ಹುಲಿ, ಸಿಂಹ, ಆನೆಯಂತಹ ವನ್ಯಜೀವಿಗಳ ಸಂರಕ್ಷಣೆ ಮತ್ತು ಜಾಗೃತಿಯ ಕಾರ್ಯಕ್ರಮಗಳು ನೂರಾರಿವೆ. ದಶಕಗಳಿಂದ ಅಂತಹ ಪ್ರಮುಖ ಪ್ರಾಣಿಗಳ ಕುರಿತು ನಡೆದ ಸಂರಕ್ಷಣೆ ಮತ್ತು ಜಾಗೃತಿ ಅಭಿಯಾನಗಳ ಫಲವಾಗಿ ಕ್ರಮೇಣ ಅವುಗಳ ಸಂಖ್ಯೆ ಏರುಗತಿಯಲ್ಲಿದೆ. ಅದಕ್ಕೆ ಮುಖ್ಯ ಕಾರಣ ಜನಸಾಮಾನ್ಯರಲ್ಲಿ ಅವುಗಳ ಮಹತ್ವದ ಬಗ್ಗೆ ಮೂಡಿರುವ ತಿಳಿವಳಿಕೆ ಮತ್ತು ಅವುಗಳ ರಕ್ಷಣೆಯ ನಿಟ್ಟಿನಲ್ಲಿ ರೂಪಿಸಿರುವ ಬಿಗಿ ಕಾನೂನು ಕ್ರಮಗಳ ಭಯ.
ಆದರೆ, ಜೀವವೈವಿಧ್ಯದ ದೃಷ್ಟಿಯಿಂದ ಮತ್ತು ಜೀವ ಪರಿಸರದ ಸಮತೋಲನದ ದೃಷ್ಟಿಯಿಂದ ಆ ಪ್ರಮುಖ ಜೀವಿಗಳಷ್ಟೇ ಪ್ರಮುಖವಾಗಿದ್ದರೂ ಕೆಲವು ಕಾರಣಗಳಿಂದಾಗಿ ಮೂಲೆಗುಂಪಾಗಿರುವ ಮತ್ತು ಅಂತಹ ನಿರ್ಲಕ್ಷ್ಯದ ಕಾರಣದಿಂದಾಗಿಯೇ ಅವಸಾನದ ಹಾದಿಯಲ್ಲಿರುವ ಜೀವಿಗಳೂ ಇವೆ. ಸಾಮಾನ್ಯವಾಗಿ ಜನವಸತಿ ಪ್ರದೇಶ, ಕೃಷಿ ಪ್ರದೇಶಗಳಲ್ಲಿ, ಜಲಮೂಲ ಅಥವಾ ಕಾಡಂಚಿನ ಖಾಲಿ ಜಾಗಗಳಲ್ಲಿ ಕಂಡುಬರುವ ಮತ್ತು ಹಾಗೇ ಸುಲಭವಾಗಿ ಕಂಡುಬರುವ ಕಾರಣಕ್ಕೇ ಉದಾಸೀನಕ್ಕೊಳಗಾಗಿರುವ ಮೀನು, ಏಡಿ, ಕಪ್ಪೆ, ಇರುವೆ, ಗುಬ್ಬಚ್ಚಿ, ಗೀಜಗ, ಹಾವು ಮುಂತಾದ ಪ್ರಾಣಿ ಸಂಕುಲದ ಹಲವು ಪ್ರಬೇಧಗಳು ನಿಜಕ್ಕೂ ಅವಸಾನದ ಹಾದಿಯಲ್ಲಿವೆ. ಆದರೂ, ಅವುಗಳ ಕುರಿತ ಮನುಷ್ಯರ ಅವಜ್ಞೆಯ ಕಾರಣಕ್ಕೆ ಅವುಗಳಿಗೆ ಎದುರಾಗಿರುವ ಅಪಾಯದ ಕುರಿತು ನಮಗೆ ಅರಿವೇ ಇಲ್ಲ!
