ನೀವೇನಾದ್ರು ಆ್ಯಂಬುಲೆನ್ಸ್ ಗೆ (Ambulance) ದಾರಿ ಬಿಡಲು ಸಿಗ್ನಲ್ ಜಂಪ್ ಮಾಡಿದ್ದೀರಾ ? ಅಯ್ಯೋ ಕೇಸ್ ಬಿತ್ತಲ್ಲಪ್ಪ ಅಂತ ಟೆನ್ಷನ್ (Tension) ಇದ್ರೆ, ಡೋಂಟ್ ವರಿ.ಕೇಸ್ ಹಾಕಿದ್ದರೆ ದಂಡದ ರಶೀದಿ ತೋರಿಸಿದ್ರೆ ನಿಮ್ಮ ಪ್ರಕರಣ ಕ್ಲೋಸ್ ಆಗುತ್ತೆ.

ಇದು ಬೆಂಗಳೂರು ಟ್ರಾಫಿಕ್ ಪೊಲೀಸ್ರು (Bangalore traffic police) ನೀಡಿರೋ ಹೊಸ ಗ್ಯಾರಂಟಿ. ಟ್ರಾಫಿಕ್ ಪೊಲೀಸ್ರ ಈ ನಿರ್ಧಾರಕ್ಕೆ ಕಾರಣವಿದೆ.ಇತ್ತೀಚೆಗೆ ಟ್ರಾಫಿಕ್ ರೂಲ್ಸ್ ಟೈಟಾಗಿದೆ. ಸ್ವಲ್ಪ ಯಾಮಾರಿದ್ರು ಕೇಸ್ ಬೀಳುತ್ತೆ.ಹೀಗಾಗಿ ವಾಹನ ಸವಾರರು ಆಂಬ್ಯುಲೆನ್ಸ್ ಹಾರ್ನ್ ಹೊಡೆಯುತ್ತಿದ್ರು ಕೆಲವೊಮ್ಮೆ ದಾರಿಬಿಡಲ್ಲ.

ಆಂಬ್ಯುಲೆನ್ಸ್ ಗೆ ದಾರಿ ಕೊಡಲು ಹೋಗಿ ಸಿಗ್ನಲ್ ಜಂಪ್ (Signal jump) ಮಾಡಿದ್ರೆ ಕೇಸ್ ಬೀಳುತ್ತೆ ಅಂತ ನಿಂತಲ್ಲೆ ನಿಂತಿರ್ತಾರೆ. ಹೀಗಾಗಿ ರೋಗಿಗಳನ್ನ ನಿಗಧಿತ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸೋದು ತಡವಾಗ್ತಿತ್ತು.ಅದಕ್ಕೆ ಪರಿಹಾರದ ಜೊತೆಗೆ ತುರ್ತು ಚಿಕಿತ್ಸೆಗೆ ಅವಕಾಶ ಕಲ್ಪಿಸಲು ಮಾಸ್ಟರ್ ಪ್ಲಾನ್ (Master plan) ಮಾಡಲಾಗಿದೆ.

ಇನ್ಮುಂದೆ ಆ್ಯಂಬುಲೆನ್ಸ್ ಗಳಿಗಾಗಿ ಟ್ರಾಫಿಕ್ ವೈಲೇಷನ್ (Traffic rules violation) ಮಾಡಿದ್ರೂ ದಂಡ ಹಾಕಲ್ಲ.ಒಂದು ವೇಳೆ ವಾಹನಗಳ ಮೇಲೆ ಕೇಸ್ ದಾಖಲಿಸಿದ್ರೂ,ದಂಡ ಕಟ್ಟುವಂತೆ ನೊಟೀಸ್ ಬಂದರು ಅದಕ್ಕಿದೆ ಪರಿಹಾರ ಸಿಕ್ಕಿದೆ.
ನಿಮ್ಮ ವಾಹನದ ಮೇಲಿನ ಕೇಸ್ ಗೆ ನೀವ್ ಮಾಡಬೇಕಿರೋದು ಇಷ್ಟೇ.ದಂಡ ರಶೀದಿಯನ್ನ ಇನ್ ಫೆಂಟ್ರಿ ರಸ್ತೆಯಲ್ಲಿರುವ (ಟಿಎಂಸಿ) ಕಛೇರಿಗೆ ಬಂದು ತೋರಿಸಿದರೆ ಸಾಕು. ನಿಮ್ಮ ವಾಹನದ ಮೇಲಿರೋ ಕೇಸ್ ರದ್ದು ಮಾಡಿ ಕ್ಲಿಯರೆನ್ಸ್ ಕೊಡ್ತಾರೆ. ಹೀಗಾಗಿ ಇನ್ಮುಂದೆ ಆಂಬ್ಯುಲೆನ್ಸ್ ಗಳಿಗೆ ತಕ್ಷಣ ದಾರಿ ಮಾಡಿಕೊಡುವುದನ್ನು ಮರೆಯಬೇಡಿ.