• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ರಾಜ್ಯಾದ್ಯಂತ ಭ್ರಷ್ಟ 21 ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಬೆಳ್ಳಂಬೆಳಿಗ್ಗೆ ACB ದಾಳಿ!

Any Mind by Any Mind
June 17, 2022
in ಕರ್ನಾಟಕ
0
ರಾಜ್ಯಾದ್ಯಂತ ಭ್ರಷ್ಟ 21 ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಬೆಳ್ಳಂಬೆಳಿಗ್ಗೆ ACB ದಾಳಿ!
Share on WhatsAppShare on FacebookShare on Telegram

ರಾಜ್ಯದ ಅನೇಕ ಭಾಗಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ACB ) ಶುಕ್ರವಾರ ಬೆಳ್ಳಂಬೆಳಿಗ್ಗೆ ದಾಳಿಗಳನ್ನು ನಡೆಸುವ ಮೂಲಕ ಭ್ರಷ್ಟರಿಗೆ ಶಾಕ್ ನೀಡಿದೆ.

ADVERTISEMENT

ಎಸಿಬಿ ಅಧಿಕಾರಿಗಳು ಸಂಪೂರ್ಣ ಮಾಹಿತಿಯೊಂದಿಗೆ ರಾಜ್ಯಾದ್ಯಂತ ದಾಳಿಯನ್ನು ನಡೆಸಿ 21 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 80 ಕಡೆಗಳಲ್ಲಿ ದಾಳಿಯನ್ನು ನಡೆಸಿದ್ದಾರೆ. 300 ಕ್ಕೂ ಹೆಚ್ಚು ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದ ಭ್ರಷ್ಟ ತಿಮಿಂಗಿಲಗಳು ತಿಂದಿರೋದು ಎಷ್ಟು ಎಂದು ಶೋಧಿಸುತ್ತಿದ್ದಾರೆ.

ACB ದಾಳಿಯ ಲಿಸ್ಟ್!

1. ಭೀಮ ರಾವ್ ವೈ ಪವಾರ್, ಸೂಪರಿಡಿಟೆಂಟ್ ಇಂಜಿನಿಯರ್ ಬೆಳಗಾವಿ

2. ಹರೀಶ್, ಸಹಾಯಕ ಅಭಿಯಂತರರು, , ಸಣ್ಣ ನೀರಾವರಿ , ಉಡುಪಿ

3. ರಾಮಕೃಷ್ಣ ಎಚ್. ವಿ , ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಹಾಸನ

4. ರಾಜೀವ್ ಪುರಸಯ್ಯ ನಾಯಕ್, ಸಹಾಯಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಕಾರವಾರ

