ಮಂಡ್ಯ (mandya) ಜೆಡಿಎಸ್ (jds) ತೆಕ್ಕೆಗೆ ಎಂದು ಖಾತ್ರಿಯಾದ ನಂತರ ಇದೇ ಮೊದಲ ಬಾರಿಗೆ ಹೆಚ್.ಡಿ.ಕುಮಾರಸ್ವಾಮಿ(H.D.kumaraswamy)ಮತ್ತು ನಿಖಿಲ್ ಕುಮಾರಸ್ವಾಮಿ(Nikhil kumaraswamy) ಇಂದು ಮಂಡ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಪೂರ್ವ ಸಿದ್ಧತೆ ಸಭೆ ನಡೆಸಿದ್ರು. ಈ ಸಭೆಯಲ್ಲಿ (Meeting) ಅಭ್ಯರ್ಥಿ ಆಯ್ಕೆ ವಿಚಾರಚಾಗಿ ಸ್ವಾರಸ್ಯಕರ ಸಂಗತಿ ನಡೆದಿದೆ. ಇದುವರೆಗೂ ಮಂಡ್ಯದಿಂದ ಸಿ.ಎಸ್.ಪುಟ್ಟರಾಜು (C.S.Puttaraju) ಅಭ್ಯರ್ಥಿ ಎಂದು ಅಂದಾಜಿಲಸಾಗಿತ್ತು. ಆದ್ರೆ ಇಂದಿನ ಸಭೆಯಲ್ಲಿ ಈ ಲೆಕ್ಕಾಚಾರಗಳೆಲ್ಲಾ ಉಲ್ಟಾ ಆದಂತೆ ಕಾಣಿದೆ.

ಆಶ್ಚರ್ಯವೆಂಬಂತೆ ಈ ಸಭೆಯಲ್ಲಿ ಸ್ವತಃ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿದ್ದ ಪುಟ್ಟರಾಜು (Puttaraju) ನೀಡಿದ ಹೇಳಿಕೆ ಊರಿಗೆ ಕಾರಣವಾಗಿತ್ತು. ಸಭೆಯಲ್ಲಿ ಮಾತನಾಡಿದ ಪುಟ್ಟರಾಜು ಈ ಬಾರಿ ಮಂಡ್ಯದಿಂದ ಕುಮಾರಸ್ವಾಮಿ (kumaraswamy) ಅಥವಾ ನಿಖಿಲ್ ಕುಮಾರಸ್ವಾಮಿ (nikhil kumaraswamy) ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸಿದ್ದೂ ಅಲ್ಲದೇ ನೀವು ಕೇಲವ ಚುನಾವಣೆಗೆ (election) ನಿಲ್ಲಿ, ಎಲೆಕ್ಷನ್ ನಡೆಸಿ ನಿಮ್ಮನ್ನ ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂಬ ಅಭಯ ನೀಡಿದ್ದಾರೆ.

ಇದೇ ಸಭೆಯಲ್ಲಿ ಈ ಹಿಂದಿನ 2019ರ ಲೋಕಸಭಾ ಚುನಾವಣೆಯ (mp election) ನಿಖಿಲ್ ಕುಮಾರಸ್ವಾಮಿ ಸೋಲನ್ನ ನೆನೆದು ಕುಮಾರಸ್ವಾಮಿ (kumaraswamy) ಭಾವುಕರಾದ್ರು ಈ ಬಾರಿ ‘ಯಾವುದೇ ಕಾರಣಕ್ಕೂ ಹಳೆಯ ಫಲಿಂತಾಶ (Results) ಮರುಕಳಿಸದ ಹಾಗೇ ನೋಡಿಕೊಳ್ಳೋದು ನಮ್ಮ ಜವಾಬ್ದಾರಿ. ನೀವು ನಿಶ್ಚಿಂತೆಯಿಂದ ಇರಿ ಎಂದು ಕಾರ್ಯಕರ್ತರು ಅಭಯ ನೀಡಿದ್ದಾರೆ. ಹೀಗಾಗಿ ಮತ್ತೊಮ್ಮೆ ನಿಖಿಲ್ (Nikhil) ಮಂಡ್ಯದಿಂದ (Mandya) ಸ್ಪರ್ಧೆ ಮಾಡ್ತಾರ ಎಂಬ ಕುತೂಹಲ ಹೆಚ್ಚಾಗಿದೆ.












