ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಹೀತ್ ಸ್ಪೀಕ್ ಬುಧವಾರ (ಆಗಸ್ಟ್ 23) ನಿಧನರಾಗಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು.
ನಾಲೈದು ವರ್ಷಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ದಕ್ಷಿಣ ಆಫ್ರಿಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ಅವರ ಕುಟುಂಬದವರು ಖಚಿತಪಡಿಸಿದ್ದಾರೆ.
ಹೀತ್ ಸ್ಟಿಕ್ ನಿಧನಕ್ಕೆ ಜಿಂಬಾಳ್ವೆ ಕ್ರಿಕೆಟಿಗರಾದ ಎನ್ರಿ ಓಲಾಂಗ, ಸೀನ್ ವಿಲಿಯಮ್ಸ್ ಅವರು ಸಂತಾಪ ಸೂಚಿಸಿದ್ದಾರೆ. ಅವರ ಅಭಿಮಾನಿಗಳು ಸೇರಿದಂತೆ ವಿವಿಧ ದೇಶಗಳ ಕ್ರಿಕೆಟಿಗರು ಕೂಡ ಕಂಬನಿ ಮಿಡಿದಿದ್ದಾರೆ.
ಸ್ಟೀಕ್ ಜಿಂಬಾಬೈ ಪರ 65 ಟೆಸ್ಟ್, 189 ಏಕದಿನ ಪಂದ್ಯಗಳನ್ನು ಆಡಿದ್ದರು. ಈ ಎರಡು ಮಾದರಿಯಲ್ಲಿ ಅವರು 4,933 ರನ್ ಹಾಗೂ 455 ವಿಕೆಟ್ ಪಡೆದಿದ್ದರು.
ಈ ಹಿಂದೆ ಬಾಂಗ್ಲಾದೇಶ ಕ್ರಿಕೆಟ್ ತಂಡದ ತರಬೇತುದಾರರಾಗಿಯೂ ಹೀತ್ ಸ್ಟೀಕ್ ಕೆಲಸ ಮಾಡಿದ್ದರು.