ಹೈದರಾಬಾದ್:ಗಣೇಶ ಚತುರ್ಥಿಯಂದು : (Ganesh Chaturthi)ಸಾಮಾನ್ಯವಾಗಿ ಮನೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಕೂರಿಸಿ ಹಬ್ಬವನ್ನು ಆಚರಿಸಲಾಗುತ್ತದೆ.ಆದರೆ ವಿಚಿತ್ರವೇನಂದರೆ ಹೈದರಾಬಾದ್‌ನಲ್ಲಿ (Hyderabad)ಹಿಂದೂಗಳಿಗೆ ಅವಮಾನವಾಗುವಂತೆ ಗಣಪತಿಯ ಮೂರ್ತಿಯನ್ನು ಮುಸ್ಲಿಮರಿಗೆ ( Muslims)ಹೋಲುವಂತೆ ವಿನ್ಯಾಸಗೊಳಿಸದ್ದಲ್ಲದೇ, ಸಾರ್ವಜನಿಕವಾಗಿ ಕೂರಿಸಲಾಗಿದೆ ಎಂದು ಹಿಂದೂಗಳು ಆಕ್ರೋಶ ಹೊರಹಾಕುತ್ತಿದ್ದಾರೆ.
https://www.instagram.com/reel/C_7iArBSw_X/?igsh=MTd6OGc2MXZqcHJwcA==
ಈ ವಿಷಯ ಈಗ ಭಾರೀ ಸದ್ದು ಮಾಡುತ್ತಿದ್ದು,ಹಿಂದೂಗಳನ್ನು ಆಕ್ರಮಿಸಲು, ಗಲಾಟೆ ಎಬ್ಬಿಸಲು ಈ ರೀತಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.ಗಣೇಶ ಮೂರ್ತಿ, ಮಂಟಪ, ಅಲ್ಲಿನ ವ್ಯವಸ್ಥೆ ಜಾತ್ಯತೀತತೆ, ಧರ್ಮವನ್ನು ಆಧರಿಸಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಹಲವು ಹಿಂದೂಗಳು ಈ ಬೆಳವಣಿಗೆಯಿಂದ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹಿಂದೂಗಳು ಇತ್ತೀಚಿನ ದಿನಗಳಲ್ಲಿ ತಮಾಷೆಯಾಗುತ್ತಿದ್ದೇವೆ ಎಂದು ಅಸಮಧಾನ ಹೊರಹಾಕಿದ್ದಾರೆ.