ಮಂಡ್ಯ: ಗಿಲ್ಲಿ ನಟ(Gilli Nata) ಬಿಗ್ ಬಾಸ್ ಕನ್ನಡ ಸೀಸನ್ 12ರ( Bigg Boss Kannada Season 12) ಗೆಲುವಿನ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah), ಗೃಹ ಸಚಿವ ಜಿ.ಪರಮೇಶ್ವರ್(G. Parameshwara) ಸೇರಿದಂತೆ ಜನಪ್ರಿಯ ವ್ಯಕ್ತಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಿದ್ದಾರೆ. ಈ ನಡುವೆ ಇದೀಗ ತಮ್ಮ ಹಳೆಯ ಶಾಲೆಗೆ ಭೇಟಿ ನೀಡಿ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಮಂಡ್ಯ ಮಳವಳ್ಳಿ ತಾಲೂಕಿನ ಬಂಡೂರಿನ ಪ್ರೌಢಶಾಲೆಯಲ್ಲಿ ಗಿಲ್ಲಿ ನಟ ವಿದ್ಯಾಭ್ಯಾಸ ಮಾಡಿದ್ದು, ಇಂದು ಅದೇ ಶಾಲೆಗೆ ಭೇಟಿ ನೀಡಿ, ಗುರುಗಳ ಆಶೀರ್ವಾದ ಪಡೆದಿದ್ದಾರೆ. ಅಲ್ಲದೇ ವಿದ್ಯಾರ್ಥಿ ಜೀವನದಲ್ಲಿ ತಾವು ಕುಳಿತಿದ್ದ ತರಗತಿಗೆ ತೆರಳಿ, ಬೆಂಚಿನ ಮೇಲೆ ಕೂತು ಹಳೆಯ ದಿನಗಳನ್ನು ನೆನಪಿಸಿಕೊಂಡರು. ಬೆಂಚಿನ ಮೇಲೆ ತಾವು ಬರೆದಿದ್ದ ಹೆಸರನ್ನು ನೋಡಿ ಖುಷಿಪಟ್ಟರು.

ಈ ವೇಳೆ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗಿಲ್ಲಿ ಜೊತೆ ಫೋಟೊಗಳನ್ನು ತೆಗೆದುಕೊಂಡಿದ್ದು. ಅಲ್ಲದೇ ಗ್ರಾಮಸ್ಥರು ಕೂಡ ಗಿಲ್ಲಿಯೊಂದಿಗೆ ಫೋಟೊಗಳನ್ನು ಕ್ಲಿಕ್ಕಿಸಿಕೊಂಡರು. ಬಂಡೂರಿನ ಪ್ರೌಢಶಾಲೆಯ ಸಿಬ್ಬಂದಿ ಗಿಲ್ಲಿಗೆ ಹಾರ ಹಾಗೂ ಶಾಲು ಹಾಕಿ ಸನ್ಮಾನಿಸಿದರು. ಹಳೆಯ ಶಾಲೆಗೆ ಭೇಟಿ ನೀಡಿದ ಗಿಲ್ಲಿಯ ಸರಳತೆ ಮತ್ತು ವಿದ್ಯಾರ್ಥಿಗಳೊಂದಿಗೆ ಬೆರೆಯುವ ಗುಣ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.