5. ಬಿ. ಆರ್. ಬೋಪಯ್ಯ, ಕಿರಿಯ ಅಭಿಯಂತರರು, ಪೊನ್ನಂ ಪೇಟೆ ಜಿಲ್ಲಾ ಪಂಚಾಯತ್,

6. ಮಧುಸೂದನ್, ಜಿಲ್ಲಾ ರಿಜಸ್ಟರ್, ಐಜಿಆರ್ ಕಚೇರಿ, ಬೆಳಗಾವಿ

7. ಪರಮೇಶ್ವರಪ್ಪ, ಸಹಾಯಕ ಅಭಿಯಂತರರು, ಸಣ್ಣ ನೀರಾವರಿ, ಹೂವಿನಡಗಲಿ

8. ಯಲ್ಲಪ್ಪ ಎನ್ ಪದಸಾಲಿ, ಆರ್‌ಟಿಒ, ಬಾಗಲಕೋಟೆ

9. ಶಂಕರಪ್ಪ ನಾಗಪ್ಪ ಗೋಗಿ, ಯೋಜನ ನಿರ್ದೇಶಕರು, ನಿರ್ಮಿತಿ ಕೇಂದ್ರ, ಬಾಗಲಕೋಟೆ

10. ಪ್ರದೀಪ್ ಎಸ್ ಆಲೂರು, ಪಂಚಾಯಿತಿ ಗ್ರೇಡ್ ಕಾರ್ಯದರ್ಶಿ, ಆರ್‌ಡಿಪಿಆರ್, ಗದಗ

11. ಸಿದ್ದಪ್ಪ ಟಿ, ಉಪ ಮುಖ್ಯ ಎಲೆಕ್ಟ್ರಿಕಲ್ ಅಧಿಕಾರಿ, ಬೆಂಗಳೂರು

12. ತಿಪ್ಪಣ್ಣ ಪಿ ಸಿರಸಂಗಿ, ಜಿಲ್ಲಾ ಕಾರ್ಯಕ್ರಮ ಅಧಿಕಾರಿ, ಬೀದರ್

13.ಮೃತ್ಯುಂಜಯ ಚನ್ನಬಸಯ್ಯ ತಿರಣಿ, ಸಹಾಯಕ ಕಂಟ್ರೋಲರ್, ಕರ್ನಾಟಕ ವೆಟೆರ್ನಿಟಿ, ಅನಿಮಲ್ ಮತ್ತು ಫಿಷರಿ ಸೈನ್ಸ್ ಯೂನಿವರ್ಸಿಟಿ, ಬೀದರ್

14. ಮೋಹನ್ ಕುಮಾರ್, ಕಾರ್ಯನಿರ್ವಾಹಕ ಅಭಿಯಂತರರು, ನೀರಾವರಿ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲೆ.

15.ಶ್ರೀಧರ್, ಜಿಲ್ಲಾ ರಿಜಿಸ್ಟರ್, ಕಾರವಾರ

16. ಮಂಜುನಾಥ್ ಜಿ, ನಿರ್ವೃತ್ತ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ

17. ಶಿವಲಿಂಗಯ್ಯ, ಗ್ರೂಪ್ ಸಿ ನೌಕರ, ಬಿಡಿಎ

18. ಉದಯ ರವಿ, ಪೊಲೀಸ್ ಇನ್ಸ್ಪೆಕ್ಟರ್, ಕೊಪ್ಪಳ

19.ಬಿ.ಜಿ. ತಿಪ್ಪಯ್ಯ, ಕೇಸ್ ವರ್ಕರ್, ಕುದೂರು ಪುರಸಭೆ.

20. ಚಂದ್ರಪ್ಪ ಸಿ. ಹೊಳೆಕಾರ್, ಯುಟಿಪಿ, ಅಧಿಕಾರಿ, ರಾಣಿಬೆನ್ನೂರು.

21.ಜನಾರ್ಧನ್, ನಿವೃತ್ತ, ರಿಜಿಸ್ಟರ್ ಭೂ ಮೌಲ್ಯಮಾಪಕರು, ಬೆಂಗಳೂರು.

ಬೆಂಗಳೂರಿನ ನಿವೃತ್ತ ಸೂಪರಿಡೆಂಟೆಂಟ್ ಇಂಜಿನಿಯರ್ ಮಂಜುನಾಥ್ ಎಂಬುವರ ಮನೆ ಮೇಲೆ ಶುಕ್ರವಾರ ಬೆಳ್ಳಂಬೆಳಗ್ಗೆ ದಾಳಿ ಮಾಡಿರುವ ACB (ಭ್ರಷ್ಟಾಚಾರ ನಿಗ್ರಹ ದಳ) ಅಧಿಕಾರಿಗಳು ಜಯನಗರದ 9 ನೇ ಬ್ಲಾಕ್ ಒಂದರಲ್ಲೇ ಅಂದಾಜು 20 ಕೋಟಿ ಮೌಲ್ಯದ ಚೈತನ್ಯ ಗೋಲ್ಡ್ ಹೆಸರಿನಲ್ಲಿರುವ ವಾಣಿಜ್ಯ ಕಟ್ಟಡ ಅವರ ಹೆಸರಿನಲ್ಲಿರುವುದನ್ನು ಪತ್ತೆ ಹಚ್ಚಿದ್ದಾರೆ.

