ಬೆಂಗಳೂರು (Bangalore) ಮನೆಯೊಂದರಲ್ಲಿ ಅಪಾರ ಪ್ರಮಾಣದ ಗೋವಾ ಲಿಕ್ಕರ್ (Goa liquor) ಪತ್ತೆಯಾಗಿದೆ. ಅಕ್ರಮವಾಗಿ ಮನೆಯಲ್ಲಿ ಸಂಗ್ರಹಿಸಿದ್ದ ಮದ್ಯದ ಬಾಟಲಿ ನೋಡಿ ಅಬಕಾರಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಸದ್ಯ ಈ ಮನೆಯ ಮೇಲೆ ರೇಡ್ ನಡೆಸಿರುವ ಅಧಿಕಾರಿಗಳು ಅಕ್ರಮ ಮದ್ಯ ದಾಸ್ತಾನು ಮಾಡಿಟ್ಟಿದ್ದ ಆರೋಪಿ ಬಂಧಿಸಿದ್ದಾರೆ.ಕತ್ರಿಗುಪ್ಪೆ ನಿವಾಸಿ ಪುರುಷೋತ್ತಮ್ ಬಂಧಿತ ಆರೋಪಿ.
ಈ ಬಂಧಿತನಿಂದ ಸುಮಾರು 5 ಲಕ್ಷ ಮೌಲ್ಯದ 151 ಲೀಟರ್ ಮದ್ಯ ಇರುವ 144 ಬಾಟಲ್ ಗಳನ್ನ ವಶಕ್ಕೆ ಪಡೆಯಲಾಗಿದೆ. ಪುರುಷೋತ್ತಮ್ (Purushottam) ಎಂಬ ಆರೋಪಿಯ ಕತ್ರಿಗುಪ್ಪೆ ನಿವಾಸದಿಂದ ಮದ್ಯ ವಶಕ್ಕೆ ಪಡೆದ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಗೋವಾದಲ್ಲಿರುವ ಅಂಗಡಿಯವರ ಸಂಪರ್ಕ ಹೊಂದಿದ್ದ ಈ ಆಸಾಮಿ,ಅಲ್ಲಿಂದ ಕಡಿಮೆ ಬೆಲೆಗೆ ಮದ್ಯ ತರಿಸಿಕೊಳ್ತಿದ್ದ. ಈತನ ಸೂಚನೆ ಮೇರೆಗೆ ಬಸ್ ನಲ್ಲಿ ಮದ್ಯದ ಬಾಟಲ್ ಲೋಡ್ ಮಾಡ್ತಿದ್ರು. ಅದನ್ನ ಬೆಂಗಳೂರಿಗೆ ಬರ್ತಿದ್ದಂತೆ ಈ ಪುರುಷೋತ್ತಮ್ ಇಳಿಸಿಕೊಳ್ತಿತಿದ್ದ. ಆ ನಂತರ ಮನೆಗೆ ತೆಗೆದುಕೊಂಡು ಹೋಗಿ ಸ್ಟಾಕ್ ಮಾಡ್ತಿದ್ದ.
ಆ ನಂತರ ಅದನ್ನು ಕಡಿಮೆ ಬೆಲೆಗೆ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ, ಅಕ್ಟೋಬರ್ 27 ರಂದು ಬನಶಂಕರಿ ಎರಡನೇ ಹಂತದಲ್ಲಿ ನಿಂತಿದ್ದ ಪುರುಷೋತ್ತಮ್, ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ನಿಂತಿದ್ದ ಆಸಾಮಿಯ ಚಲನ ವಲನ ಅಬಕಾರಿ ಸಿಬ್ಬಂದಿಗಳಿಗೆ ಅನುಮಾನ ಹುಟ್ಟಿಸಿತ್ತು.
ಹೀಗಾಗಿ ಆತನ ಬ್ಯಾಗ್ ತೆಗೆದು ಪರಿಶೀಲಿಸಿದಾಗ ಮದ್ಯದ ಬಾಟಲಿ ಪತ್ತೆಯಾಗಿದೆ. ಅವು ಗೋವಾದಲ್ಲಿ ತಯಾರಿಸಲಾಗಿದ್ದ ಮದ್ಯದ ಬಾಟಲಿಗಳು ಎಂದು ಗೊತ್ತಾಗಿದ್ದು, FOR SALE IN GOA ONLY ಎಂದು ಬಾಟಲ್ ಮೇಲೆ ನಮೂದಾಗಿತ್ತು. ಹೀಗಾಗಿ ಈತನಮೊಬೈಲ್ ಪರಿಶೀಲಿಸಿದಾಗ ಗೋವಾ ರಾಜ್ಯದ ಮದ್ಯದ ಅಂಗಡಿ ಜೊತೆಗಿನ ನಂಟು ಬಯಲಾಗಿದೆ.