಿದ್ದು ₹ 79,300 ಕ್ಕೆ ಜಿಗಿದಿದೆ. ಇನ್ನು ಬೆಳ್ಳಿ ಪ್ರತಿ ಕೆಜಿಗೆ ₹ 93,000 ರಂತೆ ವಹಿವಾಟು ದಾಕಲಾಗಿದೆ.
ಇನ್ನು ಸ್ಪಾಟ್ ಚಿನ್ನ ಕೂಡ ಒಂದು ವಾರದ ಗರಿಷ್ಠ ಮಟ್ಟಕ್ಕೆ ಏರಿದೆ. ಮಧ್ಯಪ್ರಾಚ್ಯ ಮತ್ತು ಯುರೋಪ್‌ನಲ್ಲಿ (Europe) ಹೆಚ್ಚಿದ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಚಿನ್ನದ ಬೇಡಿಕೆಯನ್ನು ಹೆಚ್ಚಿಸಿದ್ದರಿಂದ ಈ ಏರಿಕೆಗೆ ಕಾರಣ.