ಹಾಗೆ ಜನರಿಗೆ ಚಿರಪರಿಚಿತ ಜೀವಿಗಳಲ್ಲಿ ಕಪ್ಪೆ ಕೂಡ ಒಂದು. ಅದರಲ್ಲೂ ನಮ್ಮ ಜಾನಪದ ಕಥೆಗಳಲ್ಲಿ, ಮಕ್ಕಳ ಕಥೆಗಳಲ್ಲಿ ಕಪ್ಪೆರಾಯನ ಪುರಾಣಗಳು ಒಂದೆರಡಲ್ಲ. ಶಾಪಗ್ರಸ್ಥೆಯಾಗಿ ಕಪ್ಪೆಯ ರೂಪದಲ್ಲಿದ್ದ ರಾಜಕುಮಾರಿ ರಾಜಕುಮಾರನ ಸ್ಪರ್ಶದಿಂದ ಮತ್ತೆ ಅಂದದ ರಾಜಕುಮಾರಿಯಾದ ಬದಲಾದ ಫ್ಯಾಂಟಸಿ ಕಥೆಯನ್ನಂತು ನಾವೆಲ್ಲಾ ಕೇಳಿ ಇರ್ತೀವಿ. ರಾಜಕುಮಾರಿಯನ್ನು ಎಲ್ಲರೂ ಬಣ್ಣಿಸುತ್ತಾರೆ, ವರ್ಣಿಸುತ್ತಾರೆ. ಆಕೆಯ ಅಂದಕ್ಕೆ ಎಲ್ಲರೂ ಮರುಳಾಗುತ್ತಾರೆ. ಆದರೆ, ರಾಜಕುಮಾರಿಯ ನೈಜ ರೂಪಕ್ಕೆ ಮುಂಚಿನ ಆಕೆಯ ಕಪ್ಪೆ ರೂಪವನ್ನು ಮೆಚ್ಚುವವರು ಯಾರು?
Also Read : ಉಭಯವಾಸಿಗಳ ಜೀವ ಸಂಕುಲ ಸಂರಕ್ಷಣೆಯ ಆಶಯದ ಕಪ್ಪೆ ಹಬ್ಬ!
ಇಡೀ ಜೀವ ಪರಿಸರದ ಆರೋಗ್ಯ ಸೂಚಕ ಜೀವಿಯಾಗಿರುವ ಕಪ್ಪೆಗಳ ಸಂತತಿಯ ಕುರಿತು ಸದ್ಯ ನಮಗಿರುವ ಉದಾಸೀನಕ್ಕೂ ಒಂದು ರೂಪಕದಂತಿರುವ ರಾಜಕುಮಾರಿ ಕಪ್ಪೆಯ ಆ ಕಥೆಯನ್ನು ನಾವೀಗ ಕಪ್ಪೆಗಳ ದೃಷ್ಟಿಯಿಂದ ಓದಿಕೊಳ್ಳಬೇಕಿದೆ.
ಹಾಗೆ ಕಪ್ಪೆಯ ಕಥೆಯನ್ನು ಕಪ್ಪೆಗಳ ದೃಷ್ಟಿಯಿಂದಲೇ ನೋಡುವ ಒಂದು ಪ್ರಯತ್ನವೇ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಮತ್ತು ವನ್ಯಜೀವಿ ವಿಭಾಗ ಶಿವಮೊಗ್ಗ ಜಿಲ್ಲೆಯ ಶರಾವತಿ ಕಣಿವೆಯ ಮುಪ್ಪಾನೆ ಪ್ರಕೃತಿ ಶಿಬಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಪ್ಪೆ ಹಬ್ಬ-2021.
