ಬೆಂಗಳೂರು:ಶೂಟಿಂಗ್‌ಗೆ ಡ್ರೋಣ್ ಬಾಡಿಗೆ ಪಡೆದು ಜಮೀರ್ ಪುತ್ರನ ವಂಚನೆ, ಬಡ ಟೆಕ್ನಿಶಿಯನ್‌ಗೆ ಆದ ನಷ್ಟಕ್ಕೆ ಮಾತೆತ್ತದ ಚಿತ್ರರಂಗ!
ಜಮೀರ್ ಅಹ್ಮದ್ ಖಾನ್ ಪುತ್ರ ಜೈದ್ ಖಾನ್ ನಟನೆಯ ಕಲ್ಟ್ ಸಿನಿಮಾದ ಶೂಟಿಂಗ್‌ಗೆ ಡ್ರೋಣ್ ಕ್ಯಾಮೆರಾ ಬಾಡಿಗೆ ಪಡೆದುಕೊಂದು ಅದನ್ನು ಹಾಳು ಮಾಡಿದ್ದಲ್ಲದೆ, ನಷ್ಟ ತುಂಬಿಕೊಡಲು ಚಿತ್ರತಂಡ ಒಪ್ಪಿಲ್ಲ. ಇದರಿಂದ ನೊಂದ ಡ್ರೋಣ್ ಕ್ಯಾಮೆರಾಮೆನ್ ಸಂತೋಷ್ ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ನಡೆದಿದೆ. ಸಿನಿಮಾ ಶೂಟಿಂಗ್‌ಗೆ ಬಳಸಲಾಗಿದ್ದ ಡ್ರೋಣ್ ವಿಂಡ್ ಮಿಲ್‌ಗೆ ತಾಗಿತ್ತು. ಇದರಿಂದ ಕ್ಯಾಮೆರಾ ಪೀಸ್ ಪೀಸ್ ಆಗಿದೆ. ಆಗಿರುವ ನಷ್ಟ ತುಂಬಿಕೊಡುವಂತೆ ಮನವಿಗೆ ಚಿತ್ರತಂಡ ಸ್ಪಂದಿಸಿಲ್ಲ.
ನ.25 ರಂದು ಚಿತ್ರದುರ್ಗದಲ್ಲಿ ಕಲ್ಟ್ ಚಿತ್ರತಂಡ ಶೂಟಿಂಗ್ ನಡೆಸಿತ್ತು. ಇದಕ್ಕೆ ಸಂತೋಷ್ ಡ್ರೋನ್ ಟೆಕ್ನಿಷಿಯನ್ ಆಗಿದ್ದರು. ಸ್ವಂತ ಡ್ರೋನ್ ಹೊಂದಿರುವ ಸಂತೋಷ್ ಹಲವು ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ದಿನಕ್ಕೆ 25 ಸಾವಿರ ಚಾರ್ಜ್ ಮಾಡಿ ಸಂತೋಷ್ ಶೂಟಿಂಗ್ ಮಾಡುತ್ತಿದ್ದರು. 25 ಲಕ್ಷ ಸಾಲ ಮಾಡಿ ಸಂತೋಷ್ ಡ್ರೋಣ್ ಖರೀದಿಸಿದ್ದರು.