
ರಾಜ್ಯದಲ್ಲಿ ಮಕ್ಕಳ ಸಾವಿನ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಸಣ್ಣ ಸಣ್ಣ ಮಕ್ಕಳು ಹೃದಯಾಘಾತಕ್ಕೆ (Children have heart attacks)ಸಾವನ್ನಪ್ಪುತ್ತಿರುವುದು ಆತಂಕಕ್ಕೆ ಕಾರಣವಾಗವಿದೆ.ಆಡೋ ಮಕ್ಕಳಲ್ಲೇ ಹೆಚ್ಚಾಗುತ್ತಿದೆ ಹೃದಯಾಘಾತ ಪೋಷಕರೇ ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ..ಕಳೆದೊಂದು ವಾರದಲ್ಲಿ ನಾಲ್ವರು ಮಕ್ಕಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಹಾಸನ ಜಿಲ್ಲೆ ಆಲೂರಿನ ಚನ್ನಾಪುರದಲ್ಲಿ 11 ವರ್ಷದ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. 5ನೇ ತರಗತಿ ಓದುತ್ತಿದ್ದ 11 ವರ್ಷದ ಬಾಲಕ ಸಚಿನ್, ಚನ್ನಾಪುರದ ಕಾವ್ಯಶ್ರೀ ಎಂಬುವವರ ಮಗ. ಶುಕ್ರವಾರ ಶಾಲೆಗೆ ಹೋಗದೆ ಮನೆಯಲ್ಲಿ ಟಿವಿ ನೋಡುತ್ತಿದ್ದಾಗ ಏಕಾಏಕಿ ಎದೆನೋವು ಕಾಣಿಸಿಕೊಂಡಿತ್ತು. ಆ ಬಳಿಕ ಮತ್ತೊಮ್ಮೆ ಎದೆನೋವು ಬಂದಿದ್ದು, ಬಾಲಕ ಕುಳಿತಲ್ಲಿಯೇ ಸಾವನ್ನಪ್ಪಿದ್ದ. ಸ್ವಲ್ಪ ಸಮಯದ ನಂತರ ಸಚಿನ್‌ನನ್ನು ಮಾತನಾಡಿಸಲು ಬಂದಾಗ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಆಲೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಾಗ ಪರೀಕ್ಷೆ ನಡೆಸಿದ ವೈದ್ಯರು ಮೃತಪಟ್ಟಿರುವುದನ್ನು ದೃಢ ಪಡಿಸಿದ್ದಾರೆ.

ರಾಯಚೂರಿನಲ್ಲಿ ವಾರದಲ್ಲೇ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಸೆಪ್ಟೆಂಬರ್ 10ರಂದು ಸಿರವಾರದಲ್ಲಿ 14 ವರ್ಷದ ತರುಣ್ ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ರೆ, ಸೆಪ್ಟೆಂಬರ್ 20 ರಂದು ಸಿರವಾರದ ಕವಿತಾಳದಲ್ಲಿ 11 ವರ್ಷದ ಶಿವಪ್ರಸಾದ್ ಎಂಬಾತ ಅಸುನೀಗಿದ್ದನು. ಮೊದಲಿಗೆ ಲೋ ಬಿಪಿಯಿಂದ ಸಾವು ಎನ್ನಲಾಗಿತ್ತು. ಆ ಬಳಿಕ ಹೃದಯಾಘಾತ ಎನ್ನುವುದನ್ನು ಖಚಿತ ಮಾಡಿದ್ದಾರೆ. ಇನ್ನು ಶಿವಮೊಗ್ಗದಲ್ಲಿ MBBS student)ವಿದ್ಯಾರ್ಥಿ ವಾಕಿಂಗ್ ಮಾಡುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. 20 ವರ್ಷದ ಪೃಥ್ವಿರಾಜ್ ಹೃದಯಾಘಾತದಿಂದ ಸಾವನ್ನಪ್ಪಿದ ವಿದ್ಯಾರ್ಥಿ.
ರಾಯಚೂರಿನಲ್ಲಿ 5ನೇ boy) ತರಗತಿ ಬಾಲಕ ಕೋಚಿಂಗ್ ಸೆಂಟರ್‌ನಲ್ಲಿ ಕುಸಿದು ಬಿದ್ದ ಕೂಡಲೇ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದರು.ಆದರೆ ಮಾರ್ಗ ಮಧ್ಯದಲ್ಲೇ ವಿದ್ಯಾರ್ಥಿ ಶಿವಪ್ರಸಾದ್ ಸಾವನ್ನಪ್ಪಿದ್ದಾನೆ. ದೇವದುರ್ಗ ತಾಲೂಕಿನ ಗಬ್ಬೂರ್ ಗ್ರಾಮದಲ್ಲಿ ಘಟನೆ ನಡೆದಿದೆ. ಇನ್ನು ರಾಯಚೂರು ಜಿಲ್ಲೆ ಸಿರವಾರ ಪಟ್ಟಣದ ತರಗತಿಯಲ್ಲೇ ವಿದ್ಯಾರ್ಥಿ ತರುಣ್ ಕುಸಿದು ಬಿದ್ದಿದ್ದನು. ಆಗ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆಸ್ಪತ್ರೆಗೆ ಬರುವ ಮಾರ್ಗ ಮಧ್ಯೆಯೇ ತರುಣ್ ಸಾವನ್ನಪ್ಪಿದ್ದನು.
ಮಕ್ಕಳಲ್ಲಿ ಹೃದಯಾಘಾತ ಆಗುತ್ತಿದ್ದು, ಲಕ್ಷಣಗಳು ಏನು ಅನ್ನೋದನ್ನು ನೋಡೋದಾದರೆ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪುವುದು, ಮಕ್ಕಳಲ್ಲಿ ಆಯಾಸ ಹೆಚ್ಚಾಗೋದು. ಎದೆಯಲ್ಲಿ ನೋವು ಕಾಣಿಸೋದು. ಅನಿಯಮಿತ ಉಸಿರಾಟ ಸಮಸ್ಯೆ. ಅತಿಯಾದ ಹೃದಯ ಬಡಿತ ಕಾಣಿಸಿಕೊಳ್ತಿದೆ. ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಏನು ಅಂದ್ರೆ ಮಕ್ಕಳನ್ನ ಮನೆಯಲ್ಲಿ ಒಂಟಿಯಾಗಿ ಕೂಡಿಹಾಕಬಾರದು. ಹೆಚ್ಚಾಗಿ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿ. ಔಟ್‌ಡೋರ್ ಆಟಗಳಿಗೆ ಆದ್ಯತೆ ನೀಡುವುದು, ಟೈಮ್ ಟೈಮ್‌ಗೆ ಆಹಾರ, ನಿದ್ದೆ ಮಾಡುವುದನ್ನು ರೂಢಿ ಮಾಡುವುದು, ಪ್ರೋಟೀನ್, ಫೈಬರ್, ಖನಿಜ ಇರುವ ಆಹಾರ ನೀಡಬೇಕು. ಹೆಚ್ಚು ನೀರು ಕುಡಿಯುವಂತೆ ನೋಡಿಕೊಳ್ಳುವುದು ಸೂಕ್ತ