ಸುಮಾರು 20ಕ್ಕೂ ಹೆಚ್ಚು ಹೊಸ ಕಪ್ಪೆ ಪ್ರಭೇದಗಳು ಪತ್ತೆಯಾಗಿರುವ ಮತ್ತು ಇನ್ನಷ್ಟು ಪ್ರಭೇದಗಳ ಕುರಿತ ಸಂಶೋಧನೆಯಾಗಬೇಕಿರುವ ಅಪರೂಪದ ಜೀವವೈವಿಧ್ಯದ ಕಣಜ ಶರಾವತಿ ಕಣಿವೆಯಲ್ಲಿ ಡಿಸೆಂಬರ್ 18-19ರಂದು ಆಯೋಜಿಸಿದ್ದ ಈ ಕಪ್ಪೆ ಹಬ್ಬದಲ್ಲಿ ಹಲವು ಕಪ್ಪೆ ಪರಿಣಿತರು, ಸಂಶೋಧಕರು, ಅರಣ್ಯ ಮತ್ತು ವನ್ಯಜೀವಿ ಅಧ್ಯಯನನಿರತ ವಿದ್ಯಾರ್ಥಿಗಳು ಹಾಗೂ ಕಪ್ಪೆಗಳ ಕುರಿತು ಆಸಕ್ತಿ ಸಾರ್ವಜನಿಕರು ಆಸಕ್ತಿಯಿಂದ ಭಾಗವಹಿಸಿದ್ದರು. ಮುಖ್ಯವಾಗಿ ಶಿವಮೊಗ್ಗ ಮೂಲದವರೇ ಆದ ಅಂತಾರಾಷ್ಟ್ರೀಯ ಖ್ಯಾತಿಯ ಕಪ್ಪೆ ವಿಜ್ಞಾನಿ, ‘ಸೃಷ್ಟಿ- ಇನ್ ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿಯ’ ಸಂಶೋಧಕ ಡಾ ಕೆ ವಿ ಗುರುರಾಜ್ ಎರಡೂ ದಿನ ಇದ್ದು, ಯುವ ಸಂಶೋಧಕರಿಗೆ ಮಾರ್ಗದರ್ಶನ ಮಾಡಿದರು.
ಹಾಗೇ ಕಪ್ಪೆ ಸಂತತಿಯ ಮೇಲೆ ಬೆಳಕು ಚೆಲ್ಲುವ ಹಲವು ಸಂಶೋಧನೆಗಳನ್ನು ನಡೆಸಿರುವ ಡಾ ಪ್ರೀತಿ ಹೆಬ್ಬಾರ್, ಡಾ ಶೇಶಾದ್ರಿ ಕೆ ಎಸ್, ಡಾ. ವಿನೀತ್ ಕುಮಾರ್, ಡಿಸಿಎಫ್ ಬಿ ಎಂ ರವೀಂದ್ರ ಕುಮಾರ್, ಓಂಕಾರ್ ಪೈ ಸೇರಿದಂತೆ ಹಲವು ಸಂಶೋಧಕರು ಮತ್ತು ವನ್ಯಜೀವಿ ತಜ್ಞರು ವಿವಿಧ ವಿಷಯಗಳ ಕುರಿತು ಮಾತನಾಡಿದರು. ಪ್ರದೀಪ್ ಹೆಗ್ಡೆ ಮತ್ತು ಧೀರಜ್ ಐತಾಳ್ ಅವರು ನಿರ್ಮಿಸಿರುವ ಕಪ್ಪೆಗಳ ಸಂರಕ್ಷಣೆಯ ಮಹತ್ವದ ಕೆಲಸ ಮಾಡುತ್ತಿರುವ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವಲಯ ಅರಣ್ಯಾಧಿಕಾರಿ ಸಿ ಆರ್ ನಾಯಕ್ ಅವರ ಕುರಿತ ‘ದ ಲಾಸ್ಟ್ ಹೋಪ್’ ಸಾಕ್ಷ್ಯಚಿತ್ರವಂತೂ ಪ್ರತಿನಿಧಿಗಳ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