ನಿವೃತ್ತ ಸೂಪರಿಡೆಂಟೆಂಟ್ ಇಂಜಿನಿಯರ್ ಮಂಜುನಾಥ್, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸಿಬ್ಬಂದಿಯನ್ನು ಹೆದರಿಸಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿರುವ ಬಗ್ಗೆ ಹಾಗೂ ಮಂಜುನಾಥ್ ಕರ್ತವ್ಯದಲ್ಲಿದ್ದಾಗ ಪಿಂಚಣಿ ಪಡೆದು ಎಸಗಿರುವ ಅಕ್ರಮದಿಂದ 20 ಕೋಟಿ ರೂ.ಗೂ ಅಧಿಕ ಆಸ್ತಿ ಸಂಪಾದನೆ ಮಾಡಿರುವ ಬಗ್ಗೆ ತನಿಖೆ ನಡೆಸಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕ್ರಮ ಜರುಗಿಸಲು ಕೋರಿ ಈ ಹಿಂದೆಯೇ ಎಸಿಬಿಗೆ ದೂರು ದಾಖಲಾಗಿತ್ತು.

ಬಾಗಲಕೋಟೆ ಜಿಲ್ಲೆಯ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಶಂಕರಲಿಂಗ ಗೋಗಿ ಅವರ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ನವನಗರದ 55ನೇ ಸೆಕ್ಟರ್‌ನ ಮನೆ ಮೇಲೆ ಶುಕ್ರವಾರ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು. ಗೋಗಿ ಅವರ ಸಂಬಂಧಿಕರ ಮನೆಗಳಲ್ಲೂ ತಪಾಸಣೆ ನಡೆಸಲಾಗುತ್ತಿದೆ.

ಗದಗ ಜಿಲಗಲೆಯ ಗ್ರಾಮ ಪಂಚಾಯತಿ ಗ್ರೇಟ್ 2 ಸೆಕ್ರೆಟರಿ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದಾರೆ. ಪ್ರದೀಪ್ ಆಲೂರು ಎನ್ನುವರ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದ್ದು, ಅಸುಂಡಿ ಪಂಚಾಯ್ತಿಯಲ್ಲಿ ಗ್ರೆಡ್ 2 ಸೆಕ್ರೆಟರಿ ಆಗಿ ಪ್ರದೀಪ್ ಆಲೂರು ಕಾರ್ಯನಿರ್ವಹಿಸುತ್ತಿದ್ದಾರೆ.

Tags: ACBBJPCongress PartyCovid 19ಕೋವಿಡ್-19ನರೇಂದ್ರ ಮೋದಿಬಿಜೆಪಿಸರ್ಕಾರಿ ಅಧಿಕಾರಿ
Previous Post

ಕೈಗಾರಿಕಾ ಇಲಾಖೆಯಿಂದ ಸಿಹಿ ಸುದ್ದಿ :  81 ಹೊಸ ಯೋಜನೆಗಳಿಗೆ 2,689.51 ಕೋಟಿ ರೂ. ಅನುಮೋದನೆ!

Next Post

ಕಾಂಗ್ರೆಸ್ ಪ್ರತಿಭಟನೆ ಒಂದು ರೀತಿಯ ಗೂಂಡಾಗಿರಿ : ಕೆ. ಎಸ್. ಈಶ್ವರಪ್ಪ

Related Posts

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ
ಕರ್ನಾಟಕ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

by ಪ್ರತಿಧ್ವನಿ
April 11, 2026
0

ಕುಂದಾಪುರ: ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಂದಿನ ಶೈಕ್ಷಣಿಕ ವರ್ಷದಿಂದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಶಿಕ್ಷಕರ ಜೊತೆಗೂಡಿ ಎಐ (Artificial Intelligence)...

Read moreDetails
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
Next Post
ಮಸೀದಿ ಕಟ್ಟಲು 36,000 ದೇವಾಲಯಗಳನ್ನು ಧ್ವಂಸಗೊಳಿಸಲಾಗಿದೆ : ಕೆ. ಎಸ್. ಈಶ್ವರಪ್ಪ

ಕಾಂಗ್ರೆಸ್ ಪ್ರತಿಭಟನೆ ಒಂದು ರೀತಿಯ ಗೂಂಡಾಗಿರಿ : ಕೆ. ಎಸ್. ಈಶ್ವರಪ್ಪ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada