• Home
  • About Us
  • ಕರ್ನಾಟಕ
Friday, December 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಇಸ್ಲಾಮಿಕ್‌ ಷರಿಯಾ ಕಾಲೇಜಿನಲ್ಲಿ ಗೀತೆ, ಉಪನಿಷತ್ ಬೋಧನೆ: ಇದು ಮಹಮ್ಮದ್‌ ಫೈಝಿಯವರ ಪರಿಕಲ್ಪನೆ

Shivakumar A by Shivakumar A
August 28, 2022
in ದೇಶ
0
ಇಸ್ಲಾಮಿಕ್‌ ಷರಿಯಾ ಕಾಲೇಜಿನಲ್ಲಿ ಗೀತೆ, ಉಪನಿಷತ್ ಬೋಧನೆ: ಇದು ಮಹಮ್ಮದ್‌ ಫೈಝಿಯವರ ಪರಿಕಲ್ಪನೆ
Share on WhatsAppShare on FacebookShare on Telegram

ADVERTISEMENT

ಧರ್ಮ ರಾಜಕಾರಣದ ಕೆಟ್ಟ ಪರಿಣಾಮಗಳು ಕರ್ನಾಟಕ ಶಿಕ್ಷಣ ಸಂಸ್ಥೆಗಳನ್ನು ಬಿಟ್ಟಿಲ್ಲ. ನಿರ್ದಿಷ್ಟ ಸಮುದಾಯದ ಧಾರ್ಮಿಕ ಚಹರೆಗಳನ್ನು ಸಮಾಜದ ಮುಖ್ಯವಾಹಿನಿಯಿಂದ ಅಳಿಸುವ ವ್ಯವಸ್ಥಿತ ಷಡ್ಯಂತ್ರಕ್ಕೆ ಸ್ವತಃ ಸರ್ಕಾರವೇ ಇಳಿದು ಬಿಟ್ಟು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವಿದೆ. ಅಲ್ಪಸಂಖ್ಯಾತರ ಧಾರ್ಮಿಕ ಆಚರಣೆಗಳ ಬಗ್ಗೆ ಅಸಹಿಷ್ಣುತೆ ತೋರುತ್ತಲೇ, ಬಹುಸಂಖ್ಯಾತ ಆಚರಣೆಗಳನ್ನು ಪ್ರೋತ್ಸಾಹಿಸುತ್ತಾ ಓಲೈಕೆ ರಾಜಕಾರಣದಲ್ಲಿ ಸರ್ಕಾರ ತೊಡಗಿದ್ದರೆ, ಸಾತ್ವಿಕರಾಗಿರಬೇಕಿದ್ದ ಕಾವಿಧಾರಿಗಳಲ್ಲಿ ಕೆಲವರು ಒಂದಕ್ಕೆ ಒಂಭತ್ತು ಬೇಕು ಎನ್ನುತ್ತಾ ಹಮ್ಮುರಬಿ ಕಾಲದ ನ್ಯಾಯಗಳ ಪರಿಭಾಷೆಯಲ್ಲಿ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ. ಇದೆಲ್ಲದರ ನಡುವೆ, ಭಾರತದ ವೈವಿಧ್ಯ ಪರಂಪರೆಯನ್ನು ಎತ್ತಿ ಹಿಡಿಯುವಂತಹ, ಮನಸ್ಸಿಗೆ ತಂಪೆರೆಯುವಂತಹ ಸುದ್ದಿಯೊಂದು ಕೇರಳದಿಂದ ವರದಿಯಾಗಿದೆ.

ಷರಿಯಾ ಎಂದರೆ ಮೂಗು ಮುರಿಯುವ, ಅನುಮಾನದಿಂದ ನೋಡುವ ಕಣ್ಣುಗಳಿರುವ ಸಮಾಜದಲ್ಲಿ, ಕೇರಳದ ಷರಿಯಾ ಕಾಲೇಜು ಒಂದರಲ್ಲಿ ಭಗವದ್ಗೀತೆ, ಉಪನಿಷತ್‌, ಅದ್ವೈತಗಳ ಬಗ್ಗೆ ಬೋಧನೆ ಮಾಡಲಾಗುತ್ತಿದೆ. ಆ ಮೂಲಕ ಭಾರತದ ಹಿಂದೂ/ವೈದಿಕ ತತ್ವಶಾಸ್ತ್ರದ ಬಗ್ಗೆ ಮುಸ್ಲಿಂ ವಿದ್ಯಾರ್ಥಿಗಳು ಕಲಿಯುವಂತೆ ಪ್ರೇರೇಪಿಸಲಾಗುತ್ತಿದೆ.