ಹಾಗೇ ಇಡೀ ಎರಡು ದಿನದ ಹಬ್ಬದಲ್ಲಿ ಗಮನ ಸೆಳೆದದ್ದು ಕಾರವಾರ ವನ್ಯಜೀವಿ ವಿಭಾಗದ ವಿವಿಧ ಹುದ್ದೆಯಲ್ಲಿರುವ ಇಲಾಖೆಯ ನೌಕರರ ಕಪ್ಪೆ ಕುರಿತ ಸಂಶೋಧನೆಗಳು. ಅದು ಸಿ ಆರ್ ನಾಯಕ್ ಇರಬಹುದು, ರಮೇಶ್ ಬಡಿಗೇರ್ ಇರಬಹುದು, ಪರಶುರಾಮ್ ಭಜಂತ್ರಿ ಇರಬಹುದು, ಎಲ್ಲರೂ ವಿವಿಧ ಕಪ್ಪೆ ಪ್ರಭೇದಗಳ ಮೇಲೆ ನಡೆಸಿರುವ ಸಂಶೋಧನೆಗಳು ಮತ್ತು ಕಂಡುಕೊಂಡಿರುವ ವಿಸ್ಮಯಕಾರಿ ಸಂಗತಿಗಳು ಕಪ್ಪೆ ಕುರಿತ ಹೊಸ ಸಂಶೋಧನಾಸಕ್ತರಿಗೆ ದೊಡ್ಡ ಪ್ರೇರಣೆಗಳಾಗಿವೆ.
ಕಪ್ಪೆಗಳ ಕುರಿತ ಅಧ್ಯಯನ ಆಸಕ್ತಿ ಮತ್ತು ಸಂರಕ್ಷಣೆಯ ಜಾಗೃತಿ ಮೂಡಿಸುವ ಉದ್ದೇಶದಿಂದಲೇ ಆಯೋಜಿಸಿದ್ದ ಕಪ್ಪೆ ಹಬ್ಬ, ಯುವ ಸಂಶೋಧಕರು, ವಿದ್ಯಾರ್ಥಿಗಳಲ್ಲಿ ಆ ನಿಟ್ಟಿನಲ್ಲಿ ಆಸಕ್ತಿ ಕೆರಳಿಸುವಲ್ಲಿ ಮತ್ತು ಕಪ್ಪೆಗಳ ಕುರಿತ ಹೊಸ ಸಂಗತಿಗಳನ್ನು ಶೋಧಿಸುವ ನಿಟ್ಟಿನಲ್ಲಿ ಪ್ರೇರಣೆ ನೀಡುವಲ್ಲಿ ಯಶಸ್ವಿಯಾಗಿದೆ ಎಂಬುದಕ್ಕೆ ಹಬ್ಬದಲ್ಲಿ ಭಾಗಿಯಾಗಿದ್ದ ಸಂಶೋಧನಾಸಕ್ತರು ಮತ್ತು ವಿದ್ಯಾರ್ಥಿಗಳ ಮಾತುಗಳೇ ಸಾಕ್ಷಿ.
“ಕಪ್ಪೆಗಳ ಬಗ್ಗೆ ಜನರಲ್ಲಿ ಆಸಕ್ತಿ ಮೂಡಿಸುವ ಮತ್ತು ಅವುಗಳ ಜೀವನಶೈಲಿಯ ಬಗ್ಗೆ ಕುತೂಹಲ ಮೂಡಿಸುವ ಮೂಲಕ ಕಪ್ಪೆಗಳ ಸಂರಕ್ಷಣೆಗೆ ಪ್ರೇರಣೆ ನೀಡುವುದು ಕಪ್ಪೆ ಹಬ್ಬದ ಉದ್ದೇಶವಾಗಿತ್ತು. ಆ ನಿಟ್ಟಿನಲ್ಲಿ ಮೊದಲ ಕಾರ್ಯಕ್ರಮವಾದ ಇದರಲ್ಲಿ ಕಪ್ಪೆಗಳ ಕುರಿತು ಸಂಶೋಧನೆ ಮತ್ತು ಅಧ್ಯಯನದ ಆಸಕ್ತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ. ವಿದ್ಯಾರ್ಥಿಗಳು, ಯುವ ಸಂಶೋಧಕರು ಭಾಗವಹಿಸಿ ಹಲವು ಪ್ರಶ್ನೆ, ಸಂವಾದ, ಚರ್ಚೆಯ ಮೂಲಕ ಮಾಹಿತಿ ಪಡೆದಿದ್ದಾರೆ. ಭವಿಷ್ಯದಲ್ಲಿ ಅವರಿಂದ ಕಪ್ಪೆಗಳ ಮೇಲೆ ಬೆಳಕು ಚೆಲ್ಲುವ ಹೊಸ ಸಂಶೋಧನೆಗಳು ಬರಬಹುದು ಎಂಬ ಆಶಾವಾದ ಮೂಡಿದೆ. ಇದಕ್ಕಿಂತ ಯಶಸ್ಸು ಇನ್ನೇನು ಬೇಕು ಹೇಳಿ” ಎನ್ನುತ್ತಾರೆ ಯುವ ವನ್ಯಜೀವಿ ಸಂಶೋಧಕ ಕಾರ್ತೀಕ್ ಚಾರ್ಲಿ.

