ಸಿನಿಮಾದ ತಾರಾಗಣದಿಂದಲೇ ದೊಡ್ಡ ಮಟ್ಟದ ಸೆನ್ಸೆಷನ್ ಸೃಷ್ಟಿಸಿದ್ದ ಪ್ರಭಾಸ್ (Prabhas) ನಟನೆಯ ಕಲ್ಕಿ (Kalki) ಸಿನಿಮಾ ಇಂದು ವಿಶ್ವದಾದ್ಯಂತ ಭರ್ಜರಿಯಾಗಿ ರಿಲೀಸ್ ಆಗಿದೆ. ಈಗಾಗಲೇ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಬಾಕ್ಸ್ ಆಫೀಸ್ನಲ್ಲಿ (Box office) ಪ್ರಭಾಸ್ ಮತ್ತೆ ಮ್ಯಾಜಿಕ್ ಮಾಡೋ ಸೂಚನೆ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲೂ (Bangalore) ಕಲ್ಕಿಗೆ ಭರ್ಜರಿ ವೆಲ್ ಕಂ ಸಿಕ್ಕಿದ್ದು, ಮುಂಜಾನೆ 5 ಗಂಟೆಗೆ ಹಲವೆಡೆ ಪ್ರದರ್ಶನ ಕಂಡಿದೆ. ಬಾಹುಬಲಿ 2 (bahubali 2) ನಂತರ ಸತತ ಸೋಲುಗಳಿಂದ ಕಂಗೆಟ್ಟಿದ್ದ ಪ್ರಭಾಸ್ ಗೆಲುವು ಕೊಟ್ಟಿದ್ದು ಸಲಾರ್ (Salar) ಚಿತ್ರ. ಇದೀಗ ಕಲ್ಕಿ ಕೂಡ ಅಷ್ಟೇ ದೊಡ್ಡ ರೆಸ್ಪಾನ್ಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ಅಬಿತಾಬ್ ಬಚ್ಚನ್, ಹೀಗೆ ಭಾರತ ಚಿತ್ರರಂಗದ ಘಟಾನುಘಟಿ ನಟರ ತಾರಾಗಣವೇ ಚಿತ್ರದಲ್ಲಿದ್ದು, ಬರೋಬ್ಬರಿ 600 ಕೊಟಿ ವೆಚ್ಚದಲ್ಲಿ ಮಸಿನಿಮಾ ನಿರ್ಮಾಣವಾಗಿದ್ದು, ಈಗಾಗಲೇ ಗೆಲುವಿನ ಸೂಚನೆ ಸಿಕ್ಕಿದೆ.










