ಹುಬ್ಬಳ್ಳಿ: ಕ್ರಿಮಿನಲ್ ಜೊತೆಗೆ ಎಸ್ಕೆಪ್ ಆಗಿದ್ದ ಗೋವಾ ಪೊಲೀಸ್ (Goa Police) ಈಗ ಹಳೆ ಹುಬ್ಬಳ್ಳಿ ಠಾಣೆಯ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ನಟೋರಿಯಸ್ ಕ್ರಿಮಿನಲ್ ಜೊತೆಗೆ ಗೋವಾದಿಂದ ಎಸ್ಕೆಪ್ ಆಗಿದ್ದ ಗೋವಾ ಪೊಲೀಸನ್ನು ಬಂಧಿಸಿದ್ದಾರೆ.
ನಾಲ್ಕು ವರ್ಷಗಳ ಕಾಲ ತಲೆಮರೆಸಿಕೊಂಡ ನಂತರ ಬಂಧಿತರಾದ ಸಿದ್ಧಿಕಿ ಸುಲೇಮಾನ್ ಖಾನ್ (Siddiq Suleman Khan) ಮುಂಜಾನೆ 2.30 ರ ಸುಮಾರಿಗೆ ಅಪರಾಧ ವಿಭಾಗದ ಕಸ್ಟಡಿಯಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ (Crime Department) ರಾಹುಲ್ ಗುಪ್ತಾ (Rahul Gupta) ತಿಳಿಸಿದ್ದಾರೆ.
ಗೋವಾ ಪೊಲೀಸ್ ಕ್ರೈಂ ಬ್ರಾಂಚ್ ನಲ್ಲಿ (Crime Branch) ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಅಮಿತ್ ನಾಯಕ್ ಖಾನ್‌ರನ್ನು (Amith Nayak Khan) ನಟೋರಿಯಸ್ ಕ್ರಿಮಿನಲ್ ಸುಲೇಮಾನ್ ಸಿದ್ಧಿಕಿ ಕಾವಲಿಗೆ ನಿಯೋಜನೆ ಮಾಡಿದ್ದರು. ಆದರೆ ಸುಲೇಮಾನ್ ಸಿದ್ಧಿಕಿಯನ್ನ ಮಧ್ಯರಾತ್ರಿ ಕಸ್ಟಡಿಯಿಂದ ಪರಾರಿ ಮಾಡಿಸಿ ನಂತರ ಅಮಿತ್ ನಾಯಕ್ ಕೂಡ ಎಸ್ಕೆಪ್ ಆಗಿದ್ದನು. ಈ ನಟೋರಿಯಸ್ ಸಿದ್ಧಿಕಿ ಹತ್ತಕ್ಕೂ ಹೆಚ್ಚು ರಾಜ್ಯಗಳ ವಾಂಟೆಡ್ (Wanted) ಲಿಸ್ಟ್‌ನಲ್ಲಿದ್ದನು.
ಸಿದ್ಧಿಕಿ ಮೇಲೆ ಹೈದ್ರಾಬಾದ್(Hydrabad), ಪುಣೆ(Pune), ದೆಹಲಿ(Delhi), ಗೋವಾ(Goa) ರಾಜ್ಯಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಕೊಲೆ(Murder), ಕೊಲೆ ಯತ್ನ(Murder Attempt), ಬೆದರಿಕೆ, ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಗಳಿವೆ. ಭೂ ಮಾಫಿಯಾ ದಂಧೆಯಲ್ಲಿ ಸಾರ್ವಜನಿಕರನ್ನು ಹೆದರಿಸಿ ಸುಲಿಗೆ ಮಾಡುವುದು, ದುಡ್ಡು ಕೀಳುವುದು, ದರೋಡೆ, ಮರ್ಡರ್ ಪ್ರಕರಣಗಳಲ್ಲಿ ಭಾಗಿದ್ದ ಎಂದು ಹೇಳಲಾಗಿದೆ. ಇಂತಹ ನಟೋರಿಯಸ್ ಕ್ರಿಮಿನಲ್ ಜೊತೆಗೆ ಗೋವಾ ಪೊಲೀಸ್ ಅಮಿತ್ ನಾಯಕ ಎಸ್ಟೇಪ್ ಅಗಿದ್ದನು. ಗೋವಾದಿಂದ ತಲೆ ಮರೆಸಿಕೊಳ್ಳಲು ಹುಬ್ಬಳ್ಳಿಗೆ ಆಗಮನ, ಈ ವೇಳೆ ಇಬ್ಬರನ್ನೂ ಹಳೆ ಹುಬ್ಬಳ್ಳಿಯ ಪೊಲೀಸರು ಬಂಧಿಸಿದ್ದಾರೆ.
ನಟೋರಿಯಸ್ ಕ್ರಿಮಿನಲ್ ಜೊತೆಗೆ ಗೋವಾ ಪೊಲೀಸ್ ಆಗಿರುವ ಬಗ್ಗೆ, ಗೋವಾ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದ್ದು, ಅವರು ನೆರೆಯ ಪ್ರದೇಶಗಳಿಗೆ ಪ್ರವೇಶಿಸದಂತೆ ಎಲ್ಲಾ ರಾಜ್ಯಗಳ ಗಡಿಗಳನ್ನು ಮುಚ್ಚಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಅಪರಾಧ ವಿಭಾಗ) ರಾಹುಲ್ ಗುಪ್ತಾ ಹೇಳಿದ್ದರು. ಗುಪ್ತಾ, “ಇಬ್ಬರ ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ. ಗೋವಾ ಪೊಲೀಸರು ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲು ನೆರೆಯ ರಾಜ್ಯಗಳ ಪೊಲೀಸರೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ” ಎಂದು ನಿನ್ನ ಹೇಳಿದ್ದರು.
ಆರೋಪಿ ಕಾನ್‌ಸ್ಟೆಬಲ್ ವಿರುದ್ಧ ಸೂಕ್ತ ಶಿಸ್ತು ಕ್ರಮಕ್ಕಾಗಿ ಹಿರಿಯ ಅಧಿಕಾರಿಗಳಿಗೆ ವರದಿ ಕಳುಹಿಸಲಾಗುವುದು ಮತ್ತು ವಿವರವಾದ ವಿಚಾರಣೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. ಪೊಲೀಸ್ ಮಹಾನಿರೀಕ್ಷಕ ವರ್ಷಾ ಶರ್ಮಾ ಮಾತನಾಡಿ, ಕಾನ್‌ಸ್ಟೆಬಲ್ ಮತ್ತು ಆರೋಪಿಗಳನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ. ಈ ತಪ್ಪಿಸಿಕೊಳ್ಳುವಿಕೆಯನ್ನು ಭೇದಿಸಲು ಪೊಲೀಸರಿಗೆ ಮಹತ್ವದ ಮುನ್ನಡೆ ಸಿಕ್ಕಿದೆ ಮತ್ತು ಗುರುವಾರ ರಾತ್ರಿ ಅಪರಾಧ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ಎಲ್ಲಾ ಪೊಲೀಸ್ ಸಿಬ್ಬಂದಿ ಸ್ಕ್ಯಾನರ್ ಅಡಿಯಲ್ಲಿರುತ್ತಾರೆ ಎಂದು ಅವರು ಹೇಳಿದ್ದರು.