ಕಪ್ಪೆ ಹಬ್ಬವನ್ನು ಸಂಶೋಧಕರು ಮತ್ತು ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಆಯೋಜಿಸಿದ್ದರೂ, ಅದರ ಎರಡೂ ದಿನದ ವಿಷಯ ಮಂಡನೆ, ಚರ್ಚೆ, ಸಂವಾದದಲ್ಲಿ ಹಲವು ಸ್ಥಳೀಯ ಪರಿಸರಾಸಕ್ತರು ಕೂಡ ಭಾಗವಹಿಸಿದ್ದರು. ಸ್ಥಳೀಯ ಪರಿಸರದ ಕಪ್ಪೆಗಳನ್ನು ಗುರುತಿಸುವ ಪ್ರಾಯೋಗಿಕ ಕಾರ್ಯಕ್ರಮ ‘ಫ್ರಾಗ್ ವಾಕ್’ನಲ್ಲಿ ಕೂಡ ಶಿಬಿರಾರ್ಥಿಗಳು ಮತ್ತು ಸಂಶೋಧಕರು ಭಾಗವಹಿಸಿ ಹಲವು ಕಪ್ಪೆ, ಹಾವುಗಳನ್ನು ಗುರುತಿಸಿದರು. ಅಂಬೋಲಿ ಬುಷ್ ಫ್ರಾಗ್, ಮಲಬಾರ್ ಗ್ಲೈಡಿಂಗ್ ಫ್ರಾಗ್, ಇಂಡಿರಾನಾ ಚಿರವಾಸಿ ಫ್ರಾಗ್, ಬ್ಲೂ ಐಯ್ಡ್ ಬುಲ್ ಫ್ರಾಗ್ ಸೇರಿದಂತೆ ವಿವಿಧ ಪ್ರಭೇಧಗಳ ಕಪ್ಪೆಗಳು ಹಾಗೂ ಕಾಮನ್ ಕ್ರೇಟ್, ವೋಲ್ಫ್ ಸ್ನೇಕ್, ಗ್ರೀನ್ ವೈನ್ ಸ್ನೇಕ್, ಹಂಪ್ ನೋಸ್ ಸ್ನೇಕ್, ರಸಲ್ಸ್ ಕುಕ್ರಿ ಸೇರಿದಂತೆ ಸುಮಾರು ಐದು ಬಗೆಯ ಹಾವುಗಳನ್ನು ಕೂಡ ಫ್ರಾಗ್ ವಾಕ್ ವೇಳೆ ಗುರುತಿಸಲಾಯಿತು.