ಭಾರತೀಯ ತತ್ವಶಾಸ್ತ್ರ ಮತ್ತು ಹಿಂದೂ ಧರ್ಮಗ್ರಂಥಗಳನ್ನು ತ್ರಿಶೂರ್ ಮೂಲದ ಅಕಾಡೆಮಿ ಆಫ್ ಷರಿಯಾ ಮತ್ತು ಅಡ್ವಾನ್ಸ್ಡ್ ಸ್ಟಡೀಸ್ (ASAS) ಸಂಸ್ಥೆಯಲ್ಲಿ ಕಲಿಸಲಾಗುತ್ತಿದೆ. ಜನರು ತಮ್ಮ ನಂಬಿಕೆಗಿಂತ ಭಿನ್ನವಾಗಿರುವ ನಂಬಿಕೆಗಳನ್ನು ಅಪಹಾಸ್ಯ ಮಾಡುವ ಜಗತ್ತಿನಲ್ಲಿ, ಅಂತಹ ದೃಷ್ಟಿಕೋನಗಳ ಬಗ್ಗೆ ಕಲಿಯುವುದು ಹೇಗೆ ವ್ಯಕ್ತಿಯ ಜ್ಞಾನವನ್ನು ವಿಸ್ತರಿಸುತ್ತದೆ ಎಂಬುದನ್ನು ASAS ಸಂಸ್ಥೆಯು ತೋರಿಸುತ್ತದೆ. ಮಲಿಕ್ ಬಿನ್ ದಿನಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್ ನಡೆಸುತ್ತಿರುವ ASAS, ಸುನ್ನಿ ಸಂಘಟನೆಯಾದ ಸಮಸ್ತ ಕೇರಳ ಜಮ್-ಇಯ್ಯತುಲ್ ಉಲೇಮಾ ಇದರ ನಿರ್ವಹಣೆ ಮಾಡುತ್ತಿದೆ.

ಸ್ವತಃ ಸಂಸ್ಕೃತ ವಿದ್ವಾಂಸರೂ ಆಗಿರುವ ಸಮಸ್ತ ಎರ್ನಾಕುಲಂ ಜಿಲ್ಲಾ ಕಾರ್ಯದರ್ಶಿ ಓನಂಪಿಲ್ಲಿ ಮುಹಮ್ಮದ್ ಫೈಝಿ ಅವರು ASAS ನ ಹಿಂದಿನ ರೂವಾರಿ. ಅವರ ಆಲೋಚನೆ ಹಾಗೂ ದೂರದೃಷ್ಟಿಯ ಫಲವಾಗಿ ಹಿಂದೂ ಪಠ್ಯಕ್ರಮಗಳು ಷರಿಯಾ ಕಾಲೇಜಿನಲ್ಲಿ ಬೋಧಸಲಾಗುತ್ತಿದೆ.
“ನಾವು ಇಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯ ಶ್ರೀಮಂತ ವೈವಿಧ್ಯತೆಯ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸುತ್ತೇವೆ” ಎಂದು ಕಾಲಡಿಯ ಶ್ರೀ ಶಂಕರ ಕಾಲೇಜಿನಿಂದ ಅದ್ವೈತ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಫೈಝಿ ಹೇಳುತ್ತಾರೆ. ಸಿಧ್ಧರೂಪದಿಂದ ಆರಂಭವಾಗಿ ಸಂಸ್ಕೃತವನ್ನು ವ್ಯವಸ್ಥಿತ ರೀತಿಯಲ್ಲಿ ಕಲಿಸಲಾಗುತ್ತದೆ. ಅದನ್ನು ಕಲಿಯಲು ಹೆಚ್ಚು ಆಸಕ್ತಿ ಹೊಂದಿರುವವರನ್ನು ಉನ್ನತ ಮಟ್ಟಕ್ಕೆ ಕಳುಹಿಸಲಾಗುತ್ತದೆ. ಸಂಸ್ಕೃತ ವಿದ್ವಾಂಸರಾದ ಕೆ ಪಿ ನಾರಾಯಣ ಪಿಶಾರಡಿಯವರ ಶಿಷ್ಯರಾದ ಯತೀಂದ್ರನ್ ಅವರು ನಮ್ಮ ಅಧ್ಯಾಪಕರಲ್ಲಿ ಒಬ್ಬರು. ನಾನು ಭಗವದ್ಗೀತೆಯನ್ನು ಕಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಸಂಸ್ಕೃತದ ಬಗ್ಗೆ ನಿಯಮಿತವಾಗಿ ಕಾರ್ಯಾಗಾರಗಳನ್ನು ನಡೆಸುತ್ತಿರುವ ASAS ಅದನ್ನು ಹೇಗೆ ಮಾತನಾಡಬೇಕೆಂದು, ಉಚ್ಛರಣೆ ಹೇಗಿರಬೇಕೆಂದು ವಿದ್ಯಾರ್ಥಿಗಳನ್ನು ಕಲಿಸುತ್ತದೆ. “ಪ್ರವಾದಿ ಮುಹಮ್ಮದ್ ಅವರು ಓರ್ವ ಯುವಕನಿಗೆ ಸಿರಿಯನ್ ಭಾಷೆಯನ್ನು ಕಲಿಯಲು ಹೇಳಿದ್ದರು. ನಾವು ಇತರ ವ್ಯವಸ್ಥೆಗಳನ್ನು ಎಷ್ಟು ಹೆಚ್ಚು ಪರಿಶೀಲಿಸುತ್ತೇವೆ, ಆಗ ನಮ್ಮ ಅರಿವಿನ ಗಡಿಗಳು ಹೆಚ್ಚು ವಿಸ್ತಾರಗೊಳ್ಳುತ್ತವೆ, ”ಎಂದು ಫೈಝಿ ತಮ್ಮ ವಿದ್ವತ್ತಿನ ತಿಳುವಳಿಕೆಯನ್ನು ಹಂಚುತ್ತಾರೆ.

