ಮಾಜಿ ಸಂಸದ(Former MP) ಮುದ್ದಹನುಮೇಗೌಡ ಕಾಂಗ್ರೆಸ್(Congress) ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಫೆ.22ರ ಗುರುವಾರ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಗುರುವಾರ ಸಂಜೆ 4 ಗಂಟೆಗೆ ಕೆಪಿಸಿಸಿ(KPCC) ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುದ್ದಹನುಮೇಗೌಡ, ಬಿಜೆಪಿ(BJP)ಗೆ ಗುಡ್ ಬೈ(Goodbye) ಹೇಳಿ ” ಕೈ” ಹಿಡಿಯಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar), ಸಿಎಂ ಸಿದ್ದರಾಮಯ್ಯ(Siddaramaiah), ಸಚಿವರಾದ ಜಿ.ಪರಮೇಶ್ವರ್, ಕೆ ಎನ್ ರಾಜಣ್ಣ ಸಮ್ಮುಖದಲ್ಲಿ ಸೇರ್ಪಡೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಬಿಜೆಪಿ ಸೇರಿದ್ದ ಮುದ್ದಹನುಮೇಗೌಡ., 2023ರ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಯಲ್ಲೂ ಟಿಕೆಟ್ ವಂಚಿತರಾಗಿದ್ದರು. ಈಗ ಮತ್ತೇ ಮಾತೃಪಕ್ಷದತ್ತ ಮುಖ ಮಾಡಿದ್ದಾರೆ.
#Tumkur #Congress #Muddahanumegowda #KPCC #BJPKarnataka
ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ಕಾರು ಖರೀದಿಸುವ ಮುನ್ನ ಈ ವಿಷಯ ನೆನಪಿನಲ್ಲಿಡಿ..
ಅಟೋ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳು ಭರ್ಜರಿ ಆಗಿ ಮಾರಾಟ ಕಾಣುತ್ತಿದೆ. ಆದರೆ ಎಲೆಕ್ಟ್ರಿಕ್ ಕಾರುಗಳ ಬೆಲೆ ಕೂಡ ತುಂಬಾ ದುಬಾರಿಯಾಗಿದೆ. ಈ ಕಾರಣದಿಂದಾಗಿಯೇ ಈಗ ಹಳೆಯ ಸೆಕೆಂಡ್...
Read moreDetails