
ಪಲ್ವಾಲ್: ಹಳೆ ಜಿಟಿ ರಸ್ತೆಯಲ್ಲಿ ಪಿಎನ್‌ಜಿ ಗ್ಯಾಸ್ ಪೈಪ್‌ಲೈನ್ ಸ್ಫೋಟಗೊಂಡ ಪರಿಣಾಮ ಮಂಗಳವಾರ ಹರ್ಯಾಣದ ಪಲ್ವಾಲ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಮೂರು ಅಂಗಡಿಗಳು ಮತ್ತು ಜೆಸಿಬಿ ಯಂತ್ರಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಪಕ್ಕದಲ್ಲಿ ಟೀ ಸ್ಟಾಲ್ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಸುಟ್ಟು ಕರಕಲಾಗಿದ್ದಾರೆ.

ಜೆಸಿಬಿ ಯಂತ್ರದಿಂದ ನೀರಿನ ಮಾರ್ಗಕ್ಕಾಗಿ ಹೊಂಡ ತೋಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮೂರು ಅಂಗಡಿಗಳಿಗೆ ಬೆಂಕಿ ಹೊತ್ತಿ ಉರಿದಿದೆ. ಹಳೆ ಜಿ.ಟಿ.ರಸ್ತೆಯಲ್ಲಿ ಕುಡಿಯುವ ನೀರಿನ ಮಾರ್ಗವನ್ನು ಸರಿಪಡಿಸಲು ಜೆಸಿಬಿ ಯಂತ್ರದ ಸಹಾಯದಿಂದ ದೊಡ್ಡ ಹೊಂಡ ತೋಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತುಂಬಾ ಆಳವಾಗಿ ಅಗೆದಿದ್ದರಿಂದ ಜೆಸಿಬಿ ಯಂತ್ರದ ಅಗೆಯುವ ಭಾಗವು ಪಿಎನ್‌ಜಿ ಗ್ಯಾಸ್ ಪೈಪ್‌ಲೈನ್‌ಗೆ ತಗುಲಿ ಕಿಡಿ ಹೊತ್ತಿ ಪಿಎನ್‌ಜಿ ಗ್ಯಾಸ್ ಲೈನ್‌ನಲ್ಲಿ ಭಾರಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಮೊದಲು ಸಮೀಪದಲ್ಲಿ ನಡೆಯುತ್ತಿದ್ದ ಟೀ ಅಂಗಡಿಗೆ ಆವರಿಸಿದೆ. ಅಂಗಡಿಯೊಳಗೆ ಇರಿಸಲಾಗಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಸ್ವಲ್ಪ ಸಮಯದಲ್ಲೇ ಮೂರು ಅಂಗಡಿಗಳು ಮತ್ತು ಜೆಸಿಬಿ ಯಂತ್ರಕ್ಕೆ ಬೆಂಕಿ ಹೊತ್ತಿಕೊಂಡಿದೆ. ಜೆಸಿಬಿ ಯಂತ್ರದ ಚಾಲಕ ಮತ್ತು ಪಕ್ಕದಲ್ಲಿ ಕೆಲಸ ಮಾಡುತ್ತಿದ್ದವರು ಹೇಗೋ ಸ್ಥಳದಿಂದ ಓಡಿ ಬಂದು ಪ್ರಾಣ ಉಳಿಸಿಕೊಂಡರು. ನೂಕು ನುಗ್ಗಲಿನಲ್ಲಿ ಹಲವರು ಗಾಯಗೊಂಡಿದ್ದಾರೆ. ಆದರೆ ಟೀ ಅಂಗಡಿ ನಡೆಸುತ್ತಿದ್ದ ಹರಿಪ್ರಕಾಶ ಸಿಂಗ್ಲಾ ಬೆಂಕಿಯಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗದೆ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ. ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಕೆಲವೇ ಗಂಟೆಗಳಲ್ಲಿ ಬೆಂಕಿಯನ್ನು ಹತೋಟಿಗೆ ತಂದರು. ಅಧಿಕಾರಿಗಳ ಪ್ರಕಾರ, ಬೆಂಕಿಯಲ್ಲಿ ನಾಲ್ಕು ದ್ವಿಚಕ್ರ ವಾಹನಗಳು ಸುಟ್ಟು ಭಸ್ಮವಾಗಿವೆ
ಇದಲ್ಲದೇ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಸರ್ಕಾರಿ ಇಲಾಖೆಗಳ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ ಎಂದು ಮೃತ ಹರಿಪ್ರಕಾಶ್ ಸಿಂಗ್ಲಾ ಅವರ ಸಂಬಂಧಿ ಲಕ್ಷ್ಮಣ್ ಹೇಳಿದ್ದಾರೆ. ಸಾರ್ವಜನಿಕ ಆರೋಗ್ಯ ಮತ್ತು ಪಿಎನ್‌ಜಿ ಗ್ಯಾಸ್ ಪೈಪ್‌ಲೈನ್ ನೌಕರರೇ ಇದಕ್ಕೆ ಕಾರಣವಾಗಿದ್ದು, ಅವರ ನಿರ್ಲಕ್ಷ್ಯದಿಂದ ಅವರ ಅಣ್ಣ ಸಾವನ್ನಪ್ಪಿದ್ದಾರೆ.ಅಗ್ನಿ ಅವಘಡದಿಂದ ಒಬ್ಬರು ಸಾವನ್ನಪ್ಪಿದ್ದು, ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ಡಿಎಸ್ಪಿ ಪಲ್ವಾಲ್ ಮಹೇಂದ್ರ ತಿಳಿಸಿದ್ದಾರೆ.
ಜೆಸಿಬಿ ಯಂತ್ರದಿಂದ ಅಗೆಯುವ ಕಾರ್ಯ ನಡೆಯುತ್ತಿದೆ ಎಂದು ಅಪಘಾತದ ಪ್ರತ್ಯಕ್ಷದರ್ಶಿ ಜತಿನ್ ತಿಳಿಸಿದ್ದಾರೆ. ಇದ್ದಕ್ಕಿದ್ದಂತೆ ಗ್ಯಾಸ್ ಪೈಪ್‌ಲೈನ್‌ನಲ್ಲಿ ಸ್ಫೋಟ ಸಂಭವಿಸಿದೆ ಮತ್ತು ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅವರು ಹೇಳಿದರು.