ಇಸ್ಲಾಮಿಕ್ ವಿಷಯಗಳನ್ನು ಅಧ್ಯಯನ ಮಾಡುವ ಮುಸ್ಲಿಂ ವಿದ್ಯಾರ್ಥಿಗಳಿಗೆ ಇಸ್ಲಾಮಿಕ್ ಪರಿಭಾಷೆ ಮಾತ್ರ ತಿಳಿದಿದೆ. ಇದು ಸಮಾಜದ ಇತರ ವಿಭಾಗಗಳೊಂದಿಗೆ ಅವರ ಸಂವಹನದಲ್ಲಿ ಮಿತಿಗಳನ್ನು ಸೃಷ್ಟಿಸುತ್ತದೆ, ಇದು ಅವರಿಗೊಂದು ಅಡಚನೆ ಎಂದು ನಂಬುತ್ತಾರೆ ಫೈಝಿ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಎಎಸ್‌ಎಎಸ್‌ಗೆ ದಾಖಲಿಸಲಾಗುತ್ತದೆ. ಎಂಟು ವರ್ಷಗಳ ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ, ಅವರು ‘ಮಾಲಿಕಿ’ ಎಂಬ ಧಾರ್ಮಿಕ ಪದವಿಯ ಜೊತೆಗೆ ವಿಶ್ವವಿದ್ಯಾನಿಲಯ ಪದವಿಯನ್ನು ಪಡೆಯುತ್ತಾರೆ. ಕ್ಯಾಲಿಕಟ್ ವಿಶ್ವವಿದ್ಯಾಲಯದ ದೂರ ಶಿಕ್ಷಣದ ಅಡಿಯಲ್ಲಿ ಡಿಗ್ರಿ ಪದವಿಯನ್ನು ನೀಡಲಾಗುತ್ತದೆ. ಒಟ್ಟಾರೆ, ಮದರಸ ಹಾಗೂ ಇಸ್ಲಾಮಿಕ್‌ ವಿಧ್ಯಾಭ್ಯಾಸ ಸಂಸ್ಥೆಗಳ ವಿರುದ್ಧ ನಡೆಸುತ್ತಿರುವ ವ್ಯವಸ್ಥಿತ ಷಡ್ಯಂತ್ರದ ನಡುವೆ ಷರಿಯಾ ಕಾಲೇಜೊಂದರಿಂದ ಇಂತಹ ಸುದ್ದಿಯೊಂದು ಕೇಳಿ ಬಂದಿರುವುದು ನಿಜಕ್ಕೂ ಪರಿಣಾಮಕಾರಿ.