ಕಪ್ಪೆಹಬ್ಬವನ್ನು ಉದ್ಘಾಟಿಸಿದ ರಾಜ್ಯ ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ(ಪಿಸಿಸಿಎಫ್) ಸಂಜಯ್ ಮೋಹನ್ ಮತ್ತು ಪಿಸಿಸಿಎಫ್ (ಐಟಿ) ರೀತು ಕಕ್ಕರ್ ಅವರು ಕಪ್ಪೆಗಳ ಜೀವ ಪರಿಸರ ಮಹತ್ವ ಮತ್ತು ಅವುಗಳ ಸಂರಕ್ಷಣೆಯ ನಿಟ್ಟಿನಲ್ಲಿ ಕಪ್ಪೆ ಹಬ್ಬ ಒಂದು ಮೊದಲ ಹೆಜ್ಜೆ. ಈಗಾಗಲೇ ಅರಣ್ಯ ಇಲಾಖೆ ಹುಲಿ, ಸಿಂಹ, ಆನೆಗಳಂತಹ ಪ್ರಮುಖ ಪ್ರಾಣಿಗಳ ಜೊತೆಗೆ ಕಪ್ಪೆ, ಹಾವು, ಮಂಗೋಟೆ ಮುಂತಾದ ಹಕ್ಕಿಗಳ ಕುರಿತೂ ಜಾಗೃತಿ ಮತ್ತು ಸಂಶೋಧನೆಯ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ವಿವಿಧ ಪ್ರಭೇದಗಳ ಕುರಿತು ಆಯಾ ಪ್ರಾಣಿಗಳ ದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲೇ ಇಂತಹ ಹಬ್ಬದಂತಹ ಚಟುವಟಿಕೆಗಳ ಮೂಲಕ ರಚನಾತ್ಮಕ ಕೆಲಸಗಳನ್ನು ನಡೆಸಲಾಗುತ್ತಿದೆ. ಮುಖ್ಯವಾಗಿ ಸಂಶೋಧನೆ ಮತ್ತು ಅಧ್ಯಯನದ ಮೂಲಕ ನಾವು ಮೊದಲು ನಮ್ಮ ಪರಿಸರದ ವನ್ಯಜೀವಿಗಳು ಮತ್ತು ಅವುಗಳ ಮಹತ್ವವನ್ನು ಹೊಸ ತಲೆಮಾರಿಗೆ ತಿಳಿಸಿಕೊಡಬೇಕಿದೆ ಎಂದು ಹಬ್ಬದ ಆಶಯ ವಿವರಿಸಿದ್ದರು.
ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಐ ಎಂ ನಾಗರಾಜ್, ಕಾರ್ಗಲ್ ವಿಭಾಗದ ಎಸಿಎಫ್ ಪ್ರಕಾಶ್, ವಲಯ ಅರಣ್ಯಾಧಿಕಾರಿಗಳಾದ ಪ್ರೀತಿ ನಾಯಕ್ ಮತ್ತು ರಾಘವೇಂದ್ರ ಹಾಗೂ ಆ ವಿಭಾಗದ ಸಿಬ್ಬಂದಿಗಳು ಅಪಾರ ಶ್ರಮ ಮತ್ತು ಆಸಕ್ತಿಯಿಂದ ಎರಡು ದಿನಗಳ ಕಪ್ಪೆಹಬ್ಬವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದರು. ಹಬ್ಬದಲ್ಲಿ ಭಾಗಿಯಾಗಿದ್ದ ಶಿವಮೊಗ್ಗ ಮತ್ತು ಶಿರಸಿ ಅರಣ್ಯ ಕಾಲೇಜು, ಕುವೆಂಪು ವಿವಿ ವ್ಯಾಪ್ತಿಯ ವಿವಿಧ ಕಾಲೇಜುಗಳ ಪರಿಸರ ಮತ್ತು ವನ್ಯಜೀವಿ ಅಧ್ಯಯನಾಸಕ್ತ ವಿದ್ಯಾರ್ಥಿಗಳ ಅನಿಸಿಕೆ ಮತ್ತು ಅಭಿಪ್ರಾಯಗಳಲ್ಲಿ ಕಾರ್ಯಕ್ರಮದ ಸಾರ್ಥಕತೆ ಎದ್ದು ಕಾಣುತ್ತಿತ್ತು!