Tags: BJPCongress PartyCovid 19ಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

ಮುರುಘಾ ಮಠ ಸ್ವಾಮಿಗಳ ಮೇಲೆ ಪ್ರಕರಣ ದಾಖಲಿಸಿರುವುದು ಸರಿಯಲ್ಲ : ಸಿಎಂ ಇಬ್ರಾಹಿಂ

Next Post

ಮುರುಘಾ ಶರಣರ ಪ್ರಕರಣ : ತನಿಖೆ ಬಳಿಕ ಸತ್ಯ ಹೊರಬಲಿದೆ ಎಂದ ಸಿಎಂ ಬೊಮ್ಮಾಯಿ

Related Posts

ಶಾಲಾ ಮಕ್ಕಳಿಗೆ ಭಗವದ್ಗೀತೆ ಯಾಕೆ ಬೋಧಿಸಬೇಕು..?: ಕಾರಣ ನೀಡಿದ ಕುಮಾರಸ್ವಾಮಿ
Top Story

ಶಾಲಾ ಮಕ್ಕಳಿಗೆ ಭಗವದ್ಗೀತೆ ಯಾಕೆ ಬೋಧಿಸಬೇಕು..?: ಕಾರಣ ನೀಡಿದ ಕುಮಾರಸ್ವಾಮಿ

by ಪ್ರತಿಧ್ವನಿ
December 18, 2025
0

ನವದೆಹಲಿ: ಶಾಲಾ ಹಂತದಿಂದಲೇ ಭಗವದ್ಗೀತೆಯನ್ನು( Bhagavad Gita) ಮಕ್ಕಳಿಗೆ ಬೋಧಿಸಬೇಕು. ಇದು ಅತ್ಯಂತ ಉತ್ತಮ ಶೈಕ್ಷಣಿಕ ಸುಧಾರಣಾ ಕ್ರಮವಾಗುತ್ತದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು...

Read moreDetails
ದೇಶದಲ್ಲಿ ಹಣದುಬ್ಬರ ಪ್ರಮಾಣ ಇಳಿಕೆ..! ಕಾರಣವೇನು?

ದೇಶದಲ್ಲಿ ಹಣದುಬ್ಬರ ಪ್ರಮಾಣ ಇಳಿಕೆ..! ಕಾರಣವೇನು?

December 17, 2025

ರಸ್ತೆ ಅಪಘಾತ ಸಂತ್ರಸ್ತರಿಗೆ 1.5 ಲಕ್ಷದವರೆಗೆ ‘ಉಚಿತ ಚಿಕಿತ್ಸೆ’ ; ಕೇಂದ್ರದಿಂದ ಹೊಸ ಯೋಜನೆ

December 17, 2025

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

December 17, 2025

ದ್ವೇಷ ರಾಜಕಾರಣ ಬಿಜೆಪಿ ಆಸ್ತಿ, ಅವರ ಸುಳ್ಳು ಕೇಸ್ ಗಳಿಗೆ ಆಯುಷ್ಯವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್..

December 17, 2025
Next Post
ACB ರದ್ದುಗೊಳಿಸಿ ಹೈಕೋರ್ಟ್ ಆದೇಶ: ಕಾನೂನು ತಜ್ಞರ ವರದಿ ಬಳಿಕ ಕ್ರಮಕ್ಕೆ ಸಂಪುಟ ತೀರ್ಮಾನ

ಮುರುಘಾ ಶರಣರ ಪ್ರಕರಣ : ತನಿಖೆ ಬಳಿಕ ಸತ್ಯ ಹೊರಬಲಿದೆ ಎಂದ ಸಿಎಂ ಬೊಮ್ಮಾಯಿ

Please login to join discussion

Recent News

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌
Top Story

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
December 18, 2025
ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ
Top Story

ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

by ಪ್ರತಿಧ್ವನಿ
December 18, 2025
ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!
Top Story

ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!

by ಪ್ರತಿಧ್ವನಿ
December 18, 2025
Winter Session 2025: ತೀವ್ರ ವಿರೋಧದ ನಡುವೆಯೂ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ
Top Story

Winter Session 2025: ತೀವ್ರ ವಿರೋಧದ ನಡುವೆಯೂ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ

by ಪ್ರತಿಧ್ವನಿ
December 18, 2025
ಕಂದಾಯ ಸಚಿವರ ಅಕ್ರಮಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ?: ಬಿ.ವೈ ವಿಜಯೇಂದ್ರ
Top Story

ಕಂದಾಯ ಸಚಿವರ ಅಕ್ರಮಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ?: ಬಿ.ವೈ ವಿಜಯೇಂದ್ರ

by ಪ್ರತಿಧ್ವನಿ
December 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

December 18, 2025
ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

December 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada